ಧಾರವಾಡ - ಹುಬ್ಬಳ್ಳಿ

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಧಾರವಾಡ 17: ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಡಾ. ಅಜಿತಪ್ರಸಾದ ಅವರು ಹೇಳಿದರು. ಅವರು ಜೆ.ಎಸ್‌.ಎಸ್ ಮಂಜುನಾಥೇಶ್ವರ ಪದವಿಪೂರ್ವ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದ 2025 26ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಾ ನಮ್ಮ ಜೆ. ಎಸ್‌. ಎಸ್ ಸಂಸ್ಥೆಯು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕದಲ್ಲಿ ಸಂಪೂರ್ಣ ವಿನಾಯತಿಯನ್ನು ನೀಡುತ್ತಿರುವುದರ ಫಲವಾಗಿ ನಮ್ಮ ಸಂಸ್ಥೆಯು ಕರ್ನಾಟಕ ವಿಶ್ವವಿದ್ಯಾಲಯದಿಂದ 12 ಬಾರಿ ಚಾಂಪಿಯನ್‌ಶಿಪ್ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಹುಕ್ಕೇರಿಕರ್ ರಾಮರಾಯದಿಂದ ಸ್ಥಾಪಿತವಾದ ಈ ಸಂಸ್ಥೆಯು ಇಂದು ಉತ್ತರ ಕರ್ನಾಟಕದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಇದಕ್ಕೆಲ್ಲ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿ ಮತ್ತು ದಿವಂಗತ ಡಾ. ನ ವಜ್ರಕುಮಾರ್ ಅವರ ಕಾಳಜಿ  ಮತ್ತು ತ್ಯಾಗ ದೊಡ್ಡದಾಗಿದೆ ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ ಆಗಮಿಸಿದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ವಿ ಡಿ ಬೋಳಿಶೆಟ್ಟಿ ಅವರು ವಿಜ್ಞಾನದ ವಿಷಯಗಳನ್ನು ಇಂದು ಬೇರೆ ಬೇರೆ ತಂತ್ರ ವಿಧಾನಗಳಿಂದ ಭೋದಿಸಲಾಗುತ್ತಿದೆ. ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೋಜಿನೊಂದಿಗೆ  ವಿಜ್ಞಾನದ ವಿಷಯವನ್ನು ಕಲಿಸಲಾಗುತ್ತಿದೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ಕಾಲೇಜಿನ ಪ್ರಾಚಾರ್ಯರಾದ ಶ್ರೀ ರವಿವರ್ಮ ಜೋಶಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಸ್ವಾಗತಿಸಿದರು. ನೂತನ ಆಡಳಿತ ಅಧಿಕಾರಿಗಳಾದ ಹರಿಹಂತ ಪ್ರಸಾದ,  ಎಂ.ಸಿ.ಎ ಕಾಲೇಜಿನ ನಿರ್ದೇಶಕರಾದ ಡಾ. ಸೂರಜ ಜೈನ,  ಕ್ರೀಡಾ ನಿರ್ದೇಶಕರಾದ ಶ್ರೀ ಪವನ್ ಗೊರವ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಯಾದ ಕುಮಾರಿ ಸನ್ಮತಿ ತಿಪ್ಪಣ್ಣವರ ಜಂಟಿ ಪ್ರಧಾನ ಕಾರ್ಯದರ್ಶಿಯಾದ ಕುಮಾರಿ ಡಿಂಕಲ್ ಪುರೋಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಕುಮಾರಿ ದೀಪಾ ಪೂಜಾರ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು ಡಾ. ಎಸ್ ಕೆ ನಡುವಿನಕೇರಿ ಅವರು ನಿರೂಪಿಸಿದರು ಕುಮಾರಿ  ಡಿಂಕಲ್ ಪುರೋಹಿತ ವಂದಿಸಿದರು. 


ಸುದ್ದಿ ಓದಿ