ಇಂಡಿ

ಶಿವನಿಗೆ ಶರಣಾದವನೆ ಶರಣ ; ಶರಣರ ಸಾಹಿತ್ಯ ನಿತ್ಯ ಸತ್ಯ: ಗಂಗಾ ಗಲಗಲಿ

ಶಿವನಿಗೆ ಶರಣಾದವನೆ ಶರಣ ; ಶರಣರ ಸಾಹಿತ್ಯ ನಿತ್ಯ ಸತ್ಯ: ಗಂಗಾ ಗಲಗಲಿ
He who surrenders to Shiva is a surrender; the literature of the surrendered is eternal truth: Ganga

ಇಂಡಿ 11 : ಶರಣ ಎಂದರೆ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವರು. ಕಾಯಕ ದಾಸೋಹದಲ್ಲಿ ಶ್ರದ್ದೆಯುಳ್ಳವರು ಎಂದರ್ಥ. ಶಿವನಿಗೆ ಶರಣಾದವನೆ ಶರಣ ಹೀಗಾಗಿ ಶರಣರು ತಮ್ಮದೆ ಆದ ಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ಹೀಗಾಗಿ ಶರಣ ಸಾಹಿತ್ಯ ನಿತ್ಯ ಸತ್ಯ ಎಂದು ಗಂಗಾ ಗಲಗಲಿ ಹೇಳಿದರು.ನಗರದ ಭೀರ​‍್ಪ ನಗರದ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ತಾಲೂಕು ಮಹಿಳಾ ಕದಳಿ ವೇದಿಕೆ ಸಾಹಿತ್ಯ ಪರಿಷತ್ತು ಮತ್ತು ಯುವ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ 55 ನೇ ಮನೆ ಮನೆಗಳಲ್ಲಿ ಶರಣ ಸಂದೇಶ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.1986 ರಲ್ಲಿ ಸುತ್ತೂರು ಜಗದ್ಗುರು ಶಿವರಾತ್ರಿ ರಾಜೇಂದ್ರ ಶ್ರೀಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದರು.

1998 ರಲ್ಲಿ ಮಹಿಳೆರಿಗಾಗಿ ಕದಳಿವೇದಿಕೆ ಸ್ಥಾಪನೆ ಮಾಡಿದರು. ಎಲ್ಲ ಜಿಲ್ಲೆಗಳಲ್ಲಿ ಮಹಿಳೆಯರೆಲ್ಲರೂ ಸೇರಿ ವಚನ ಸಂದೇಶಗಳನ್ನು ಸಮಾಜದಲ್ಲಿ ಬಿತ್ತುತ್ತಿದ್ದಾರೆ ಎಂದರು. ಮುಖ್ಯ ಗುರುಮಾತೆ ದಾನಮ್ಮ ಹಿರೇಮಠ, ಸಾಹಿತಿ ಡಿ.ಎನ್ ಅಕ್ಕಿ, ಎಸ್‌.ಐ.ಸುಗುರ, ಎಸ್‌.ಎಂ.ಕಡಕೋಳ ಭವಾನಿ ಗುಳೆದಗುಡ್ಡ, ಬಿ.ಎಸ್‌.ಪೋಲಿಸ ಪಾಟೀಲ  ಮಾತನಾಡಿದರು. ದತ್ತಿ ದಾನಿಗಳಾದ ಅಶೋಕ ಸಾಲಿಮಠ ಕವಿತಾ ನಿಡೋಣಿ ಮತ್ತಿತರಿದ್ದರು. ಜಾನಪದ ಗೋಷ್ಠಿಯಲ್ಲಿ ಪೂಜಾ ಕನ್ನೊಳ್ಳಿ, ಶೈಲಜಾ ಬಿರಾದಾರ, ಮಹಾನಂದಾ ಚಿಮ್ಮಲಗಿ, ಚಂದ್ರಕಲಾ ಕಾಳಗಿ, ಮಹಾದೇವಿ ದೇವರ, ನಿರ್ಮಲಾ ಹಿರೇಮಠ, ಕವಿತಾ ತಾಂಬೆ, ಸುಧಾ ಸುಣಗಾರ, ಲತಾ ಕಕ್ಕಳಮೇಲಿ, ಮಾಯಾ ಸಾತಿಹಾಳ, ಸರೋಜಿನಿ ರಿಯಾನ, ಶೋಭಾ ಸಾಲಿಮಠ ಭಾಗವಹಿಸಿದ್ದರು. 


ಸುದ್ದಿ ಓದಿ