ಜಮಖಂಡಿ

ಮೈನ್ಸ್‌ ಗುತ್ತಿಗೆದಾರದ ಮನೆ ಮೇಲೆ ಐಟಿ ದಾಳಿ: ಮಹತ್ವದ ಕಾಗದ ಪತ್ರಗಳು ವಶ

ಮೈನ್ಸ್‌ ಗುತ್ತಿಗೆದಾರದ ಮನೆ ಮೇಲೆ ಐಟಿ ದಾಳಿ: ಮಹತ್ವದ ಕಾಗದ ಪತ್ರಗಳು ವಶ

ಜಮಖಂಡಿ 23: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಮೈನ್ಸ್‌ ಗುತ್ತಿಗೆದಾರದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. 

ಶಿರಗುಪ್ಪಿ ಗ್ರಾಮದ ಭೀಮಪ್ಪ ಮಲ್ಲಪ್ಪ ಸಂಕನಗೌಡ ಅವರ ತೋಟದಮನೆ ಮೇಲೆ ಬೆಳಂಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿದೆ. 

ಈ ದಾಳಿಯಲ್ಲಿ ವಿವಿಧ ರಾಜ್ಯದ ಐಟಿ ಅಧಿಕಾರಿಗಳು ಆಗಮಿಸಿದ್ದು, ಭೀಮಪ್ಪ ಸಂಕನಗೌಡ ಅವರ ಮನೆಯಲ್ಲಿನ ದಾಖಲಾತಿಗಳನ್ನು ಪರೀಶೀಲನೆ ನಡೆಸಿದ್ದಾರೆನ್ನಲಾಗಿದೆ. ಐಟಿ ಅಧಿಕಾರಿಗಳು ಪರೀಶೀಲನೆ ಮಾಡಿರುವ ದಾಖಲಾತಿ ಬಗ್ಗೆ ಮನೆಯಲ್ಲಿ ಇರುವ ಹಣ ಮತ್ತು ಆಸ್ತಿ ವಿವರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಶಿರಗುಪ್ಪಿ ಗ್ರಾಮದಲ್ಲಿ ಪೋಲೀಸರು ಮತ್ತು ಐಟಿ ಅಧಿಕಾರಿಗಳು ಬಿಡಾರ ಹೂಡಿದ್ದಾರೆ. 

ಭೀಮಪ್ಪ ಮಲ್ಲಪ್ಪ ಸಂಕನಗೌಡರ ಕಳೆದೊಂದು ವರ್ಷದಿಂದ ಉಡುಪಿ ನಿವಾಸಿಯಾಗಿದ್ದು, ತುಮಕೂರು ನಿವಾಸಿ ಜಿ.ಶಂಕರ ಎನ್ನುವವರಲ್ಲಿ ಕಡಿ, ಮೈನ್ಸ್‌ ಹಾಗೂ ಉಸುಕು ವ್ಯಾಪಾರ ಮಾಡುತ್ತಿದ್ದನು. ಭೀಮಪ್ಪನ ಮಾಲೀಕತ್ವದ ಮೂರು ಟಿಪ್ಪರಗಳನ್ನು ತುಮಕೂರಿನಲ್ಲಿ ಕಡಿ, ಉಸುಕು ಸಾಗಾಣಿಕೆ ಮಾಡುತ್ತಿದ್ದು, ಜಿ.ಶಂಕರ ಅವರು ವ್ಯಾಪಾರದಲ್ಲಿ ಜೆಎಸ್‌ಟಿ ತೆರಿಗೆ ವಂಚನೆ ಮಾಡಿದ್ದಾರೆಂದು ಹಾಗೂ ಹೆಚ್ಚಿನ ಹಣ ಅವರ ಬ್ಯಾಂಕ ಅಕೌಂಟ್ ಮುಖಾಂತರ ವರ್ಗಾವಣೆಯಾಗಿದೆಂದು ತಿಳಿದು ಬಂದಿದ್ದು. ಐಟಿ ಅಧಿಕಾರಿಗಳು ಏಕಕಾಲಕ್ಕೆ ತುಮಕೂರು ಜೆ.ಶಂಕರ ಹಾಗೂ ಶಿರಗುಪ್ಪಿಯ ಭೀಮಪ್ಪ ಮಲ್ಲಪ್ಪ ಸಂಕನಗೌಡರ ಇವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದು, ತಡ ರಾತ್ರಿವರೆಗೂ ಪರೀಶೀಲನೆ ಕಾರ್ಯ ಮುಂದುವರೆಯುತ್ತದೆಂದು ಬಲ್ಲ ಮೂಲಗಳು ತಿಳಿಸಿವೆ.ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ,  

ಜಮಖಂಡಿ ತಾಲೂಕಿನ ಶಿರಗಿಪ್ಪಿ ಗ್ರಾಮದಲ್ಲಿನ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು, 


ಸುದ್ದಿ ಓದಿ