ಐತಿಹಾಸಿಕ ಕೋಟಿಲಿಂಗ ಪುರ ಉತ್ಸವ ಸರಕಾರವೇ ಮಾಡಲಿ: ಗೊಂಡಬಾಳ
ಕುಷ್ಟಗಿ 23: ಮೊದಲನೇ ಬಾರಿಗೆ ಖಾಸಗಿಯಾಗಿ ಉತ್ಸವವನ್ನು ಆಚರಣೆ ಮಾಡಿದ್ದು, ಮುಂದೆ ಅದನ್ನು ಸರಕಾರವೇ ಮಾಡಲಿ, ಐತಿಹಾಸಿಕ ಸ್ಥಳ ಮಹಿಮೆ ಅರಿಯಲು ಸಾಂಸ್ಕೃತಿಕವಾಗಿ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಅದರ ಅಗತ್ಯವಿದೆ ಎಂದು ಕಾರ್ಯಕ್ರಮದ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ತಾಲೂಕಿನ ಐತಿಹಾಸಿಕ ಕೋಟಿಲಿಂಗ ಪುರ ಉತ್ಸವ ಮೊದಲ ಬಾರಿಗೆ ಕಡೆ ಸೋಮವಾರ ಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿತು. ಅನೇಕ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ತಡ ರಾತ್ರಿವರೆಗೆ ನಡೆದು ಜನರಿಗೆ ಮುದ ನೀಡಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು. ಈ ಹಿಂದೆ ತಾವು ಮೊದಲ ಬಾರಿಗೆ ಐತಿಹಾಸಿಕ ಕನಕಗಿರಿ ಉತ್ಸವ ಮಾಡಿದ್ದು ನಂತರವೇ ಸರಕಾರ ಅದನ್ನು ಮಾಡಿತು ಈಗ ಪುನಃ ಅದನ್ನು ಮಾಡಬೇಕಿದೆ ಅಲ್ಲದೇ ತಾವು ನಾಲ್ಕು ಬಾರಿ ಗಂಡುಗಲಿ ಕುಮಾರ ರಾಮನ ಕುಮ್ಮಟದುರ್ಗೋತ್ಸವ ಮಾಡಿದ್ದೇವೆ, ಸರಕಾರ ಎಚ್ಚೆತ್ತುಕೊಳ್ಳಬೇಕು ಜಿಲ್ಲೆಯ ಎಲ್ಲಾ ಐತಿಹಾಸಿಕ ಸ್ಥಳಗಳ ರಕ್ಷಣೆ ಅಭಿವೃದ್ಧಿ ಮಾಡಬೇಕು. ನಿಜವಾದ ಕೋಟಿ ಲಿಂಗದ ಸ್ಥಳವಾಗಿರುವ ಪುರದ ಅಭಿವೃದ್ಧಿ ಮತ್ತು ಪ್ರಚಾರ ಆಗಬೇಕಿದೆ ಎಂಬ ದೃಷ್ಟಿಯಿಂದ ಕಷ್ಟಪಟ್ಟು ಅದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಇದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಸಾಹಿತಿಗಳಾದ ಡಾ. ಶರಣಪ್ಪ ನಿಡಶೇಸಿ ಅವರು ಐತಿಹಾಸಿಕವಾಗಿ ಪುರ ಮತ್ತು ನಟರಾಜ ಸೋನಾರ್ ಅವರು ಸಾಂಸ್ಕೃತಿಕವಾಗಿ ಪುರ ಎಂಬ ವಿಷಯ ಮಂಡನೆ ಮಾಡಿ, ಪುರದ ಮಹಿಮೆ ಮತ್ತು ಐತಿಹ್ಯಗಳನ್ನು ಜನರಿಗೆ ಮನವರಿಕೆ ಮಾಡಿದರು. ಎಲ್ಲಿಯ ಮಂಜುನಾಥ ಎಲ್ಲಿಯ ಕುಷ್ಟಗಿಯ ಪುರ, ಆದರೂ ಅವರು ಬಂದು ನಮ್ಮನ್ನು ಎಚ್ಚರಿಸಿದ್ದಾರೆ, ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಸ್ಥಳಗಳನ್ನು ಹೆಚ್ಚೆಚ್ಚು ಲೋಕಕ್ಕೆ ತಿಳಿಸಬೇಕಿದೆ, ಅವುಗಳ ರಕ್ಷಣೆ ಮಾಡುವ ಜೊತೆಗೆ ಪ್ರವಾಸೋಧ್ಯಮ ಅಭಿವೃದ್ಧಿ ಮಾಡಬೇಕು ಗೊಂಡಬಾಳ ಅವರಿಗೆ ನಾವೆಲ್ಲ ಹೆಚ್ಚಿನ ಸಹಕಾರ ನೀಡಿ ಮುಂದೆ ಇನ್ನಷ್ಟು ಅದ್ಧೂರಿಯಾಗಿ ಉತ್ಸವ ಮಾಡಬೇಕಿದೆ. ಪುರ ಉತ್ಸವ ಮಾಡುತ್ತಿದ್ದೇವೆ ಬನ್ನಿ ಎಂದ ತಕ್ಷಣ ತಮಗೆ ಆಶ್ಚರ್ಯ ಮತ್ತು ಆನಂದವಾಗಿದ್ದು ಸುಳ್ಳಲ್ಲ, ಅವರ ಕಲ್ಪನೆಯಂತೆ ಅಚ್ಚುಕಟ್ಟಾಗಿ ಉತ್ಸವ ಮಾಡಿದ್ದು ಖುಷಿಪಡುವ ಸಂಗತಿ, ಕುಟುಂಬ ಸಮೇತ ನಿಂತು ಅವರು ನಿಸ್ವಾರ್ಥವಾಗಿ ಮಾಡಿದ ಕಾರ್ಯ ಗಮನಾರ್ಹ ಹಾಗೂ ಅಭಿನಂದನಾರ್ಹ ಎಂದರು. ಪುರದ ಇತಿಹಾಸ ಬಲು ರೋಚಕವಾಗಿದೆ ಎಲ್ಲಾ ಬಗೆಯ ಲಿಂಗುಗಳನ್ನು ಇಲ್ಲಿ ಕಾಣಬಹುದು ಶತಮಾನಗಳ ಕುರುಹು ಇರುವ ಇಲ್ಲಿ ಜನ್ಮ ತಾಲಿರುವುದೇ ಒಂದು ಸೌಭಾಗ್ಯ ಎಂದರು.
ಹಿರಿಯ ಸಾಹಿತಿ, ಪತ್ರಕರ್ತೆ ಸಾವಿತ್ರಿ ಮುಜುಂದಾರ್ ಮಾತನಾಡಿ, ಸಮಾಜ ಕಟ್ಟುವ ಕೆಲಸವನ್ನು ಮಾಡುವ ಜನರಿಗೆ ಬೆಂಬಲ ಕೊಡಬೇಕಾಗಿದ್ದು ವಾಸ್ತವ ಸಂಗತದಲ್ಲಿ ನಮ್ಮ ಕರ್ತವ್ಯ ಆದರೂ ನಾವು ಹಿಂದೆ ಬಿದ್ದಿದ್ದೇವೆ, ಮುಂದೆ ಕರೆದುಕೊಂಡು ಹೋಗುವ ಜನರನ್ನು ಬೆಂಬಲಿಸಿ ಎಂದ ಅವರು, ಪುರ ಉತ್ಸವ ಮಾಡಿದ್ದು ತಮಗಂತೂ ಬಹಳವೇ ಖಷಿ ನೀಡಿದೆ, ಮಹಿಳೆಯಾಗಿ ಹೆಮ್ಮೆ ಪಡುವ ಮತ್ತೊಂದು ಸಂಗತಿಯಂದರೆ ಉಮಲೂಟಿಯ ರಾಣಿಯ ಮನೆಯಿಂದ ಈಗಲೂ ಇಲ್ಲಿಗೆ ಕಳಶ ತಂದ ಮೇಲೆಯೇ ಜಾತ್ರೆ ನಡೆಯುವ ಸಂಗತಿ ಎಂದರು.
ಗ್ರಾಮದ ಪುರ ದೇವಸ್ಥಾನ ಅಭಿವೃದ್ಧಿ ಸಮಿತಿಯ ರಮೇಶ ಗಿರಣಿ ಮಾತನಾಡಿ, ಉತ್ಸವ ತುಂಬಾ ಚನ್ನಾಗಿ ನಡೆಸಿ ಗ್ರಾಮದ ಹೆಸರು ತಂದ ಗೊಂಡಬಾಳ ಮತ್ತು ಸಂಘಟಕರ ಕಾರ್ಯ ಶ್ಲಾಘನೀಯ, ಧನ್ಯವಾದ ಸಲ್ಲಿಸುತ್ತಾ ಮುಂದಿನ ವರ್ಷ ಹೆಚ್ಚು ಸಿದ್ಧತೆ ಹಾಗೂ ಅದ್ಧೂರಿಯಾಗಿ ನಡೆಸಲು ಸಹಾಯ ಮಾಡುತ್ತೇವೆ ಎಂದರು. ಎಲ್ಲಾ ಬಗೆಯ ಕಾರ್ಯಕ್ರಮ ಏರಿ್ಡಸಿ ಉತ್ಸವಕ್ಕೆ ಮೆರಗು ತಂದು, ಕಡಿಮೆ ಸಮಯದಲ್ಲಿ ಅವರ ಸಂಘಟನೆ ಮಾದರಿಯಾಗಿದೆ ಎಂದರು.
ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು : ತಿರುಳನ್ನಡ ಸಾಹಿತ್ಯ ಸಿರಿ ಪ್ರಶಸ್ತಿ - ಡಾ.ಶರಣಪ್ಪ
ನಿಡಶೇಸಿ, ನಟರಾಜ ಸೋನಾರ್, ಸಾವಿತ್ರಿ ಮುಜುಂದಾರ್, ತಿರುಳುಗನ್ನಡ ಕಲಾ ರತ್ನ ಪ್ರಶಸ್ತಿ - ರಾಮಚಂದ್ರ್ಪ ಉಪ್ಪಾರ, ಭಾಷಾ ಹಿರೇಮನಿ ಕಿನ್ನಾಳ, ಅಂಜಲಿ ಹೊಸಪೇಟೆ, ವಾಲ್ಮೀಕಪ್ಪ ಯಕ್ಕರನಾಳ, ಸುಧಾಕರ ತಾವರಗೇರಿ, ಅಲ್ಲಾಭಕ್ಷ ಕೊಪ್ಪಳ, ರಾಮು ಪೂಜಾರ್ ಹಾಗೂ ಯಕ್ಕರನಾಳರಿಂದ ಜನಪದ ಸಂಗೀತ, ಸುಧಾಕರ ಮುರಜಕರ್, ಸಾಹಿತ್ಯ ಎಂ. ಗೊಂಡಬಾಳ ಅವರ ಸುಗಮ ಸಂಗೀತ, ರಾಮಪ್ಪ ಪೂಜಾರ್ ತಂಡದಿಂದ ಸಮೂಹ ನೃತ್ಯಗಳು, ಕಾವ್ಯಾಂಜಲಿ
ಹೊಸಪೇಟೆ, ಪೋಲಿಸ್ ಇಲಾಖೆಯ ಮಲ್ಲಪ್ಪ, ಬಸವರಾಜ ಅವರಿಂದ ನಡೆದ ಕೆರೋಕೆ ಸಂಗೀತ, ಜ್ಯೂನಿಯರ್ ರವಿಚಂದ್ರ ಚಿನ್ನು ಕಾಸನಖಂಡಿ ನೃತ್ಯ ಕಾರ್ಯಕ್ರಮಗಳು ಮುದ ನೀಡಿದವು.
ಕಾರ್ಯಕ್ರಮವನ್ನು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗನಾಳ ಗ್ರಾಮ ಪಂಚಾಯಿತಿ ಮತ್ತು ಪುರ ಅಭಿವೃದ್ಧಿ ಸಮಿತಿ ಜಂಟಿಯಾಗಿ ಸಂಘಟಿಸಿದ್ದವು. ಭಾಷಾ ಹಿರಮೇನಿ ತಂಡ ನಾಡಗೀತೆ ಹಾಡಿದರು, ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶ ಸುರ್ವೆ ಅವರು ಸ್ವಾಗತಿಸಿದರು, ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ
ಬಾಲನಾಗಮ್ಮ ಅವರು ನಿರೂಪಿಸಿದರು, ಜ್ಯೋತಿ ಗೊಂಡಬಾಳ ವಂದಿಸಿದರು.
ಈ ವೇಳೆ ಮಾಜಿ ತಾ. ಪಂ. ಸದಸ್ಯ ವಿರೇಶ ಗುರಿಕಾರ, ಮುಖಂಡರುಗಳಾದ ತಿಪ್ಪಣ್ಣ ಕುಂಬಾರ ವಕೀಲರು, ಹನುಮಂತ ತಳ್ಳಳ್ಳಿ, ಶಿವಶಂಕರ್ಪ ಮುಳ್ಳೂರ, ಶರಣಪ್ಪ ಹಂಚಿನಾಳ, ಮುದುಕಪ್ಪ ಕನ್ನಾಳ, ವಿಜಯ ಪಾಟೀಲ್, ಬಾಲಪ್ಪ ಗುರಿಗಾರ, ಯಂಕೋಬ ಗದ್ದಿ, ಸೋಮನಾಥ ಮಡಿವಾಳ, ಹನುಮಂತ ರಡ್ಡಿ, ಹೊನ್ನಪ್ಪ ನಾಯಕ್, ಗರುಡಪ್ಪ ಹವಾಲ್ದಾರ್, ಹನುಮಂತ ತಿಪ್ಪನಾಳ, ದುರಗಪ್ಪ ಗುಡಿಹಾಳ, ಸೋಮಣ್ಣ ಮುಳ್ಳೂರ, ಅಯ್ಯಪ್ಪ ಹವಾಲ್ದಾರ್ ಇತರರು ಇದರು.
-