ಈದೇ ಮೀಲಾದುನ್ನಬಿ: ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಘಟಪ್ರಭಾ 10: ಈದೇ ಮೀಲಾದುನ್ನಬಿ (ಮೊಹ್ಮದ ಪೈಗಂಬರ ಜಯಂತಿ) ಅಂಗವಾಗಿ ಶನಿವಾರದಂದು ಸ್ಥಳೀಯ ಅಹಲೇ ಸುನ್ನತ್-ವಲ್-ಜಮಾತದ ಯಂಗ ಕಮೀಟಿಯ ಸದಸ್ಯರು ಇಲ್ಲಿಯ ಜೆ.ಜಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿಯ ಶಿವಾನಂದ ದೇವರು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಬಿ.ಕೆ.ಎಚ್.ಪಾಟೀಲ, ಹಾಗೂ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಕರಲಿಂಗನವರ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಸರಫರಾಜ ಔರಂಗಾಬಾದಿ, ಯಂಗ್ ಕಮೀಟಿ ಸದಸ್ಯರಾದ ಸಲೀಮ ಕಬ್ಬೂರ, ಮೆಹಬೂಬ ಸಯ್ಯದ, ಜಹಾಂಗೀರ ಬಾಗವಾನ, ಇಮ್ರಾನ ಬಟಕುಕರ್ಿ, ಪೈಜಲ್ ಬಾಗವಾನ, ಜಿ.ಎಸ್.ರಜಪೂತ, ಗಣೇಶ ಗಾಣೀಗ, ಕಾಡಪ್ಪ ಕರೋಶಿ. ವ್ಯವಸ್ಥಾಪಕರಾದ ಮಹದೇವ ಹಗರಿ, ವಿಠ್ಠಲ ಕೌಜಲಗಿ, ದಿಲಾವರ ಬಾಳೇಕುಂದ್ರಿ, ಗಜಬಾರ ಬೋರಗಾಂವಿ, ರಿಯಾಜ ಬಾಡಕರ, ಅಲ್ತಾಫ ಉಸ್ತಾದ, ಮಮ್ಮದ ನಯಾಗರ, ಬುಡನಸಾಬ ಬಾಗವಾಲೆ, ಶಾನೂರ ಡಾಂಗೆ, ಹಸನ ನಯಾಗರ ಸೇರಿದಂತೆ ಅನೇಕರು ಇದ್ದರು