ಜಮಖಂಡಿ

ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ,

ಜಮಖಂಡಿ30: ಶಿಕ್ಷಕರು ಕೇವಲ ಜ್ಞಾನದ ಶಿಕ್ಷಣ ಮಾತ್ರವಲ್ಲದೆ ನೈತಿಕ ಮೌಲ್ಯಗಳನ್ನು ಬೆಳಸಬೇಕು. ವಿದ್ಯಾರ್ಥಿಗಳು ಗೌರವಿಸುವ ಸಂಸ್ಕೃತಿ ರೂಡಿಸಿಕೊಂಡರೆ ವಿದ್ಯಾಜ್ಞಾನ ಒಲಿಯಲಿದೆ. ಪ್ರತಿಯೊಬ್ಬರ ಹಿಂದೆ ಗುರು ಗುರಿಯಿದ್ದರೆ ವಿದ್ಯಾರ್ಥಿಗಳ ಜೀವನ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಸಮೀರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಸಂಸ್ಥ್ತೆ ಮುಖ್ಯಸ್ಥ ಸಮೀರ ಕಂಗನೊಳ್ಳಿ ಹೇಳಿದರು.

ನಗರದ ಡಾ.ಎಪಿಜೆ ಅಬ್ದುಲ್ ಕಲಾಂ ದಿ ಬೆಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತಮ ಸಾಧನೆಗೈದಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ಚೆನ್ನಾಗಿ ರೂಪಿಸಿಕೊಳ್ಳಬೇಕು. ಸನ್ಮಾನಗಳು ನಮ್ಮ ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚು ಮಾಡುತ್ತದೆ. ನಮ್ಮ ಸಂಸ್ಥೆಯ ಪ್ರಥಮ ಬ್ಯಾಚ್ ಶೇ.89.68 ರಷ್ಟು ಫಲಿತಾಂಶ ಪಡೆದುಕೊಂಡಿದೆ. ತಸ್ಮಿಯ ಭೋಜಗರ್ ಶೇ.86.5, ಶಿಫಾ ಮುತ್ವಲಿ ಶೇ.86.20, ನಿಷತಪ್ರವಿನ್ ಕೊಡತಿ ಶೇ.85, ಅಂಕ ಪಡೆದುಕೊಂಡಿದ್ದಾರೆ. 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀಣರಾಗುವ ಮೂಲಕ ಮೊದಲ ವರ್ಷದ ಈ ಪರಿಶ್ರಮಕ್ಕೆ ಒಳ್ಳೆಯ ಪಳಿತಾಂಶ ಲಭಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯನ್ನು ಶಾಲು ಹೊದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಬೆಂಗಳೂರಿನ ಬಸವರಾಜ ಪಂಚಗಾವಿ, ನಾಗೇಶ ಬಂಗಿನವರ, ವಿಠ್ಠಲ ಕುಂಬಾರ, ಸಿದ್ದಲಿಂಗಯ್ಯ ಮರೆಗುದ್ದಿ, ಎ.ಎಸ್.ನಾಗೇಂದ್ರ, ಪ್ರಾಚಾರ್ಯ ಶೀರಿನ ಪಠಾಣ ಸಹಿತ ಹಲವರು ಇದ್ದರು.

ತಂಜುಮ ಮುಲ್ಲಾ ಪ್ರಾರ್ಥಿಸಿದರು. ಎನ್.ಸಂಗೀತಾ ಸ್ವಾಗತಿದರು. ಎಸ್.ಸುಪ್ರೀಯಾ ನಿರೂಪಿಸಿದರು. ಎ.ಜಿ.ಸಹನಾ ವಂದಿಸಿದರು.


ಪೋಟೋ : ಜಮಖಂಡಿ ನಗರದ ಡಾ.ಎಪಿಜೆ ಅಬ್ದುಲ್ ಕಲಾಂ ದಿ ಬೆಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾಥರ್ಿಗಳನ್ನು ಸಮೀರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಸಂಸ್ಥ್ತೆ ಮುಖ್ಯಸ್ಥ ಸಮೀರ ಕಂಗನೊಳ್ಳಿ ಸನ್ಮಾನಿಸಿದರು 

ಸುದ್ದಿ ಓದಿ