22ರಂದು ಗೋಕಾಕದಿಂದ ಗುಡ್ಡಾಪೂರಕ್ಕೆ ಪಾದಯಾತ್ರೆ
ಗೋಕಾಕ 15: ಪ್ರತಿ ವರ್ಷದಂತೆ ಗೋಕಾಕ ನಗರದಿಂದ ಗುಡ್ಡಾಪೂರದ ದಾನಮ್ಮ ದೇವಿ ದರುಷನಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಇದೇ ಡಿಶೆಂಬರ್ ಬುಧವಾರ ದಿ. 22ರಿಂದ 26ರವರೆಗೆ ಪಾದಯಾತ್ರೆಯು ನಡೆಯಲಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಸೋಮವಾರ ಪೇಠೆಯಲ್ಲಿರುವ ದಾನಮ್ಮದೇವಿ ದೆವಸ್ಥಾನದಲ್ಲಿ ಪೂಜೆ ನೆರವೇರಿಸುವುದರೊಂದಿಗೆ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.
ದಿ. 26ರಂದು ಗುಡ್ಡಾಪೂರಕ್ಕೆ ತಲುಪಲಿರುವ ಪಾದಯಾತ್ರೆಯು ಅಂದು ದೇವಿ ಮಂದಿರದಲ್ಲಿ ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ದಾನಮ್ಮ ದೇವಿ ಪೂಜಾರಿ ವಿಠ್ಠಲ ಪೂಜೇರಿ ಅವರ ಉಪಸ್ಥಿತಿಯಲ್ಲಿ ದೇವಿಗೆ ಉಡಿ ತುಂಬುವುದು ಹಾಗೂ ಜಂಗಮರಿಗೆ ಪ್ರಸಾದ ಕಾರ್ಯಕ್ರಮ ಜರುಗಲಿದೆ ಎಂದು ದಾನಮ್ಮದೇವಿ ಪಾದಯಾತ್ರಾ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪಾದ ಯಾತ್ರೆಯಲ್ಲಿ ಭಾಗವಹಿಸುವವರು ಸೋಮಯ್ಯ ಹಿರೇಮಠ ಮೋ: 9916267250, ಸುರೇಶ ಬೈರೂಗೋಳ (ರಾಜಾಪೂರ) ಮೋ: 9449524463, ಮಹಾದೇವಿ ಡವಳೇಶ್ವರ ( ಮೆಳವಂಕಿ) ಮೋ: 9880435237, ಸಾವಿತ್ರಿ ಪಟ್ಟಣಶೆಟ್ಟಿ ಮೋ: 9538532530, ಶಂಕ್ರಯ್ಯ ವಿಭೂತಿಮಠ( ಬೈಲಹೊಂಗಲ) 9663808142, ಬಸವರಾಜ ದಲಾಲ ( ನಾಗನೂರ) 9742150700 ಇವರನ್ನು ಸಂಪರ್ಕಿಸಬಹುದಾಗಿದೆ.