ಸಿಂಧಗಿ

ನಮ್ಮ ದೇಶದ ಕ್ರೀಡೆ ಹಾಕಿಗೆ ಮತ್ತೆ ಮರುಜನ್ಮ ಬಂದಂತಾಗಿದೆ: ಹೆಗ್ಗಣದೊಡ್ಡಿ

ನಮ್ಮ ದೇಶದ ಕ್ರೀಡೆ ಹಾಕಿಗೆ ಮತ್ತೆ ಮರುಜನ್ಮ ಬಂದಂತಾಗಿದೆ: ಹೆಗ್ಗಣದೊಡ್ಡಿ
ಸಿಂದಗಿ: ಸ್ಥಳಿಯ ಎಚ್‌.ಜಿ.ಕಾಲೇಜಿನ ಆವರಣದಲ್ಲಿ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಜಯಭೇರಿ ಬಾರಿಸಿದ ಹಿನ್ನ

ಸಿಂದಗಿ06: ಭಾರತೀಯ ಹಾಕಿ ತಂಡ ಓಲಂಪಿಕ್ ಕ್ರೀಡಾಕೂಟದಲ್ಲಿ ಜಯಭೇರಿ ಬಾರಿಸುವ ಮೂಲಕ ಸುಮಾರು ನಾಲ್ಕು ದಶಕಗಳ ನಂತರ ಭಾರತ ಹಾಕಿ ವೈಭವವನ್ನು ಎತ್ತಿ ಹಿಡಿದಿದೆ. ನಮ್ಮ ದೇಶದ ಕ್ರೀಡೆ ಹಾಕಿಗೆ ಮತ್ತೆ ಮರುಜನ್ಮ ಬಂದಂತಾಗಿದೆ ಎಂದು ಪ್ರಾಚಾರ್ಯ ಎ.ಆರ್‌. ಹೆಗ್ಗಣದೊಡ್ಡಿ ಹೇಳಿದರು. 

ಶುಕ್ರವಾರ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ. ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಜೆ.ಎಚ್‌. ಪಟೇಲ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಜಯಭೇರಿ ಬಾರಿಸಿದ ಹಿನ್ನಲೆಯಲಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. 

ಟೋಕಿಯೋ ಓಲಂಪಿಕ್‌ನಲ್ಲಿ ಜರ್ಮುನ ತಂಡದ ವಿರುದ್ದ 4-5  ಅಂತರದಿಂದ ಭಾರತ ಮಣಿಸಿ ಕಂಚಿನ ಪದಕವನ್ನು ಪಡೆಯುವ ಮೂಲಕ ಭಾರತದ ಹಾಕಿ ಕ್ರೀಡಾ ಪಟುಗಳು ಭಾರತೀಯರಿಗೆ ಸಂತಸವನ್ನು ನೀಡಿ ಜೀವಮಾನದ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ಷೇತ್ರಗಳಲ್ಲಿ ಭಾರತ ಸಾಧನೆ ಮಾಡುತ್ತಿರುವುದು ನಮ್ಮಯ ಹೆಮ್ಮೆ ಎಂದರು. 

್ಲ ಸಿ.ಎಂ .ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಬಿ.ಜಿ.ಮಠ, ಎಸ್‌.ಕೆ. ಹೂಗಾರ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ, ಪಿಯು ಕಾಲೇಜಿನ ಉಪನ್ಯಾಸಕರಾದ ಭೀಮನಗೌಡ ಬಿರಾದಾರ, ಸಿದ್ದಲಿಂಗ ಕಿಣಗಿ, ಜೆ.ಎಚ್‌.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಎಸ್‌.ಸಿ. ಸುಣಗಾರ, ಎಸ್‌.ಡಿ. ಅಂಕಲಗಿ, ಪ್ರದೀಪ ಕತ್ತಿ, ಎಸ್‌.ಎಮ್‌. ಹಿರೇಮಠ, ಎಸ್‌.ಎ. ಜಾಗಿರದಾರ, ಎಸ್‌.ಎಮ್‌. ಕಲ್ಲನಗೌಡರ, ಸಿದ್ದು ಕಲಾಲ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು. 


ಸುದ್ದಿ ಓದಿ