ವಕ್ಫ ಸಮಿತಿ ಅಥವಾ ಕಂದಾಯ ಇಲಾಖೆಯಿಂದ ನೋಟಿಸ್ ಬಂದಲ್ಲಿ ಸವದಿಯವರನ್ನು ಸಂಪರ್ಕಿಸಿ- ಠಕ್ಕಣ್ಣವರ
ವಕ್ಫ ಸಮಿತಿ ಅಥವಾ ಕಂದಾಯ ಇಲಾಖೆಯಿಂದ ನೋಟಿಸ್ ಬಂದಲ್ಲಿ ಸವದಿಯವರನ್ನು ಸಂಪರ್ಕಿಸಿ- ಠಕ್ಕಣ್ಣವರ
ಅಥಣಿ 03: ರೈತರಿಗೆ ಶಾಸಕ ಲಕ್ಷ್ಮಣ ಸವದಿಯಿಂದ ಅಭಯ ಹಸ್ತ ನೀಡಿದ್ದಾರೆ. ಹಿರಿಯ ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ.ಅಥಣಿ ಶಾಸಕರಾಗಿರುವ ಲಕ್ಷ್ಮಣ ಸವದಿ ತಾಲೂಕಿನ ರೈತರ ಒಂದಿಂಚೂ ಜಮೀನನ್ನು ಅನ್ಯಾಯವಾಗಿ ವಕ್ಫ ಸಮೀತಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಬಹಿರಂಗವಾಗಿಯೇ ರೈತರ ಪರವಾಗಿ ಹೇಳಿಕೆ ನೀಡಿದ್ದು, ಇಷ್ಟಾಗಿಯೂ ಒಂದು ವೇಳೆ ವಕ್ಫ ಸಮಿತಿಯಿಂದಾಗಲಿ ಅಥವಾ ಕಂದಾಯ ಇಲಾಖೆಯಿಂದ ನೋಟಿಸ್ ಬಂದಲ್ಲಿ ತಕ್ಷಣ ಶಾಸಕ ಲಕ್ಷ್ಮಣ ಸವದಿಯವರನ್ನು ಅಥವಾ ನನ್ನನ್ನು ಮೂಲ ದಾಖಲಾತಿಗಳೊಂದಿಗೆ ಸಂಪರ್ಕಿಸಿ ಎಂದು ಅಥಣಿ ತಾಲೂಕಾ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮೀತಿಯ ಅಧ್ಯಕ್ಷ ಮತ್ತು ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸೇವಾ ಸಮೀತಿ ಉಪಾಧ್ಯಕ್ಷ, ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ ಹೇಳಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ರಾಜಕೀಯ ಪುಢಾರಿಗಳು ಶಾಸಕ ಲಕ್ಷ್ಮಣ ಸವದಿಯವರ ರೈತ ಪರ ಹೇಳಿಕೆಯ ಕುರಿತು ಹಗುರವಾಗಿ ಮಾತನಾಡಿ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಮರಿ ಪುಢಾರಿಗಳು ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ ಹೊರತು ಅವರೆಂದೂ ರೈತರ ನೆರವಿಗೆ ಧಾವಿಸಿಲ್ಲ ಅಂತಹ ಮರಿ ಪುಢಾರಿಗಳಿಗೆ ಸೂಕ್ತ ಸಮಯದಲ್ಲಿ ನಾವೆಲ್ಲ ಸೇರಿ ಬುದ್ಧಿ ಕಲಿಸೋಣ ಎಂದು ರೈತ ಸಮುದಾಯಕ್ಕೆ ಠಕ್ಕಣ್ಣವರ ಕರೆ ನೀಡಿದರು.