ನಿವೇಶನ ಹಂಚಿಕೆಯಲ್ಲಿ ಕಾನೂನು ಬಾಹಿರವಾಗಿ ರೈತರಿಗೆ ವಂಚನೆ: ಆರೋಪ
ಲೋಕದರ್ಶನ ವರದಿ,
ಜಮಖಂಡಿ 3: ತಾಲೂಕಾ ಕೃಷಿ ಮಾರುಕಟ್ಟೆ ಸಮಿತಿಯವರು ನಿವೇಶನ ಹಂಚಿಕೆಯಲ್ಲಿ ಕಾನೂನು ಬಾಹಿರವಾಗಿ ಸರಕಾರಕ್ಕೆ ಮತ್ತು ರೈತರಿಗೆ ಮೋಸ ಮಾಡಿದ್ದಾರೆಂದು ಪ್ರಗತಿಪರ ರೈತ ಶೇಖರ ನ್ಯಾಮಗೌಡ ಮತ್ತು ರಾಜು ಪಾಟೀಲ ಆರೋಪಿಸಿದ್ದಾರೆ.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೃಷಿ ಮಾರುಕಟ್ಟೆಯಲ್ಲಿ ನೀವೇಶನಗಳನ್ನು ಹಂಚಿಕೆಯನ್ನು ಸರಕಾರ ಸುತ್ತೋಲೆಯನ್ನು ಗಾಳಿತೂರಿ ತಮ್ಮಗೆ ಮನಬಂದಂತೆ ಹಂಚಿಕೆಯನ್ನು ಮಾಡಿದ್ದಾರೆ. ಸುಮಾರು 53 ಪ್ಲಾಟ್ಗಳನ್ನು ಹಂಚಿಕೆ ಮಾಡಬೇಕಾದರೆ. ಸರಿಸುಮಾರು 3 ವರ್ಷಗಳ ಕಾಲದವರೆಗೆ ಕೃಷಿ ಮಾರುಕಟ್ಟೆಯಲ್ಲಿ ವರ್ತಕರು, ವ್ಯಾಪಾರಿಗಳು ಆಗಿರಬೇಕು. ಅದು ರೈತರು ಮಾತ್ರ ಇದ್ದವರಿಗೆ ಮಾತ್ರ ಅವಕಾಶವಿದ್ದು. ಅಲ್ಲಿಯೇ 20 ರಿಂದ 30 ವರ್ಷಗಳ ಕಾಲ ವ್ಯಾಪಾರ, ವಹಿವಾಟ ಮತ್ತು ತೆರಿಗೆಯನ್ನು ಸಂದಾಯ ಮಾಡುತ್ತಾ ಬಂದಿರುವ ರೈತರನ್ನು ಕಡೆಗಣಿಸಿ ರೈತರಿಗೆ ಭಾರಿ ಮೋಸವನ್ನು ಅಧಿಕಾರಿಗಳು ಮಾಡಿದ್ದಾರೆಂದು ಆರೋಪಿಸಿದರು.
ನಿವೇಶನಗಳ ಹಂಚಿಕೆಯನ್ನು ಪಡೆದವರು 3 ವರ್ಷಗಳ ಕಾಲ ವರ್ತಕರಾಗಿ, ವ್ಯಾಪಾರಿಗಳು ಆಗಿರಬೇಕು ಆದರೆ ಸರಕಾರದ ಕಾನುನೂವನ್ನು ಉಲಂಘಿಸಿ. ಹಣಬಲ ಇದ್ದವರಿಗೆ ಮಾತ್ರ ಹಂಚಿಕೆಯನ್ನು ಮಾಡಿದ್ದಾರೆ. ಸಬಂಧಪಟ್ಟ ಅಧಿಕಾರಿಗಳು ಸಮಗ್ರವಾದ ತನಿಖೆಯನ್ನು ನಡೆಸಿ. ಯಾರು ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದಾರೆ. ಅಂತವರ ಮೇಲೆ ಮತ್ತು ಇದರಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು. ಇಲ್ಲದೇ ಹೋದರೆ ಅಕ್ರಮವಾಗಿ ನಿವೇಶನಗಳನ್ನು ಪಡೆದವರ ಮೇಲೆ ಮತ್ತು ಅಧಿಕಾರಿಗಳ ಮೇಲೆ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿ. ವಿವಿಧ ರೈತಪರ ಸಂಘಟನೆಗಳ ಸಹಾಯ ಪಡೆದುಕೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.