ಅಥಣಿ

ಆದರ್ಶ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ಆದರ್ಶ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ಅಥಣಿ 29: ಪಟ್ಟಣದ ವೈಭವ ನಗರ ಬಡಾವಣೆಯಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ದಿನದಿಂದ ದಿನಕ್ಕೆ ಅಥಣಿ ಪಟ್ಟಣ ವೇಗವಾಗಿ ಬೆಳೆಯತ್ತಿದೆ ಇದರ ಜೊತೆಗೆ ಮಕ್ಕಳಿಗಾಗಿ ಶೈಕ್ಷಣಿಕ ಸಂಸ್ಥೆಗಳು ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿದ್ದು, ರಾವಸಾಹೇಬ ಐಹೊಳೆಯವರ ಆದರ್ಶ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆಯಬೇಕು ಎಂದು ಆಶಿಸಿದರು.  

ಕಾಂಗ್ರೆಸ್ ಮುಖಂಡ ದಿಗ್ವಿಜಯಸಿಂಗ ಪವಾರ ದೇಸಾಯಿ ಮಾತನಾಡಿ ಪುರಸಭಾ ಸದಸ್ಯರಾದ ರಾವಸಾಹೇಬ ಐಹೊಳೆಯವರು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅನುಕೂಲಕ್ಕಾಗಿ ಆದರ್ಶ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.  

ಕಾಂಗ್ರೆಸ್ ಮುಖಂಡ ಎಸ್‌.ಕೆ.ಬುಟಾಳಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಈ ಶಾಲೆಯ ಸದುಪಯೋಗ ಮಾಡಿಕೊಂಡು ವಿದ್ಯಾವಂತರಾಗಬೇಕು ಎಂದು ಕರೆ ನೀಡಿದ ಅವರು ರಾವಸಾಹೇಬ ಐಹೊಳೆ ತಮ್ಮ ಉದ್ಯೋಗದೊಂದಿಗೆ ಶೈಕ್ಷಣಿಕ ಸೇವೆಗೆ ಮುಂದಾಗಿರುವ ಅವರ ಕಾರ್ಯವನ್ನು ಅಭಿನಂದಿಸಿದರು.  

ಸಾನಿಧ್ಯ ವಹಿಸಿ ಮಾತನಾಡಿದ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಆದರ್ಶ ಶಿಕ್ಷಣ ಸಂಸ್ಥೆಯ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.   

ಆದರ್ಶ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡಕ್ಕೆ 1 ಲಕ್ಷ ದೇಣಿಗೆ ನೀಡಿದ ಪುರಸಭಾ ಸದಸ್ಯ ಕಲ್ಲೇಶ ಮಡ್ಡಿ ಇವರನ್ನು ಸಂಸ್ಥೆಯ ಅಧ್ಯಕ್ಷ ರಾವಸಾಹೇಬ ಐಹೊಳೆ ಸತ್ಕರಿಸಿದರು. ವೇದಿಕೆಯಲ್ಲಿ ಧುರೀಣರಾದ ಸಿದ್ಧಾರ್ಥ ಸಿಂಗೆ, ಅನೀಲ ಸುಣಧೋಳಿ, ಆಧರ್ಶ ಶಿಕ್ಷಣ ಸಂಸ್ಥೆಯ ರಾವಸಾಹೇಬ ಐಹೊಳೆ, ವಿದ್ಯಾ ಐಹೊಳೆ,  ಬಂಗಾರೆವ್ವ ಐಹೊಳೆ, ವೈಭವ ಐಹೊಳೆ, ಶಾಲೆಯ ಆಡಳಿತಾಧಿಕಾರಿ ಸತೀಶ ಕುಲಕರ್ಣಿ, ಮುಖ್ಯಾಧ್ಯಾಪಕ ಮಹಾಂತೇಶ ಶಾಬಣ್ಣವರ, ಹಣಮಂತ ಮಾಂಗ ಉಪಸ್ಥಿತರಿದ್ದರು.  

ಪುರಸಭಾ ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಬಸವರಾಜ ಹಳ್ಳದಮಳ, ಬಾಬು ಖೆಮಲಾಪುರ, ರವಿ ಬಡಕಂಬಿ, ಉದಯ ಸೋಳಸಿ, ಆಸೀಫ್ ತಾಂಬೋಳಿ, ವೆಂಕಟೇಶ ದೇಶಪಾಂಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ