ಇಂಡಿ

ಮರುಳಸಿದ್ಧೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮರುಳಸಿದ್ಧೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಇಂಡಿ 20: ನಗರದಲ್ಲಿ ನಡೆದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ವಲಯ ಮಟ್ಟದ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಮರುಳಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಇವರ ಸಾಧನೆಗೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಹಾಗೂ ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥಾಪಕ ನಾಗೇಶ ಹೆಗಡ್ಯಾಳ ಅವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಖೋ ಖೋ ಹಾಗೂ ಕಬಡ್ಡಿ ಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಖೋ ಖೋದಲ್ಲಿ ಬಾಲಕರು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಯ್ಕೆಯಾಗಿದ್ದಾರೆ.100 ಮೀ ಓಟದಲ್ಲಿ ಲಕ್ಷ್ಮಿ ಬಿರಾದಾರ ಹಾಗೂ ಸಮರ್ಥ ಬಡಿಗೇರ ಪ್ರಥಮ, 200 ಮೀ ಓಟದಲ್ಲಿ ಸಮರ್ಥ ಬಡಿಗೇರ ಪ್ರಥಮ, ವೈಶಾಲಿ ವಾಲಿಕಾರ ದ್ವಿತೀಯ, 800 ಮೀ ಓಟದಲ್ಲಿ ಶೃತಿ ಕುಂಬಾರ ಹಾಗೂ ಕಿರಣ್ ಮೇಲಿನಕೇರಿ ದ್ವಿತೀಯ, 1500 ಮೀ ಓಟದಲ್ಲಿ ಲಕ್ಷ್ಮಿ ಬಿರಾದಾರ ಪ್ರಥಮ, 3000 ಮೀ ಓಟದಲ್ಲಿ ಭೌನೇಶ್ವರಿ ತಾರಾಪೂರ, ನಿಂಗಪ್ಪ ಪೂಜಾರಿ ಪ್ರಥಮ ಹಾಗೂ ಐಶ್ವರ್ಯ ಅಂಜುಟಿಗಿ, ಮಾಂತೇಶ ಕುಂಬಾರ ದ್ವಿತೀಯ, ಎತ್ತರ ಜಿಗಿತದಲ್ಲಿ ಕಿರಣ ಮೇಲಿನಕೆರಿ ದ್ವಿತೀಯ, ಉದ್ದ ಜಿಗಿತದಲ್ಲಿ ಸ್ನೇಹಾ ಇಂಡಿ, ಪ್ರಥಮ ಹಾಗೂ ಸಮರ್ಥ್‌ ಬೆಳ್ಳಕ್ಕಿ ದ್ವಿತೀಯ, 4*100 ರೀಲೆ ಹಾಗೂ 4*400 ರೀಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ. ಅಡತಡೆ ಓಟದಲ್ಲಿ ಸ್ನೇಹಾ ಇಂಡಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಮರುಳಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಇವರ ಸಾಧನೆಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. 

ಶಾಲೆಯ ಮುಖ್ಯಗುರು ಎಸ್ ಜಿ ನಾರಯಣಕ, ಹಾಗೂ ಆರ್ ವಿ ಹೂಗಾರ, ಪಿ ಸಿ ಬಗಲಿ, ಪಿ ಎಲ್ ಬೇನೂರ, ಆರ್ ಎಮ್ ತಳವಾರ, ಎನ್ ಸಿ ಕುಂಬಾರ, ಎಂ ಎಸ್ ಹಳ್ಳದಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ