ರಾಯಬಾಗ

ತಾಲೂಕು ಮಟ್ಟದ ಎಸ್ಸಿ,ಎಸ್ಟಿ ಕುಂದುಕೊರತೆ ಸಭೆ

ತಾಲೂಕು ಮಟ್ಟದ ಎಸ್ಸಿ,ಎಸ್ಟಿ ಕುಂದುಕೊರತೆ ಸಭೆ

ಲೋಕದರ್ಶನ ವರದಿ

ರಾಯಬಾಗ 24: ಪಟ್ಟಣದ ಕೆಎಲ್ಇ ಕಾಲೇಜ್ ಸಭಾಂಗಣದಲ್ಲಿ ಜಿಲ್ಲಾ ಆರಕ್ಷಕ ಅಧೀಕ್ಷಕ ಡಾ.ಸಂಜೀವ ಪಾಟೀಲ ಅವರ ನೇತೃತ್ವದಲ್ಲಿ ಇತ್ತಿಚೆಗೆ ತಾಲೂಕು ಮಟ್ಟದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆ ನಡೆಯಿತು. 

ತಾಲೂಕಿನ ಇನ್ನೂ ಹಲವಾರು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸ್ಮಶಾನದ ಸೌಲಭ್ಯ ಇರುವುದಿಲ್ಲ. ಕೆಲವೊಂದು ಕಡೆ ಸ್ಮಶಾನ ಜಾಗದಲ್ಲಿ ಯೋಗ್ಯ ನಿರ್ವಹಣೆ ಇರುವುದಿಲ್ಲ. ಅವುಗಳ ಒತ್ತುವರಿಯಾಗುತ್ತಿದೆ ಎಂದು ದಲಿತ ಮುಖಂಡರು ಎಸ್ಪಿ ಅವರ ಗಮನಕ್ಕೆ ತಂದರು. ತಾಲೂಕು ಅನುಷ್ಠಾನಾಧಿಕಾರಿಗಳು ಎಸ್ಸಿ/ಎಸ್ಟಿ ಜನಾಂಗಕ್ಕೆ ಬರುವ ಸಕರ್ಾರದ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲವೆಂದು ಆರೋಪಿಸಿದರು. 

ಸಭೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಸಾಲ ಮಂಜೂರಾತಿ, ಶಾಲಾ ಮಕ್ಕಳಿಗೆ ಸ್ಕಾಲರ್ಶೀಪ್ ಕುರಿತು ಚಚರ್ಿಸಲಾಯಿತು. 

ಸಭೆಯಲ್ಲಿ ಅಥಣಿ ಡಿವಾಯ್ಎಸ್ಪಿ ಶ್ರೀಪಾದ ಜಲ್ದೆ, ತಹಶೀಲ್ದಾರ ಆರ್.ಎಚ್.ಬಾಗವಾನ, ಸಿಪಿಐ ಎಚ್.ಡಿ.ಮುಲ್ಲಾ, ಸಿಡಿಪಿಒ ಸಂತೋಷಕುಮಾರ ಕಾಂಬಳೆ, ಮುಖಂಡರಾದ ಆರ್.ಎಸ್.ಶಿರಗಾಂವೆ, ಶ್ರವಣ ಕಾಂಬಳೆ, ಅಪ್ಪಾಸಾಬ ಕೆಂಗನ್ನವರ, ತ್ಯಾಗರಾಜ ಕದಂ ಸೇರಿದಂತೆ ಅನೇಕರು ಇದ್ದರು 

ಸುದ್ದಿ ಓದಿ