ಜಮಖಂಡಿ

ನೂತನ ಪಂಚಗ್ಯಾರಂಟಿ ಯೋಜನೆ ಕಚೇರಿಯ ಕಾರ್ಯಾಲಯ ಉದ್ಘಾಟನೆ

ನೂತನ ಪಂಚಗ್ಯಾರಂಟಿ  ಯೋಜನೆ ಕಚೇರಿಯ ಕಾರ್ಯಾಲಯ ಉದ್ಘಾಟನೆ

ಜಮಖಂಡಿ 11:  ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಪಂಚಯೋಜನೆಗಳನ್ನು ಜಾರಿಗೆ ತಂದು ಬಡಜನತೆಗೆ ಸಾಕಷ್ಟು ಅನುಕೂಲತೆಯನ್ನು ಮಾಡಿದೆ, ನುಡಿದಂತೆ ನಡೆದ ಸರಕಾರ ಯಾವುದಾರು ಇದ್ದರೆ, ಅದು ಕಾಂಗ್ರೇಸ್ ಸರಕಾರ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ತಾಲೂಕ ಪಂಚಾಯತ ಕಟ್ಟಡದಲ್ಲಿ ನೂತನ ಪಂಚಗ್ಯಾಂಟಿ ಯೋಜನೆ ಕಚೇರಿಯ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು.ಜಿಲ್ಲೆಯಲ್ಲಿ ತಾಲೂಕಾ ಮಟ್ಟದಲ್ಲಿ ಮೊಟ್ಟಮೊದಲ ಬಾರಿಗೆ ನಮ್ಮ ತಾಲೂಕಿನಲ್ಲಿ ಉದ್ಘಾಟನೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ. ರಾಜ್ಯದಲ್ಲಿ ಚುನಾವಣೆ ಪೂರ್ವದಲ್ಲಿ ಆಶ್ವಾಸನೆಯನ್ನು ನೀಡಿತು. ಅದರಂತೆ ಇವಾಗ 58 ಸಾವಿರ ಕೋಟಿ ಖರ್ಚು ಮಾಡಿ ಯೋಜನೆಗಳನ್ನು ಜಾರಿಗೆ ತಂದಿದೆ. 117ಲಕ್ಷ ಕೋಟಿ ಖರ್ಚು ಮಾಡಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ, ಶಕ್ತಿ ಯೋಜನೆ 229 ಮಹಿಳೆಯರು ಪ್ರಯಾಣ ಮಾಡಿದ್ದಾರೆ, 5,500 ಕೋಟಿ ಖರ್ಚು ಮಾಡಿದೆ, 5,419 ಕುಟುಂಬಕ್ಕೆ ಉಚಿತ ಗೃಹಜೋತಿಯನ್ನು ನೀಡಲಾಗಿದೆ, ಯುವ ನಿಧಿ ಯೋಜನೆಯಲ್ಲಿ 1.ಲಕ್ಷ 20 ಸಾವಿರ ಯುವಕರಿಗೆ 38ಕೋಟಿ 55 ಲಕ್ಷ ಖರ್ಚು ಮಾಡಲಾಗಿದ್ದು. ಇದರಿಂದ ರಾಜ್ಯದ ಜನತೆಗೆ ಅನುಕೂಲತೆಯನ್ನು ಮಾಡಿದೆ. ಪ್ರತಿ ದಿನ 30ಲಕ್ಷ ಜನ ಶಕ್ತಿಯೋಜನೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಜಮಖಂಡಿ ತಾಲೂಕಿನಲ್ಲಿ ಪ್ರತಿ ದಿನ 9ಲಕ್ಷ ಜನ ಶಕ್ತಿ ಯೋಜನೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಯೋಜನೆ ಮಾಡಿ. ಬಡವರಿಗೆ ಅನುಕೂಲ ಮಾಡಿದೆ. ರಾಜ್ಯದ ಜನತೆಗೆ ಒಂದು ಒಳ್ಳೆಯ ಆಡಳಿತವನ್ನು ನಡೆಸುತ್ತಿದೆ. ಉಳಿದ ಯೋಜನೆಗಳನ್ನು ಅತೀ ಕಡು ಬಡುತನ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುವ ಉದೇಶದಿಂದ ಇಂದು ಪಂಚಗ್ಯಾರೆಂಟಿ ಯೋಜನೆಯ ಕಾರ್ಯಾಲಯವನ್ನು ಉದ್ಘಾಟಿಸಲಾಗಿದ್ದು. ಪಂಚಗ್ಯಾರೆಂಟಿ ಯೋಜನೆಯಲ್ಲಿ ಹದಿನಾರು ಜನರ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು. ಸಮಿತಿಯ ಅಧ್ಯಕ್ಷರು ಹಗೂ ಸದಸ್ಯರು ಸೇರಿಕೊಂಡು ಸರಕಾರದ ಯೋಜನೆಗಳು ಯಾರಿಗೆ ತಲುಪಿಲ್ಲ. ಅಂತವರಿಗೆ ತಲಿಪಿಸುವ ಕಾರ್ಯವನ್ನು ಮಾಡಬೇಕೆಂದು ಸಲಹೆಯನ್ನು ನೀಡಿದರು.  

ಮಾಜಿ ಭೂಸೇನಾ ನಿಗಮ ಅಧ್ಯಕ್ಷ ಶ್ರೀಶೈಲ ದಳವಾಯಿ, ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಹಿರಿಯ ಮುಖಂಡ ಬಿ,ಎಸ್,ಸಿಂಧೂರ ಮಾತನಾಡಿದರು. 

ಪಂಚ ಯೋಜನೆಯ ಗ್ಯಾರಂಟಿ ನೂತನ ಅಧ್ಯಕ್ಷ ಕಲ್ಲಪ್ಪ ಗಿರಡಿ, ಮಾಜಿ ಭೂಸೇನಾ ಅಧ್ಯಕ್ಷ ಶ್ರೀಶೈಲ ದಳವಾಯಿ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ ಬ್ಲಾಕ್ ಕಾಂಗ್ರೇಸ್ ನಗರ ಘಟಕ ಅಧ್ಯಕ್ಷ ಮಹೇಶ ಕೋಳಿ, ಬಿ.ಎಸ್‌.ಸಿಂಧೂರ, ನಗರಸಭೆ ಸದಸ್ಯರಾದ ಸಿದ್ದು ಮೀಶಿ, ಈಶ್ವರ ವಾಳೇನ್ನವರ, ವರ್ಧಮಾನ ನ್ಯಾಮಗೌಡ. ಶ್ಯಾಮರಾವ ಘಾಟಗೆ, ನಗರದ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಮಲ್ಲಪ್ಪ ಚಾಮೋಜಿ, ನಿಂಗಪ್ಪ ಕಡಪಟ್ಟಿ, ಈಶ್ವರ ಕರಬಸನ್ನವರ, ಮಾದೇವ ಪಾಟೀಲ, ಶಶಿ ಗಲಗಲಿ, ರಾಜು ಮೇಲಿನಕೇರಿ, ಅಭಯಕುಮಾರ ನಾಂದ್ರೇಕರ, ಸುಮಿತ್ರಾ ಗುಲಬಾಳ, ಮಾದೇವಿ ಹಬಾವಿ, ಬಸವರಾಜ ನ್ಯಾಮಗೌಡ. ಕಿರಣ ಪಿಸಾಳ, ಪೈಲವಾನ.ರಫೀಕ ಬಾರಿಗಡ್ಡಿ.ಸುನೀಲ ಶಿಂಧೆ  

ಸಿಡಿಪಿಒ. ಹೆಸ್ಕಾಂ. ಆರೋಗ್ಯ. ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ