ಇಂಡಿ

ಶಿರಶ್ಯಾಡ ಗ್ರಾಮಸ್ಥರಿಂದ ಆತ್ಮ ಹಿರೇಮಠಗೆ ಅಭಿನಂದನೆ

ಶಿರಶ್ಯಾಡ ಗ್ರಾಮಸ್ಥರಿಂದ ಆತ್ಮ ಹಿರೇಮಠಗೆ ಅಭಿನಂದನೆ

ಇಂಡಿ 03: ತಾಲೂಕಿನ ಶಿರಶ್ಯಾಡ ಗ್ರಾಮದ ಆತ್ಮ. ವಿ. ಹಿರೇಮಠ ಅವರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ನಿರಪರಾಧಿಗಳಿಗೆ ನ್ಯಾಯ ಕೊಡಿಸಿದ್ದಾರೆ. ಕೇಂದ್ರ ಸರಕಾರದ ಪರವಾಗಿ ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು ಈಗ ಮತ್ತೆ ಎರಡನೇ ಅವಧಿಗೆ ಮುಂದುವರೆದಿದ್ದಾರೆ. 

ಶಿರಶ್ಯಾಡ ಗ್ರಾಮಸ್ಥರು ಆತ್ಮ ಹಿರೇಮಠ ಅವರಿಗೆ ಅಭಿನಂದನೆಯ ಮಹಾಪೂರವನ್ನು ಸುರಿಸುತ್ತಿದ್ದಾರೆ. 



ಸುದ್ದಿ ಓದಿ