ಗುಜರಾತಮಯ ಮಾಡಲು ಕೈಬಿಡುವುದಿಲ್ಲಾ : ಕೋಳಿವಾಡ
ರಾಣೆಬೆನ್ನೂರ11: ಗುಜರಾತಿನ ಅಮುಲ್ ಹಾಲು ಸೇರಿದಂತೆ ಅದರ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುವುದೆಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ ಹೇಳಿದರು.
ಸೋಮವಾದಂದು ಗೂಗಲ್ ಮೀಟಿನಲ್ಲಿ ಅವರು ಮಾತನಾಡಿದರು. ಈಗಾಗಲೇ ಗುಜರಾತಿನಲ್ಲಿ ಈ ಅಮೂಲ್ ಹಾಗೂ ಅದರ ಉತ್ಪನ್ನಗಳು ಮಾರಾಟವಾಗುತ್ತಿದ್ದು ಇದನ್ನು ರಾಜ್ಯಕ್ಕೂ ವಿಸ್ತರಿಸಿದರೆ ನಂದಿನಿ ಹಾಲಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅನಾವಶ್ಯಕವಾಗಿ ಇಂತಹ ವಿಚಾರವನ್ನು ಜನರಲ್ಲಿ ತುಂಬಿ ದಾರಿ ತಪ್ಪಿಸಬೇಡಿ ಎಂದರು. ಡಬಲ್ ಎಂಜಿನ್ ಸಕರ್ಾರವು ಎಲ್ಲಾ ಕಡೆಗೂ ಸಹ ಜನರ ಭಾವನೆಗಳನ್ನು ಕೆದಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಅಮುಲ್ ಹಾಲು ರಾಜ್ಯದಲ್ಲಿ ಮಾರಾಟವಾಗುವುದು ಹಾಗೂ ಈ ರಾಜ್ಯವನ್ನು ಗುಜರಾತಮಯ ಮಾಡಲು ಕೈ ಬಿಡುವುದಿಲ್ಲ, ಇದನ್ನು ವಿರೋಧಿಸಿ ಶೀಘ್ರವೇ ಪ್ರತಿಭಟನೆ ಮಾಡುವುದಾಗಿ ಕೊಳಿವಾಡ ಹೇಳಿದರು