ಅಥಣಿ

ಹೊಸ ವರ್ಗ ಕೋಣೆಗಳ, ನೂತನ ಶೌಚಾಲಯದ ಉದ್ಘಾಟನೆ

ಹೊಸ ವರ್ಗ ಕೋಣೆಗಳ, ನೂತನ ಶೌಚಾಲಯದ ಉದ್ಘಾಟನೆ

ಅಥಣಿ 04:  ಶತಮಾನ ಕಂಡ ಜೆ ಇ ಸಂಸ್ಥೆಯ ಜೆ ಎ ಪ ಪೂ ಮಹಾವಿದ್ಯಾಲಯದಲ್ಲಿ ಹೊಸ ವರ್ಗ ಕೋಣೆಗಳ ಹಾಗೂ ನೂತನ ಶೌಚಾಲಯದ ಉದ್ಘಾಟನೆಯನ್ನು ಅಥಣಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿ  ಪ್ರಶಾಂತ್ ಗೌರಾಣಿ ನೆರವೇರಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಥಣಿ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಗೌರಾಣಿ ರಾಜ್ಯದ ಯಾವುದೇ ಮೂಲೆಗೆ ಹೋದರು ನಾನು ಜೆ ಎ ಕಾಲೇಜಿನಲ್ಲಿ ಕಲಿತಿರುವೆ ಎಂದಾಗ ಎಲ್ಲರೂ ಅಭಿಮಾನ ವ್ಯಕ್ತ ಪಡಿಸುತ್ತಾರೆ. ನನ್ನ ವಿದ್ಯಾಸಂಸ್ಥೆ ಇಂದು ಇಷ್ಟೊಂದು ಪ್ರಗತಿ ಹೊಂದಿದ್ದು ಸಂತಸದ ಸಂಗತಿ ಸುಸಜ್ಜಿತವಾದ ವರ್ಗ ಕೋಣೆಗಳು, ಉತ್ತಮ ಪ್ರಾಧ್ಯಾಪಕರು ಒಳ್ಳೆಯ ಆಡಳಿತ ಮಂಡಳಿ ಇವೆಲ್ಲವುಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಾಯ ವಾಗಿವೆ.  ನನಗೆ ವಿದ್ಯೆ ನೀಡಿದ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆ ಎನಿಸಿದೆ . ನಾನು ಜೆ ಎ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿದೆ ಎಂದರು.  

ಸಂಸ್ಥೆಯ ಸಂಚಾಲಕ ಮಂಡಳಿ ಸದಸ್ಯ ಅರವಿಂದ ದೇಶಪಾಂಡೆ ಮಾತನಾಡಿ, ಹೈಟೆಕ್ ಶೌಚಾಲಯಗಳ ಅಷ್ಟೇ ಇದ್ದರೆ ಸಾಲದು ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು. ನಮ್ಮ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾನಿಲಯದ ಮಟ್ಟಕ್ಕೆ ಬೆಳೆಯಬೇಕು ಎಂದು  ಹೇಳಿದರು.     ಕಾರ್ಯಧ್ಯಕ್ಷರಾದ ಡಾ. ರಾಮ ಬಿ ಕುಲಕರ್ಣಿಯವರು ಶತಮಾನ ದಾಟಿದ ನಮ್ಮ ಸಂಸ್ಥೆಯ ಈ ವರ್ಗ ಕೋಣೆಗಳ ಸಮುಚ್ಚಯಕ್ಕೆ ಸೆಂಟೆನರಿ ವಿಂಗ ಎಂದು ಹೆಸರಿಡುವ ದಾಗಿ ಆಶೆಯ ವ್ಯಕ್ತಪಡಿಸಿದರು.  

ಕಾಲೇಜ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಸಂಗೋರಾಮ ಮಾತನಾಡಿ, ಬೆಳವಣಿಗೆ ಪ್ರಗತಿಯ ಸಂಕೇತ ನಮ್ಮಸಂಸ್ಥೆಯಲ್ಲಿ ಇಂದು ಕಂಪ್ಯೂಟರ್ ಹಾಗೂ ಸಂಖ್ಯಾಶಾಸ್ತ್ರ ವಿಭಾಗಗಳನ್ನು ಪರಿಚಯಿಸಿದ್ದೇವೆ .ಅವುಗಳಿಗಾಗಿ ಹೊಸ ವರ್ಗ ಕೋಣೆಗಳ ಅವಶ್ಯಕತೆ ಇತ್ತು, ಹೀಗಾಗಿ ನಾವು ಹೊಸವರ್ಗ ಕೋಣೆಗಳನ್ನು ಇಂದು ವಿದ್ಯಾರ್ಥಿಗಳಿಗೆ ಅರ​‍್ಿಸುತ್ತಿದ್ದೇವೆ. ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ  ಎಮ್‌. ಪಿ. ಮೇತ್ರಿ ಸ್ವಾಗತಿಸಿದರು. ಬಿ ಎಸ್ ಲೋಕೂರ ವಂದಿಸಿದರು. ಡಾ. ಪಿ ಎಮ್ ಹುಲಗಬಾಳಿ ಮತ್ತು ಎಮ್ ಪಿ ಚಿಂಚಣೆ ನಿರೂಪಿಸಿದರು. ಎಸ್‌.ವಿ.ಜೋಶಿ, ವಾಸು ಪಾಟೀಲ, ಎಸ್‌. ಅರ್‌. ಪಾಟೀಲ, ಎನ್‌. ಚಂದ್ರಶೇಖರ, ಡಿ. ಜೆ. ಸಿಂಗೆ, ಎಸ್‌. ವಿ .ದಾಸರೆಡ್ಡಿ, ಸಿ .ಟಿ. ಶಿವಪ್ರಕಾಶ ಹಾಗೂ ಆಡಳಿತ ಮಂಡಳಿ, ಸಾಮಾನ್ಯ ಸಭೆಯ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ