ಅಥಣಿ

ಸಂತ ಬಾಳುಮಾಮಾ ಪೆಟ್ರೋಲ್ ಬಂಕ ಉದ್ಘಾಟನೆ

ಸಂತ ಬಾಳುಮಾಮಾ ಪೆಟ್ರೋಲ್ ಬಂಕ ಉದ್ಘಾಟನೆ

ಅಥಣಿ 25: ದಾದಾ ಶಿಂಧೆ ಮಾಲಿಕತ್ವದ ನೈಯರಾ ಪೆಟ್ರೋಲ ಬಂಕ ಅಥಣಿ ತಾಲೂಕಿನ ಸಂಬರಗಿ, ಜಂಬಗಿ, ಶಿರೂರ, ಖಿಳೇಗಾಂವ ಸೇರಿದಂತೆ ಮಹಾರಾಷ್ಟ್ರ ದ ಕೆಲ ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೆ ಅನಕೂಲವಾಗಲಿದೆ ಎಂದು ಯುವ ಉದ್ಯಮಿ, ಅಥಣಿ ಶುಗರ್ಸ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.   

ಅವರು ಸಂಬರಗಿ ಗ್ರಾಮದಲ್ಲಿ ಸಂತ ಬಾಳುಮಾಮಾ ಪೆಟ್ರೋಲ್ ಬಂಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಣ್ಣ ಪ್ರಮಾಣದಲ್ಲಿ ಉದ್ಯೋಗ ಪ್ರಾರಂಭಿಸಿದ್ದ ಯುವ ನಾಯಕ ದಾದಾ ಶಿಂಧೆ ದೊಡ್ಡ ಪ್ರಮಾಣದಲ್ಲಿ ಹಾಲಿನ ಡೈರಿ ಪ್ರಾರಂಭಿಸಿದ ಇವರು ಗ್ರಾಮೀಣ ಭಾಗದ ಸಂಬರಗಿಯಲ್ಲಿ ಬಾಳುಮಾಮಾ ಹೆಸರಿನಿಂದ ಪೆಟ್ರೋಲ್ ಬಂಕ ಆರಂಭಿಸಿದ್ದಾರೆ ಎಂದ ಅವರು ಈ ಭಾಗದ ವಾಹನ ಮಾಲಿಕರು ನೂತನ ಪೆಟ್ರೋಲ್ ಬಂಕನ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.  

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಅಮರೇಶ್ವರ ಮಹಾರಾಜರು,  ಎಲ್ಲ ಯುವಕರು ನೌಕರಿ ಮೇಲೆ ಅವಲಂಬಿತರಾಗಬಾರದು ಸ್ವಂತ ಉದ್ಯೋಗದ ಕಡೆಗೂ ಮನಸ್ಸು ಮಾಡಬೇಕು. ಯಾವದೋ ಗುಂಗಿನಲ್ಲಿ ರಾಜಕೀಯ ಬೆನ್ನು ಹತ್ತದೆ ರಾಜಕೀಯದೊಂದಿಗೆ ಉದ್ಯೋಗಕ್ಕೂ ಮಹತ್ವ ನೀಡಬೇಕು ಎಂದರು.  

ಯುವ ಉದ್ಯಮಿ ಶ್ರೀನಿವಾಸ ಪಾಟೀಲರ ಮಾರ್ಗದರ್ಶನದಲ್ಲಿರುವ  ದಾದಾ ಶಿಂಧೆಯಂತೆ  ಸ್ವಂತ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ದುಡಿಯದೇ ಪುಕ್ಕಟೆ ದುಡ್ಡಿಗಾಗಿ ಆಸೆ ಪಡಬಾರದು ಎಂದ ಅವರು ದುಡಿದು ಗಳಿಸಿದ ಸಂಪತ್ತಿನಿಂದ ನಾವು ಆರ್ಥಿಕವಾಗಿ  ಸಧೃಢರಾಗಲು ಸಾಧ್ಯ ಎಂದರು. ಸಂತ ಬಾಳುಮಾಮಾ ಪೆಟ್ರೋಲ್ ಬಂಕ ಮಾಲಿಕ ದಾದಾ ಶಿಂಧೆ ಮಾತನಾಡಿ, ಈ ಉದ್ಯಮ ಪ್ರಾರಂಭಿಸಲು ಸಂಬರಗಿ, ಶಿರೂರ, ಜಂಬಗಿ ಗ್ರಾಮಗಳ ಗ್ರಾಮಸ್ಥರು, ಮುಖಂಡರು ನನಗೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದು, ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವೆ ಎಂದ ಅವರು ಈ ಭಾಗದಲ್ಲಿ ಜನರ ಅನಕೂಲಕ್ಕಾಗಿ ಪೆಟ್ರೋಲ್ ಬಂಕ ಪ್ರಾರಂಭಿಸಬೇಕು ಎಂದು ನನ್ನ ಕನಸು ಇತ್ತು ಇಂದು ನನ್ನ ಆ ಕನಸು ನನಸಾಗಿದೆ ಎಂದರು.  

ಶಿರೂರನ ಕೊಂಡಿಬಾ ಮಹಾರಾಜ, ಬೀರು ಉಗಾರೆ, ವಿಲಾಸ ಟೋಣೆ, ಮಹಾದೇವ ಕೋರೆ, ರುದ್ರಗೌಡ ಪಾಟೀಲ, ನಿಂಗಪ್ಪ ಖೋಕಲೆ, ನಾನಾಸಾಹೇಬ ಅವತಾಡೆ, ಅಸ್ಲಂ ನಾಲಬಂದ, ಮಲ್ಲಿಕಾರ್ಜುನ ದಳವಾಯಿ, ರಾಜು ಚವ್ಹಾಣ, ರಾವಸಾಬ ಈರಕರ, ಅಶೋಕ ಮಾನೆ, ಅಮೃತ ಮಿಸಾಳ, ತುಕಾರಾಮ ಶೇಳಕೆ ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ