ಜಮಖಂಡಿ

ಸ್ವಾವಲಂಬಿ ಜೀವನಕ್ಕೆ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಿ: ಕಾಶಿನಾಥ

ಸ್ವಾವಲಂಬಿ ಜೀವನಕ್ಕೆ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಿ: ಕಾಶಿನಾಥ

ಜಮಖಂಡಿ 05: ಮಹಿಳೆಯರಿಗಾಗಿ ಸರಕಾರ ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ವಿದ್ಯುತ್, ಬಸ್ ಪ್ರಯಾಣ, ಸಿಲೇಂಡರ್ ಗ್ಯಾಸ್ ಹೀಗೆ ಹಲವಾರು ಯೋಜನೆಯ ಸದ್ದುಪಯೋಗವನ್ನು ಪಡೆದುಕೊಳ್ಳವ ಜೊತೆಗೆ ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಸಿ,ಎಸ್,ಕಾಶಿನಾಥ  ಹೇಳಿದರು.   

ನಗರದ ಯಲ್ಲುಬಾಯಿವಿಠ್ಠಲ್ ಮಂದಿರದಲ್ಲಿ ನಡೆದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಅಡವಿ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ಹೊಲಿಗೆ ತರಬೇತಿ ಪಡೆದುಕೊಂಡು. ಮಹಿಳೆಯರ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಿ ಮತ್ತು ಉಳಿತಾಯ ಮಾಡಬೇಕು. ಹೊಲಿಗೆ ತರಬೇತಿಯಲ್ಲಿ ಒಂದು ತಿಂಗಳು ಸಂಬಳವನ್ನು ನೀಡಲಾಗುತ್ತದೆ. ಹೊಲಿಗೆ ಮಷೀನ್ ಸಹ ನೀಡಲಾಗುವದು. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕೆಂಬ ಉದ್ದೇಶ ಹೊಂದಿದೆ ಎಂದರು. 

ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶಶಿಕಾಂತ ತೇರದಾಳ, ಯಶವಂತ ಕಲೂತಿ, ರವಿ ಜಂಬಗಿ, ಶಿವಾನಂದ, ಸಂಗೀತಾ ಗಾಡಿವಡ್ಡರ, ಪುಂಡಲಿಕ ಹೊಸಮನಿ, ಪ್ರವೀಣ ಪಾಟೀಲ,ಅಪ್ಪಾಸಾಬ, ಮಹಾದೇವ, ರಾಜಶೇಖರ ಮಹೇಶವಾಡಗಿ, ಸುಶ್ಮೀತಾ ಐಹೊಳೆ ಇದ್ದರು. 


ಸುದ್ದಿ ಓದಿ