ನಾಳೆಯಿಂದ ಗುಡಿದೇವಿ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಜಮಖಂಡಿ: 30: ತಾಲೂಕಿನ ಲಿಂಗನೂರ ಗ್ರಾಮದ ಗುಡಿದೇವಿ ಜಾತ್ರಾ ಮಹೋತ್ಸವ. ಪಲ್ಲಕ್ಕಿ ಉತ್ಸವ. ರಥೋತ್ಸವ ಡಿ.1ರಿಂದ 4ರವರೆಗೆ ಜರುಗಲಿದ್ದು. ಡಿ 1 ರಂದು ಮುಂಜಾನೆ 5 ಘಂಟೆಗೆ ದೇವಿಗೆ ರುದ್ರಾಭಿಷೇಕ, 9 ಗಂಟೆಗೆ ಗುಡಿದೇವಿಯ ಪಲ್ಲಕ್ಕಿ ಉತ್ಸವದಲ್ಲಿ ಭೂತಾಳಸಿದ್ದೇಶ್ವರ ಪಲ್ಲಕ್ಕಿ, ಕಾಡಸಿದ್ದೇಶ್ವರ ಮತ್ತು ಮಲ್ಲಿಕಾರ್ಜುನ ನಂದಿ ಕೋಲು, ಡೊಳ್ಳು, ಸತ್ತಿಗೆಯೊಂದಿಗೆ ಶಿವಪೂತ್ರಾವಧೂತ ಮಠಕ್ಕೆ ತೆರಳಿ. 101 ಸುಮಂಗಲಿಯರು ಆರುತಿ ಹಿಡಿದು ಕುಂಭ ಹೊತ್ತು ಸಾಗುವರು. ಶಿವಪೂತ್ರಾವಧೂತರ ಮಠದಿಂದ ಬಂಡಾರದ ಭವ್ಯ ಮೆರವಣಿಗೆಯೊಂದಿಗೆ ಗಜರಾಜ ಹೊತ್ತು ಸಾಗುವ ಅಂಬಾರಿಯಲ್ಲಿ ಗುಡಿದೇವಿಯ ಮೂರ್ತಿ, ದೇವಿಯ ಪಲ್ಲಕ್ಕಿಯು ವಿಜೃಂಬನೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಗುಡಿದೇವಿ ದೇವಸ್ಥಾನದವರೆಗೆ ಹೊರಡುವುದು.
ಸಂಜೆ 5 ಗಂಟೆಗೆ ಅಲಂಕಾರ ಭರಿತವಾದ ದೇವಿಯ ಭವ್ಯರಥೋತ್ಸವ. ಬಬಲಾದಿ ಮಠ ಬಸವರಾಜ ಶ್ರೀಗಳು, ಓಂಕಾರಯ್ಯ ಶ್ರೀಗಳು, ಶಿವಪುತ್ರ ಅವಧೂತ ಸ್ವಾಮಿಜೀ ಅವರ ಅಮೃತ ಹಸ್ತದಿಂದ ರಥ ಸಾಗುವದು.
ರಾತ್ರಿ ವಿವಿಧ ಗ್ರಾಮದವರಿಂದ ಡೊಳ್ಳಿನ ಪದಗಳು. ರಾತ್ರಿ 10.30 ಗಂಟೆಗೆ ಬಂಡಿಗಣಿಯ ಬಸವೇಶ್ವರ ನಾಟ್ಯ ಸಂಘದಿಂದ ನಾಟಕ, ಬೈಲಾಟ ಜರುಗುವುದು.ಡಿ.2 ರಂದು ಮುಂಜಾನೆ 10 ಗಂಟೆಗೆ ಸಂಗ್ರಾಮ ಕಲ್ಲು, ಗುಂಡು, ಚೀಲ ಎತ್ತುವ ಸ್ಪರ್ಧೆಗಳು ಹೀಗೆ ಹಲವಾರು ಕಾರ್ಯಕ್ರಮಗಳು ಜರುಗಲಿವೆಂದು ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.