ಗೃಹ ಸಾಲಮೇಳ ಕಾರ್ಯಕ್ರಮ

ಗೃಹ ಸಾಲಮೇಳ ಕಾರ್ಯಕ್ರಮ

ಬಳ್ಳಾರಿ 05: ಪ್ರಧಾನಮಂತ್ರಿ ಆವಾಸ್ ಯೋಜನೆಯ ಕ್ರೇಡಿಟ್ ಲಿಂಕಡ್ ಸಬ್ಸಿಡಿ ಸ್ಕೀಂ ಅಡಿ ನಗರದ ವಸತಿರಹಿತರಿಗೆ ಮನೆ ನಿಮರ್ಾಣಕ್ಕಾಗಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ಮನೆ ನಿಮರ್ಾಣ ಮಾಡಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಹೇಳಿದರು.

 ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಬಿ.ಡಿ.ಎ.ಎ ಪುಟ್ಬಾಲ್ ಸಭಾಂಗಣದಲ್ಲಿ ಬುಧುವಾರರಂದು  ಜಿಲ್ಲಾಡಳಿತ, ಮಹಾನಗರಪಾಲಿಕೆ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಸಿಂಡಿಕೇಟ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕ್ಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗೃಹ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸಾಮಾನ್ಯ ಜನರು ಸಹ ಸ್ವತಃ ಮನೆ ನಿಮರ್ಾಣ ಮಾಡಿಕೊಳ್ಳುವ ಭಾಗ್ಯ ಬಂದಿದೆ. ಕೇಂದ್ರ ಸಕರ್ಾರವು ಈ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ರೀತಿ ಮನೆ ನೀಮರ್ಾಣ ಮಾಡಿ, ಉತ್ತಮ ನಾಗರಿಕರಾಗಿ ಎಂದು ಹೇಳಿದ ಅವರು ಸಾಲ ಸೌಲಭ್ಯ ಹಾಗೂ ಕಡಿಮೆ ಬಡ್ಡಿ ಸಹಾಯಧನದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಈ ದೇಶದ ಪ್ರಧಾನ ಮಂತ್ರಿಯವರು ಸರ್ವರಿಗೂ 2022ರಲ್ಲಿ ಮನೆ ಇರಬೇಕು ಎಂದು ಕನಸನ್ನು ಕಟ್ಟಿದ್ದಾರೆ. ಅದನ್ನು ಈಡೇರಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು.  

ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೃಷ್ಣಪ್ಪ ಅವರು ಮಾತನಾಡಿ, ನಿವೇಶನ ಹೊಂದಿರುವ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರುವವರು  ಬ್ಯಾಂಕ್ ಸಾಲ ಪಡೆದು ಮನೆ ನಿಮರ್ಾಣ ಮಾಡಿಕೊಳ್ಳಲು ಸದಾವಕಾಶ ಕಲ್ಪಿಸಲಾಗಿದೆ. ವಾಡರ್್ಗಳ ಅನುಸಾರವಾಗಿ ಆಯಾ ವ್ಯಾಪ್ತಿಯ ಬಾಂಕ್ಗಳಲ್ಲಿ ಸಾಲವನ್ನು ಪಡೆಯಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಆರ್.ಸುಶೀಲಬಾಯಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ, ಮಾಜಿ ಮಹಾಪೌರರಾದ ನಾಗಮ್ಮ, ಮಾಜಿ ಉಪಮಹಾಪೌರರಾದ ಉಮಾದೇವಿ, ಬೆಣಕಲ್ಲು ಬಸವರಾಜ, ಪಾಲಿಕೆ ಸದಸ್ಯರಾದ ಶ್ರೀನಿವಾಸ, ಮಲ್ಲನಗೌಡ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು, ಇತರೆ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ