ಜಮಖಂಡಿ

ಅಕ್ರಮವಾಗಿ ಬೆಳೆದ ಹಸಿ ಗಾಂಜಾ ಬೆಳೆ ವಶ

ಅಕ್ರಮವಾಗಿ ಬೆಳೆದ ಹಸಿ ಗಾಂಜಾ ಬೆಳೆ ವಶ

ಲೋಕದರ್ಶನ ವರದಿ,

ಜಮಖಂಡಿ : 20: ತಾಲೂಕಿ ಸಿದ್ದಾಪೂರ ಗ್ರಾಮದ ತೋಟದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯನ್ನು ಬೆಳೆದು. ತನ್ನ ಲಾಭದ ಉದ್ದೇಶದಿಂದ ಮಾರಾಟ ಮಾಡುವ ಗಾಂಜಾ ಬೆಳೆಯ ಮೇಲೆ ಗ್ರಾಮೀಣ ಠಾಣೆಯ ಪಿಎಸ್ಐ ಗಂಗಾ ಬಿರಾದರ ದಾಳಿ ನಡೆಸಿ, ಸುಮಾರು ರೂ,2,30,400 ಕಿಮ್ಮತ್ತಿನ 75 ಕೆ.ಜಿ. 800 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಸಿದಾಪೂರ ಗ್ರಾಮದ ಶಿವಾನಂದ ಹಣಮಂತ ಬಜಂತ್ರಿ ತನ್ನ ಕಬ್ಬಿನ ಹೊಲದ ಗದ್ದೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಲಕ್ಷಾಂತ ರೂ,ಗಳ ಗಾಂಜಾ ಬೆಳೆದಿದ್ದು. ಗ್ರಾಮೀಣ ಅಕ್ರಮವಾಗಿ ಬೆಳೆದ ಹಸಿ ಗಾಂಜಾ ಬೆಳೆ ವಶ

 ಪಿಎಸ್ಐ ಖಚಿತ ಮೇರೆಗೆ ದಾಳಿ ನಡೆಸಿ. ಹಸಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಜಿಲ್ಲಾ ಎಸ್ಪಿ, ಜಯಪ್ರಕಾಶ, ಬಾಗಲಕೋಟೆ, ಹೆಚ್ಚುವರಿ ಎಸ್ಪಿ,ಪ್ರಸನ್ನ ದೇಸಾಯಿ,  ಡಿಎಸ್ಪಿ ಶಾಂತವೀರ ಈ, ಸಿ.ಪಿ.ಐ ಗುರುನಾಥ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು. ಈ ಕುರಿತು ಗ್ರಾಮೀಣ ಠಾಣೆಿಯಲ್ಲಿ ಪ್ರಕರಣ ದಾಖಲಾಗಿದೆ.  

ಗಾಂಜಾ ದಾಳಿಯಲ್ಲಿ ಭಾಗಿಯಾದ ಹೆಚ್ಚುವರಿ ಪಿಎಸ್ಐ ಮಧು ಎಲ್, ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ, ಜಿ.ಎಸ್.ಬಿರಾದಾರ, ಬಿ,ವಿ, ಗುಳಬಾಳ, ಎನ್, ಸಿ,ನ್ಯಾಮಗೌಡ, ಎಲ್,ಸಿ,ಇಮ್ಮಡಿ, ಎಸ್, ಎ, ಸಣಗೌಡರ, ಎ,ಎಸ್,ಮಾಳ, ಎಂ,ಎಸ್, ಸವದಿ, ಎಸ್,ಎಂ, ಬಡಿಗೇರ, ಪಿ,ಎಂ, ಹೊಸಮನಿ, ಎನ್.ಬಿ, ಬಿಸಲದಿನ್ನಿ, ಎಸ್,ಐ, ಹುದ್ದಾರ, ಬಿ, ಟಿ, ಪಾಟೀಲ, ಎಂ, ಟಿ, ತಮದಡ್ಡಿ ಭಾಗಿಯಾಗಿದ್ದು. ಜಿಲ್ಲಾ ಎಸ್ಪಿ ಅವರು ಶ್ಲಾಘನಿಸಿದ್ದಾರೆ.


ಸುದ್ದಿ ಓದಿ