ಗೋಕಾಕ್

ಬೆಟಗೇರಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಗೋಕಾಕ ತಹಶೀಲ್ದಾರ ಭೇಟಿ

ಬೆಟಗೇರಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಗೋಕಾಕ ತಹಶೀಲ್ದಾರ ಭೇಟಿ

ವರದಿ:ಅಡಿವೇಶ ಮುಧೋಳ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗಳಲ್ಲಿ ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರ ಪರೀಶೀಲನೆ ಪ್ರಯುಕ್ತ ಗೋಕಾಕ ತಹಶೀಲ್ದಾರ ಡಾ.ಮೋಹನ ಭಸ್ಮೆ ಜು.11ರಂದು ಸ್ಥಳೀಯ ಉಭಯ ಶಾಲೆಗೆ ಭೇಟಿ ನೀಡಿ ಕಾಳಜಿ ಕೇಂದ್ರಗಳ ಸ್ಥಳ, ಶಾಲಾ ಕೊಠಡಿಗಳ ಪರೀಶೀಲನೆ ಬಳಿಕ ಸ್ಥಳೀಯ ಶಾಲೆಯ ಪ್ರಗತಿ, ಮಧ್ಯಾಹ್ನ ಬಿಸಿಯೂಟ, ಶೈಕ್ಷಣಿಕ ವ್ಯಾಸಂಗದ ಕುರಿತು ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

ತಹಶೀಲ್ದಾರ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ: ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ವಿದ್ಯಾರ್ಥಿ ಬಿಸಿಯೂಟ ಮಾಡುತ್ತಿರುವ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗ, ಬಿಸಿಯೂಟದ ಕುರಿತು ವಿಚಾರಿಸಿದ ಬಳಿಕ ಇಲ್ಲಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳೊಂದಿಗೆ ಬೆರೆತು ಕೆಲ ಹೊತ್ತು ಕಾಲ ಕಳೆದರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಊಟ ಮಾಡುತ್ತಿರುವ ವೇಳೆ ಮಕ್ಕಳಿಗೆ ನೀರು ಕುಡಿಸಿ ಮಮತೆ ಮೆರೆದ ತಹಶೀಲ್ದಾರ ಡಾ.ಮೋಹನ ಭಸ್ಮೆ ಅವರ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. 

ಕೌಜಲಗಿ ಹೊಬಳಿ ಕಂದಾಯ ನೀರೀಕ್ಷಕ ಸುಂದರ ಪೂಜೇರಿ, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ರುದ್ರಮ್ಮ ಪೂಜೇರಿ, ಫ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಪ್ರಧಾನ ಗುರುಗಳಾದ ವೈ.ಸಿ.ಶೀಗಿಹಳ್ಳಿ, ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಮತ್ತೀತರರು ಇದ್ದರು. 


ಸುದ್ದಿ ಓದಿ