ಅಥಣಿ

ಜು. 6ರಂದು 11ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉದ್ಘಾಟನೆ

ಜು. 6ರಂದು 11ನೇ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ ಉದ್ಘಾಟನೆ

ಅಥಣಿ 02: 11 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ ಬೆಳಗಾವಿ, ಅಥಣಿ ಇದರ  ಉದ್ಘಾಟನಾ ಸಮಾರಂಭ  ಜುಲೈ 6 ಶನಿವಾರದಂದು ಅಥಣಿ ನ್ಯಾಯಾಲಯ ಆವರಣದಲ್ಲಿ ಮುಂಜಾನೆ 10 ಗಂಟೆಗೆ ನಡೆಯಲಿದೆ ಎಂದು ಅಥಣಿ ಬಾರ್ ಕೌನ್ಸಿಲ್ ಅಧ್ಯಕ್ಷ ನ್ಯಾಯವಾದಿ ಎ.ಎಸ್‌.ಹುಚ್ಚಗೌಡರ ತಿಳಿಸಿದರು.  

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ಮತ್ತು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಸ್ಟಿಸ್ ಕೆ.ಎಸ್‌.ಮುದಗಲ್ ಜಿಲ್ಲಾ ನ್ಯಾಯಲಯವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಚೀನ್ ಮಗದುಮ್, ಜಸ್ಟಿಸ್ ಕೆ.ಎಸ್‌.ಹೇಮಲತಾ, ಜಸ್ಟಿಸ್ ರಾಮಚಂದ್ರ ಹುದ್ದಾರ, ಜಸ್ಟಿಸ್ ವಿಜಯಕುಮಾರ ಪಾಟೀಲ ಆಗಮಿಸುವರು ಎಂದು ತಿಳಿಸಿದರು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ವಹಿಸುವರು, ವಿಶೇಷ ಆವ್ಹಾನಿತರಾಗಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಹಾರಕಿಹೊಳಿ, ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ  ಲಕ್ಷ್ಮಣ ಸವದಿ, ರಾಜು ಕಾಗೆ ಆಗಮಿಸುವರು ಮತ್ತು ಜಿಲ್ಲಾ ನ್ಯಾಯಾಧೀಶರಾದ ಜಿಲ್ಲಾ ಸೇಶನ್ಸ ನ್ಯಾಯಾಧೀಶ ತ್ಯಾಗರಾಜ ಇನವಳ್ಳಿ ಉಪಸ್ಥಿತರಿರುವರು ಎಂದು ತಿಳಿಸಿದರು.        

ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ ಮಾತನಾಡಿ, ಕಳೆದ 15 ವರ್ಷಗಳ ನಿರಂತರ ಅಥಣಿ ವಕೀಲರ ಹೋರಾಟದ ಮತ್ತು ಕಾನೂನು ಸಚಿವ ಎಚ್‌.ಕೆ.ಪಾಟೀಲ,  ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಮತ್ತು ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಜಾರಕಿಹೊಳಿಯವರ ಪ್ರಯತ್ನದ ಫಲವಾಗಿ  ಅಥಣಿಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿದೆ ಎಂದು ಹೇಳಿದರು. 130 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ  ಅಥಣಿ ನ್ಯಾಯಾಲಯದ ಎಸ್‌.ವ್ಹಿ.ಪಾಟೀಲ, ಎ.ಬಿ.ಜಕನೂರ, ಐ.ಎಮ್‌.ಶೇಡಶ್ಯಾಳೆ, ಎ.ಎ.ದಳವಾಯಿ ಸೇರಿದಂತೆ ಅನೇಕ ನ್ಯಾಯವಾದಿಗಳು  ಶಾಸಕರಾಗಿ, ಮಂತ್ರಿಗಳಾಗಿ ಮತ್ತು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವ ಮೂಲಕ ಅಥಣಿ ನ್ಯಾಯಾಲಯದ ಹಿರಿಮೆ ಹೆಚ್ಚಿಸಿದ್ದಾರೆ ಎಂದರು. ವಕೀಲರ ಮತ್ತು ಕಕ್ಷಿದಾರರ ಹಿತದೃಷ್ಟಿಯಿಂದ ಅಥಣಿಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿರುವುದು ಅನೇಕ ವರ್ಷಗಳ ಕನಸು ಈಡೇರಿದಂತಾಗಿದೆ ಎಂದ ಅವರು ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗುವುದರಿಂದ ಕಕ್ಷಿದಾರನ ಮನೆಗೆ ನ್ಯಾಯದಾನ ಸಿಕ್ಕಂತಾಗಿದೆ ಎಂದರು.      

ವಕೀಲರ ಸಂಘದ ಮೀತಿಶ ಪಟ್ಟಣ, ಬಿ ಬಿ ಬಿಸಲಾಪೂರ, ಎಮ್ ಸಿ ದುಂಡಿ,  ಎಸ್ ಎ ಸಂಕ, ಎಸ್‌. ಬಿ ಪತ್ತಾರ,  ಎನ್ ಬಿ ಕನಾಳೆ, ಪಿ ಪಿ ಮೋರೆ, ಎ ಎನ್ ಕೋಟುರಮಠ,  ಆರ್ ಎನ್ ಕುಲ್ಲೋಳಿ, ಆರ್ ಪಾಟೀಲ,  ಪಿ ಎಂ ಕಾಂಬಳೆ ಉಪಸ್ಥಿತರಿದ್ದರು. 


ಸುದ್ದಿ ಓದಿ