ಸೇವಾ ವಿಭಾಗದಿಂದ ಗೋಸೇವೆ ಕಾರ್ಯಕ್ರಮ

ಸೇವಾ ವಿಭಾಗದಿಂದ ಗೋಸೇವೆ ಕಾರ್ಯಕ್ರಮ

ಬಳ್ಳಾರಿ 16: ಥಿಯೋಸೋಫಿಕಲ್ ಸಮಾಜ, ಗೌಳೇರಹಟ್ಟಿ ಬಳ್ಳಾರಿ ಇವರ ಸೇವಾ ವಿಭಾಗದಿಂದ ಭಾನುವಾರ ಬೆಳಿಗ್ಗೆ 11.30 ಗಂಟೆಗೆ ಗೋಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಮಧೇನು ಪೂಜೆ ಅತಿ ಶ್ರೇಷ್ಠವಾದದ್ದು, ಹಸುವು ಕನಸಿನಲ್ಲಿ ಅಥವಾ ಮುಂದೆ ಬಂದರೆ ಅದು ಶುಭಸೂಚನೆ ಎಂದು ತಿಳಿಯುವುದು. ಹಿಂದು ಸಂಪ್ರದಾಯದ ಪ್ರಕಾರ ಪ್ರತಿ ದಿನ ಪೂಜೆ ಮಾಡಿದರೆ ಎಲ್ಲಾ ರೀತಿಯ ಒಳ್ಳೆಯದೆಂದು ಸೇವಾ ವಿಭಾಗದ ಅಧ್ಯಕ್ಷರಾದ ಮೆದೆಹಾಳ್ ಬಸವರಾಜ ಅವರು ತಿಳಿಸಿರುತ್ತಾರೆ. ಅದೇರೀತಿಯಾಗಿ ಸಂಸ್ಥೆಯ ಅಧ್ಯಕ್ಷರಾದ ಎ.ಐ.ಬಸವರಾಜರೆಡ್ಡಿ ಅವರು ಕೂಡಾ ಡಾ. ಅನಿಬೆಸೆಂಟ್ ಅಮ್ಮನವರು ಸ್ಥಾಪನೆ ಮಾಡಿದ್ದು, ಅಂದಿನ ದಿನ ಅನಕ್ಷರತೆ ತೊಲಗಲಿ ಎಂದು ಬಹಳ ಶ್ರಮಪಟ್ಟಿರುತ್ತಾರೆಂದು ತಿಳಿಸಿದರು. ಇನ್ನೂ ಅನೇಕರು ಈ ಸಂದರ್ಭದಲ್ಲಿ ಮಾತನಾಡಿದರು. 

ಸದರಿ ಗೋಶಾಲೆ ಗೌಳೇರಹಟ್ಟಿಯ ಶ್ರೀ ಬಾಲಾಂಜಿನೇಯಸ್ವಾಮಿ ದೇವಸ್ಥಾನದಲ್ಲಿದ್ದು, ಇಲ್ಲಿನ 50 ಹಸುಗಳಿಗೆ 15 ದಿನಗಳಿಗೆ ಸರಿಯಾಗುವಷ್ಟು ಎಲ್ಲಾ ತರಹದ ಕಾಳುಗಳನ್ನು ಪುಡಿ ಮಾಡಿ ಚೀಲಗಳಲ್ಲಿ ಇಡಲಾಗಿದ್ದು, ಇದನ್ನು ಹಸುಗಳಿಗೆ ಮುಂದಿನ 15 ದಿನಗಳವರೆಗೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೇವಾ ವಿಭಾಗದ ಅಧ್ಯಕ್ಷರಾದ ಮೆದೆಹಾಳ್ ಬಸವರಾಜ, ಕಾರ್ಯದಶರ್ಿ ಕಾಂಡ್ರಾ ನಾಗರಾಜ, ಖಜಾಂಚಿ ಶ್ರೀಮತಿ ಕೆ.ವಾಣಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಎ.ಐ.ಬಸವರಾಜರೆಡ್ಡಿ, ಕಾರ್ಯದಶರ್ಿ ಎಸ್.ಹನುಮಂತಶೆಟ್ಟಿ, ಖಜಾಂಚಿ ಕೆ.ಬಾಲಗಂಗಾಧರ ಸದಸ್ಯರಾದ ಕೆ.ಶಿವಕುಮಾರ್, ಗಂಗಾಶೆಟ್ಟಿ, ಜೆ.ಗೋವಿಂದರಾಜುಲು, ಮಲ್ಲಿಕಾಜರ್ುನ ಮಸ್ಕಿ, ಅಚ್ಚಪ್ಪ ನಾಗರಾಜ, ರತ್ನಾಲ ಗಣೇಶ, ಕೆ.ಎರ್ರಿಸ್ವಾಮಿ, ಶಿವರಾಮರೆಡ್ಡಿ, ಚಂದ್ರಕಾಂತ್, ಮೆದೆಹಾಳ್ ಕೃಷ್ಣ ದಂಪತಿಗಳು, ಕೆ.ಬಸವರಾಜ, ಓಂಪ್ರಕಾಶ್ ಜೈನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ