ಸೌಂದತ್ತಿ

ಆಸ್ಮಾತಾಜ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ಆಸ್ಮಾತಾಜ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ಸವದತ್ತಿ 16: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಜವಾಬ್ದಾರಿಯಾಗಿದ್ದು, ಮಕ್ಕಳ ಉತ್ತಮ ಆರೋಗ್ಯದ ಕಡೆಗೆ ಗಮನ ಹರಿಸುವುರ ಜೊತೆಗೆ ಹಿರಿಯರಾದಂತವರು ಮಕ್ಕಳೊಂದಿಗೆ ಸಮಯ ಕಳೆಯಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಪಟ್ಟಣದ ರಾಮಾಪೂರಸೈಟದಲ್ಲಿರುವ ಆಸ್ಮಾತಾಜ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಅಸ್ಮತಾಜ ಶಿಕ್ಷಣ ಸಂಸ್ಥೆಯು ಈ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಪ್ರಸಂಶನೀವಾಗಿದ್ದು, ಇಂದು ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಹೇಳಿ ನಮ್ಮ ಸಂಸ್ಕೃತಿಯನ್ನು ಉಳಿಸುವದರ ಜೊತೆಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕೆಂದರು. 

ಸಂಸ್ಥೆಯ ಚೇರಮನ್ನರಾದ ಎಚ್‌.ಕೆ.ಯಡೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಆಯಾ ಶಿಕ್ಷಣ ಸಂಸ್ಥೆಗಳು ಬಹುಬೇಗನೆ ಬೇಳೆಯುತ್ತವೆ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವದಾಗಿದ್ದು, ಮಕ್ಕಳು ಆಟವಾಡುತ್ತಾ ಕಲಿಯುವ ವಾತಾವರಣವನ್ನು ನಮ್ಮ ಶಾಲೆಯಲ್ಲಿ ನಿರ್ಮಿಸಲಾಗಿದೆ ಎಂದರು. 

ನಾಡಹಬ್ಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಅತ್ತಿಗೇರಿ, ನ್ಯಾಯವಾದಿ ಎಮ್‌.ಎಮ್‌.ಯಲಿಗಾರ, ದಿಲಾವರ ಸನದಿ, ಎಚ್‌.ಎನ್‌.ನಧಾಫ, ಪ್ರಕಾಶ ಬಾಳೋಜಿ, ಷಾಜಾದಬಿ ಚೂರಿಖಾನ ಉಪಸ್ಥಿತರಿದ್ದರು. 

ಬೀಬೀಜಾನ ಅಲ್ಲಿಮನಿ ನಿರೂಪಿಸಿದರು. ಆಸ್ಮಾತಾಜ ವಂದಿಸಿದರು. 


ಸುದ್ದಿ ಓದಿ