ರಾಣೆಬೆನ್ನೂರ

ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಕಾರ್ ಆಟೋ ಚಾಲಕರ ಸನ್ಮಾನ

ಈಶ್ವರಿಯ  ವಿಶ್ವವಿದ್ಯಾಲಯದಲ್ಲಿ ಕಾರ್ ಆಟೋ ಚಾಲಕರ ಸನ್ಮಾನ

 ರಾಣೇಬೆನ್ನೂರು  23: ಸ್ವಾಸ್ಥ ಮತ್ತು ಸುಂದರ ಸಮಾಜ ನಿರ್ಮಾಣಕ್ಕಾಗಿ ಕಾರ್ ಮತ್ತು ಆಟೋ ಚಾಲಕರು  ನೀಡುತ್ತಿರುವ ಸೇವೆ ಅತ್ಯಂತ ಪ್ರಶಂಸನಿಯವಾಗಿದೆ ಎಂದು ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿಕೆ ಮಾಲಜಿ ಜಕ್ಕ ಹೇಳಿದರು.       

  ವಿಶ್ವವಿದ್ಯಾಲಯ ಸಭಾಭವನದಲ್ಲಿ ನಡೆದ, ಕಾರ್ ಮತ್ತು ಆಟೋ ಚಾಲಕರ  ಅಭಿನಂದನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.    

   ಅಂದು ಬಸವಣ್ಣನವರು ನೀಡಿದ ಕಾಯಕ ಸೇವೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿದೆ . ಯಾವುದೇ ಜಾತಿ ಮತ ಭಿನ್ನ ಭೇದ ಭಾವ ಎಣಿಸದೆ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯು  ಕಾಯಕ ಜೀವಿಗಳಾಗಿ, ತಮ್ಮ ತಮ್ಮ ಕಾಯಕದಲ್ಲಿ ನಿಷ್ಠೆ, ನಂಬಿಕೆ, ಪ್ರಾಮಾಣಿಕತೆ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜದ ಜೊತೆಗೆ, ಸಮಗ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದರು.  ನಗರ ವ್ಯಾಪ್ತಿಯ ನೂರಾರು ಆಟೋ ಮತ್ತು ಕಾರು ಚಾಲಕರನ್ನು, ವಿಶ್ವವಿದ್ಯಾಲಯದಿಂದ ಶಾಲು ಹೊದಿಸಿ, ಸೇವಾ ಕಾರ್ಯವನ್ನು ಅಭಿನಂದಿನಿಸಿ ಸನ್ಮಾನಿಸಿ ಗೌರವಿಸಲಾಯಿತು.

 ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಡಾ: ಬಸವರಾಜ ಕೇಲಗಾರ್ ಅವರು,ಮಾತನಾಡಿ ಸಮಾಜಮುಖಿ ಕಾಯಕಯೋಗಿಗಳನ್ನು ಸಮಾಜವೇ ಗುರುತಿಸಬೇಕು, ಅಂತಹ ಪವಿತ್ರ ಕಾರ್ಯವನ್ನು ತಮ್ಮ ಆಧ್ಯಾತ್ಮಿಕ ಸೇವೆಯ ಜೊತೆಗೆ, ಧರ್ಮದ ಅನುಯಾಯಿಗಳಾಗಿ ಬಿಕೆ ಮಾಲತಿಜಿ ಅಕ್ಕನವರು ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಎಂದರು. ಈ ಸಂದರ್ಭದಲ್ಲಿ ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಪಿಎಸ್ಐ ಕೆ.ಸಿ. ಕೋಮಲಾಚಾರ್,  ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಸಾಧಕರಾದ ಬಿಕೆ ಸಂಗೀತ, ಬಿಕೆ ಸುಶೀಲಾ, ಬಿಕೆ ಲೀಲಾ,ಸೇರಿದಂತೆ ವಿದ್ಯಾಲಯದ ಸೇವಕರು, ಸಾಧಕರು, ಗಣ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ