ಇಂಡಿ

ಇಂಡಿ ಟಿಎಪಿಸಿಎಮ್‌ಎಸ್ ವಾರ್ಷಿಕ ಸರ್ವ ಸಾಧಾರಣ ಸಭೆ

ಇಂಡಿ ಟಿಎಪಿಸಿಎಮ್‌ಎಸ್ ವಾರ್ಷಿಕ ಸರ್ವ ಸಾಧಾರಣ ಸಭೆ

ಇಂಡಿ 20: ನಮ್ಮದು ರೈತ, ರೈತರಿಗಾಗಿ, ರೈತಗೊಸ್ಕರ ಸದಾ ಚಿಂತನೆ ಮಾಡುವ ಸಂಘವಾಗಿದೆ ಎಂದರೆ ತಪ್ಪಾಗಲಾರದು. ರೈತರಿಂದ ಆರಂಭವಾಗಿ ಸುದೀಘಈ ಇತಿಹಾಸ ಹೊಂದಿರುವ ಸಹಕಾರಿ ಸಂಘ ನಮ್ಮದು. ಸಾಕಷ್ಟು ಏರಿಳಿತ ಕಂಡಿದೆ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ಪರಿಶ್ರಮದಿಂದ, ನಿಸ್ವಾರ್ಥ ಸೇವೆಯಿಂದ ಬೃಹತ್ ಸಂಘವಾಗಿ ಬೆಳೆದು ನಿಂತಿದೆ ಎಂದು ಸಂಘದ ಅಧ್ಯಕ್ಷ ಬಿ ಬಿ ಗುಡ್ಡದ ಅವರು ಹೇಳಿದರು.ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ ಇಂಡಿ ಇವರ ಸನ್ 2023-24 ನೇ ಸಾಲಿನ 70 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ನಾವು ಈ ಬಾರಿ ಒಂದು ಸುಸಜ್ಜಿತ ನೂತನ ಕಟ್ಟಡ ಕಟ್ಟುತ್ತಿದ್ದೆವೆ. ಕಾಮಗಾರಿ ಪ್ರಗತಿಯಲ್ಲಿ ಇದ್ದು ಶೀಘ್ರದಲ್ಲೇ ಪೂರ್ಣಗೊಂಡು ಲೋಕಾರೆ​‍್ಣ ಆಗಲಿದೆ. ಇದು ರೈತರ ಸಂಘವಾಗಿದ್ದರಿಂದ ನಮ್ಮ ಸಂಘದಿಂದ ರೈತರಿಗೆ ರಸಗೊಬ್ಬರ ಸೂಕ್ತ ದರದಲ್ಲಿ ಕೊಡುತ್ತಿದ್ದೆವೆ. ಎಲ್ಲಾ ರೈತರು ರಸಗೊಬ್ಬರವನ್ನು ನಮ್ಮ ಸಂಘದಲ್ಲಿ ಖರೀದಿಸಿದರೆ ಸಂಘಕ್ಕೆ ಇನ್ನಷ್ಟು ಲಾಭವಾಗುತ್ತದೆ. ಆದ್ದರಿಂದ ರೈತರು ಇತರೇ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಖರೀದಿಸದೆ, ನಮ್ಮ ಸಂಘದಲ್ಲಿ ಸೂಕ್ತ ಬೆಲೆಯಲ್ಲಿ ರಸಗೊಬ್ಬರ ಖರೀದಿಸಬೇಕು ಎಂದು ಮನವಿ ಮಾಡಿದರು.ಮುಂದಿನ ದಿನಗಳಲ್ಲಿ ನಮ್ಮ ಸಂಘದಿಂದ ಕೀಟನಾಶಕ ಓಷಧಿಗಳನ್ನು ಮಾರಾಟ ಮಾಡಿ ರೈತರಿಗೆ ಮಾದರಿ ಆಗಬೇಕು ಹಾಗೂ ಇನ್ನೂ ಅನೇಕ ಪರಿಕಲ್ಪನೆ ಇಟ್ಟುಕೊಂಡಿದ್ದೇನೆ ನನಗೆ ಅನೇಕ ಕೆಲಸ ಮಾಡುವ ಚಿಂತನೆ ಇದೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಕಾವಿ ಅವರು 2023-24 ನೇ ಸಾಲಿನ ಆಯ್ಯ-ವ್ಯಯ ವನ್ನು  ಓದಿದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಬೀದರಕೊಟಿ, ಸೇರಿದಂತೆ ಅನೇಕರು ಮಾತನಾಡಿದರು.ರೈತರಾದ ಕಲ್ಲಪ್ಪ ಘಂಟಿ, ಮಾದೇವಪ್ಪ ಬಿರಾದಾರ ಸೇರಿದಂತೆ ಅನೇಕ ರೈತರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗುರುನಾಥ ಮೇತ್ರಿ, ಶಿವನಗೌಡ ಪಾಟೀಲ, ರಾಜೇಂದ್ರ ಪಾಟೀಲ, ಮಲ್ಲಪ್ಪ ಗುಡ್ಲ, ಬಸವರಾಜ ಲವಗಿ, ಮಲ್ಲಪ್ಪ ಬೋಸಗಿ, ಲಕ್ಷ್ಮಣ ಲಮಾಣಿ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮಾದೇವಪ್ಪ ಪೂಜಾರಿ, ಲೆಕ್ಕಿಗ ಕೃಷ್ಣಾಜಿ ಕುಲಕರ್ಣಿ, ಶಾಖಾ ಕಾರ್ಯದರ್ಶಿ ಪ್ರದೀಪ ಮಠ, ದ್ವಿತೀಯ ದರ್ಜೆ ಸಹಾಯಕ ಗಂಗಾಧರ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ