ಶಿಗ್ಗಾವ್

ಶಿಗ್ಗಾವಿ ಹನುಮಂತ ದೇವಸ್ಥಾನದಲ್ಲಿ ನಡೆದ ಕಿಡಿಗೇಡಿ ಕೃತ್ಯಕ್ಕೆ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ತೀವ್ರ ಖಂಡನೆ; ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಆಗ್ರಹ

ಶಿಗ್ಗಾವಿ ಹನುಮಂತ ದೇವಸ್ಥಾನದಲ್ಲಿ ನಡೆದ ಕಿಡಿಗೇಡಿ ಕೃತ್ಯಕ್ಕೆ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ತೀವ್ರ ಖಂಡನೆ; ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಆಗ್ರಹ
HESCOM Chairman Azeempeer Khadri strongly condemns the act of vandalism at the Shiggaon Hanumantha T

ಲೋಕದರ್ಶನ ವರದಿ 

ಶಿಗ್ಗಾವಿ 25 : ಪಟ್ಟಣದ ಪ್ರಸಿದ್ಧ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆದ ಅಪವಿತ್ರ ಹಾಗೂ ಹೇಯ ಕೃತ್ಯವನ್ನು ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಎಸ್‌. ಖಾದ್ರಿ ಅವರು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. 

ಪಟ್ಟಣದ ಹುನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿಗ್ಗಾವಿ-ಸವಣೂರು ಕ್ಷೇತ್ರವು ಅನೇಕ ಮಹಾತ್ಮರು ನೆಲೆಸಿದ ಪುಣ್ಯಭೂಮಿ. ಇದು ಶರಣರ ನಾಡು ಮತ್ತು ಶಾಂತಿಯ ತೋಟ.

ಇಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಇಂತಹ ಪುಣ್ಯನೆಲದಲ್ಲಿ ಬೇರೆ ತಾಲೂಕಿನಿಂದ ಬಂದ ವ್ಯಕ್ತಿಯೊಬ್ಬ ಇಂತಹ ದುಷ್ಕೃತ್ಯ ಎಸಗಿರುವುದು ನಮಗೆಲ್ಲರಿಗೂ ತೀವ್ರ ನೋವು ಮತ್ತು ದಿಗ್ಭ್ರಮೆ ತಂದಿದೆ. 

ಈ ಕೃತ್ಯ ಎಸಗಿದ ಕಿಡಿಗೇಡಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು ಹಾಗೂ ಆತನಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೊಮ್ಮೆ ಯಾರೂ ಇಂತಹ ಸಾಹಸಕ್ಕೆ ಕೈಹಾಕದಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.  

ನಾನು ಈ ಆಂಜನೇಯ ದೇವಸ್ಥಾನದ ಪರಮ ಭಕ್ತ. ಪ್ರತಿವರ್ಷ ದೇವಸ್ಥಾನದ ಕಮಿಟಿಯವರು ಹಾಗೂ ಹಿಂದೂ ಬಾಂಧವರು ನನ್ನನ್ನು ಗೌರವದಿಂದ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ನಾನು ಬಂದು ದರ್ಶನ ಪಡೆದು, ಪ್ರಸಾದ ಹಾಗೂ ಅನ್ನಸಂತರೆ​‍್ಣಯಲ್ಲಿ ಭಾಗಿಯಾಗುತ್ತೇನೆ. ಇಂತಹ ಪವಿತ್ರ ಸ್ಥಳಕ್ಕೆ ಅಪಚಾರವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ. 

ಆರೋಪಿಗೆ ಪಟ್ಟಾ ನೀಡಲಾಗಿದೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ನಮ್ಮ ತಾಲೂಕಿನಲ್ಲಿ ಎಷ್ಟೋ ಬಡವರಿದ್ದಾರೆ, ಅವರಿಗೆ ಕೊಡದೆ ಆತನಿಗೆ ಯಾರು, ಯಾಕೆ ಪಟ್ಟಾ ಕೊಟ್ಟರು ಎಂಬುದರ ಬಗ್ಗೆ ಪುರಸಭೆಯ ಮುಖ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು. 


ಸುದ್ದಿ ಓದಿ