ಗಂಗಾವತಿ

ಜುಲೈ -09 ರಂದು ಹೃದ್ರೋಗ, ಕ್ಯಾನ್ಸರ್, ನರರೋಗ ಇತರೆ ಉಚಿತ ತಪಾಸಣೆ, ಚಿಕಿತ್ಸೆ

ಜುಲೈ -09 ರಂದು ಹೃದ್ರೋಗ, ಕ್ಯಾನ್ಸರ್, ನರರೋಗ ಇತರೆ ಉಚಿತ ತಪಾಸಣೆ, ಚಿಕಿತ್ಸೆ

ಗಂಗಾವತಿ 08: ನಗರದ ಸಿಬಿಎಸ್ ಕಲ್ಯಾಣ ಮಂಟಪದ ಬಳಿ ಇರುವ ಯಾತ್ರಿ ನಿವಾಸದಲ್ಲಿ ಜುಲೈ -09 ರವಿವಾರ ಬೆಳಗ್ಗೆ -09 ರಿಂದ ಸಂಜೆ 05 ಗಂಟೆಯವರೆಗೆ ಉಚಿತ ಹೃಚಿತ ಹೃದ್ರೋಗ, ನರರೋಗ, ಬಿಪಿ, ಶುಗರ್ ಹಾಗು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತಿದ್ದು ಸಾರ್ವಜನಿಕರು ಇದರ ಇದರ ಪ್ರಯೋಜನಾ ಪಡೆದುಕೊಳ್ಳಬೇಕೆಂದು ರೋಟರಿ ಕ್ಲಬ್ ಅಧ್ಯಕ್ಷ ಎಸ್‌. ಸದಾನಂದ ಶೇಠ್ ಹೇಳಿದರು. 

ಅವರು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಶನಿವಾರ ಮಾತನಾಡಿದರು. 

ರೋಟರಿ ಕ್ಲಬ್ ಗಂಗಾವತಿ, ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್ ಮಾರುತಿ ಕಣ್ಣಿನ ಆಸ್ಪತ್ರೆ ಗಂಗಾವತಿ, ಕೆ.ಎಸ್‌.ಆಸ್ಪತ್ರೆ ಕೊಪ್ಪಳ ಇವುಗಳ ಸಹಯೋಗದಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಹಾಗು ಅಗತ್ಯ ಕಂಡು ಬಂದ ಬಿಪಿಎಲ್, ಅಂತ್ಯೋದಯ, ಧರ್ಮಸ್ಥಳ ಗುಂಪಿನ ಸದಸ್ಯರಿಗು, ಯಶಸ್ವಿನಿ ಮತ್ತು ಕಾರ್ಡ್‌ದಾರರಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು. 

ಕಿಡ್ನಿಯಲ್ಲಿ ಅರಳು, ಮೂತ್ರಪಿಂಡ ರೋಗ, ಈ ರೋಗಗಳಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ಲಯನ್ ರಾಮಕೃಷ್ಣ ಇವರು ತಿಳಿಸಿದರು. 

ಇದೇ ವೇಳೆ ಆರೋಗ್ಯ ವಿಮೆಯ ಮಹತ್ವವನ್ನು ಗಂಗಾವತಿ ತಾಲೂಕಾ ವಕೀಲರ ಸಂಘದ ತಾಲೂಕಾ ಕಾರ್ಯದರ್ಶಿ ಮಂಜುನಾಥ್ ಹೆಚ್‌.ಎಂ.ವಕೀಲರು ತಿಳಿಸಿದರು. 

ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್‌ನ ರಹೀಮ್ ಹಾಗು ಕೊಪ್ಪಳ ಕೆ.ಎಸ್‌. ಆಸ್ಪತ್ರೆಯ ರವಿ ಇದ್ದರು. 


ಸುದ್ದಿ ಓದಿ