ಜಮಖಂಡಿ

ಸಂಭ್ರಮದಿಂದ ಗಣೇಶ ವಿಗ್ರಹ ವಿಸರ್ಜನೆ ಕಾರ್ಯಕ್ರಮ

ಸಂಭ್ರಮದಿಂದ ಗಣೇಶ ವಿಗ್ರಹ ವಿಸರ್ಜನೆ ಕಾರ್ಯಕ್ರಮ

ಜಮಖಂಡಿ 24: ಮನೆಗಳಲ್ಲಿ ಪ್ರತಿಷ್ಠಾಪಣೆ ಮಾಡಿರುವ ಗಣೇಶನ ಮೂರ್ತಿಗಳನ್ನು ಅತೀ ಸಂಭ್ರಮದಿಂದ ಮಹಿಳೆಯರು, ಮಕ್ಕಳು, ಯುವಕರು ಸೇರಿಕೊಂಡು ವಿವಿಧ ವಾದ್ಯಮೇಳದೊಂದಿಗೆ ಐದನೇ ದಿನದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. 

ನಗರದ ಗಜಾನನ ಮಾಹಾಮಂಡಳ ಮತ್ತು ನಗರಸಭೆ ಆಯೋಜಿಸಿದ ಗಣೇಶನ ವಿಸರ್ಜನೆಯ ತೊಟ್ಟಿಗಳು ಶಾಂತಿನಗರ, ಆನೆಕೆರೆ, ಲಕ್ಕನ ಕೆರೆಗಳಲ್ಲಿ ಇಡಲಾಗಿತ್ತು. ಮನೆಯಲ್ಲಿ ಇರುವ ಗಣೇಶನ ವಿಗ್ರಹಗಳನ್ನು ನಾನಾ ಬಗ್ಗೆಯಿಂದ ಪೂಜೆಯನ್ನು ಸಲಿಸಿ. ಗಣೇಶ, ಗಣೇಶ ಮೊರೆಯಾ ಎಂದು ಘೋಷಣೆಯನ್ನು ಕೂಗುತಾ ತೊಟ್ಟಿಯಲ್ಲಿ ಮುಳಗಿಸಿದ ನಂತರ. ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.  

ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ ನಗರದ ಜನತೆ ಗಣೇಶನ ವಿಸರ್ಜನೆಯಲ್ಲಿ ಬ್ಯಾಂಜೋ, ಕರಡಿ ಮಜಲು, ಡಿಜೆ ಹೀಗೆ ಹಲವಾರು ವಾದ್ಯಮೇಳದೊಂದಿಗೆ ನಗರದ  ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ. ಅತೀ ಸಂಭ್ರಮ, ಸಡಗರದಿಂದ ಯುವಕರು ಕುಣಿದು ಕುಪ್ಪಳಿಸುತ್ತಾ. ರಸ್ತೆಯ ಉದ್ದಗಲಕ್ಕೂ ಪಟ್ಟಾಕಿಯನ್ನು ಸಿಡಿಸಿ. ಗಣೇಶನ ಮೂರ್ತಿಗಳ ವಿಸರ್ಜನೆ ಸಮಯದಲ್ಲಿ ತೊಡಗಿದರು.ಕೆಲವಂದಿಷ್ಟು ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಏಳು ದಿನಗಳ ಕಾಲವರೆಗೆ ಇಡಲಾಗಿದೆ. ಕೆರೆಯ ಸುತ್ತಮುತ್ತಲು ನಗರಸಭೆಯ ವತಿಯಿಂದ ಸುತ್ತಮುತ್ತಲು ಸ್ವಚ್ಛೆತೆಯ ಬಗ್ಗೆ ಗಮನಹರಿಸುತ್ತಿದ್ದರು. 

ಇದೇ ಸಂದರ್ಭದಲ್ಲಿ ಮುತ್ತಿನಕಂತಿ ಮಠದ ಶ್ರೀಗಳು, ಶಹರ ಠಾಣಿಯ ಪಿಎಸ್‌ಐ, ಕುಶಾಲ ವಾಗಮೋರೆ, ಅಜೇಯ ಕಡಪಟ್ಟಿ, ಗೀರೀಶ ಮನಗೂಳಿ, ವೀರು ಕಲೂತಿ, ಶ್ರೀಧರ ಕನ್ನೂರ, ಪ್ರಶಾಂತ ಚರಕೆ, ಶ್ರೀಶೈಲ ದೆಬಡೆ, ಶ್ರೀಧರ ಕಂಬಿ, ಗಣೇಶ ಶಿರಗನ್ನವರ, ಪ್ರಶಾಂತ ಗಾಯಕವಾಡ, ಶ್ಯಾಮ ಗಣಾಚಾರಿ, ಪ್ರಶಾಂತ ಶಂಕ್ರ​‍್ಪಗೋಳ, ಪ್ರಭು ಜನವಾಡ, ರುದ್ರಯ್ಯ ಕರಡಿ, ಅನೀಲ ಬಾಗಿನಮನಿ, ಸುನೀಲ ಭೂವಿ, ಪವಣ ಸಾಳೊಂಕೆ, ಲೋಕೆಶ ಪೂಜಾರ, ಸಂದೀಪ ಜಾಧವ ಸೇರಿದಂತೆ ಅನೇಕರು ಇದ್ದರು. ನಗರಸಭೆ, ಅಗ್ನಿ ಶಾಮಕದಳ, ಪೋಲಿಸ್, ಗೃಹರಕ್ಷಕ ದಳದ ಸಿಬಂದಿಗಳು ಶಾಂತೆತೆ. ಸ್ವಚ್ಛತೆ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದರು.  


ಸುದ್ದಿ ಓದಿ