ಜಮಖಂಡಿ

ಉಚಿತ ಬಂಜೆತನ ನಿವಾರಣೆ ಶಿಬಿರ

ಉಚಿತ ಬಂಜೆತನ ನಿವಾರಣೆ ಶಿಬಿರ

ಜಮಖಂಡಿ 05: ಇಂದಿನ ದಿನಗಳಲ್ಲಿ ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವೈದ್ಯಕಿಯ ಸ್ಥಿತಿಯಾಗಿದೆ. ಬಂಜೆತನ ತಜ್ಞರೊಂದಿಗೆ ಸಮಾಲೋಚನೆ ಮಾಡಿಕೊಳ್ಳಬೇಕು. ನಮ್ಮ ಆಸ್ಪತ್ರೆಯಲ್ಲಿ ಕಳೆದ 10 ವರ್ಷದಿಂದ ಬಂಜೆತನ ನಿವಾರಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆಂದು ಡಾ.ವಿಜಯಲಕ್ಷ್ಮಿ ಬಾಬುರೆಡ್ಡಿ ತುಂಗಳ ಹೇಳಿದರು. 

ನಗರದ ಶಾರದಾ ಹಾಸ್ಪಿಟಲ್‌ದಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರ ಹಮ್ಮಿಕೊಂಡಿದ್ದ ಉಚಿತ ಬಂಜೆತನ ನಿವಾರಣೆ ಶಿಬಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜಂಜೆತನ ಶಾಪ ಎಂದು ತಿಳಿದುಕೊಂಡು ಮೂಢ ನಂಬಿಕೆಗೆ ವಾಲುತ್ತಿದ್ದರು. ತಂತ್ರಜ್ಞಾನ ಬೆಳೆದಂತೆ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ. ಶೇ.85 ರಷ್ಟು ಬಂಜೆತನ ನಿವಾರಿಸುವಷ್ಟು ಹೊಸ ತಂತ್ರಜ್ಞಾನದ ವಿಧಾನಗಳು ಬಂದಿವೆ. ಅದರಲ್ಲಿ ಸಾಕಷ್ಟು ರೋಗಿಗಳು ಮಗುವಿನೊಂದಿಗೆ ತಮ್ಮ ಜೀವನ ಸುಖಮಯವಾಗಿದ್ದಾರೆ. ನಮ್ಮಲ್ಲಿ ಸುಸಜ್ಜಿತ ಲ್ಯಾಬ್ ಮತ್ತು ಸೋನೋಗ್ರಫಿ ವ್ಯವಸ್ಥೆ ಲಭ್ಯವಿದೆ ಎಂದರು. 

ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರದ ವೈದ್ಯೆ ಡಾ.ಪವಿತ್ರಾ ಶ್ಯಾಮಸುಂದರ ಮಾತನಾಡಿ, ಚಿಕಿತ್ಸೆಯು ಪ್ರೌಢ ಮೊಟ್ಟೆಗಳನ್ನು ಅಂಡಾಶಯದಿಂದ ಸಂಗ್ರಹಿಸಲಾಗುತ್ತದೆ. ಪ್ರಯೋಗಾಲಯದಲ್ಲಿ ವೀರ್ಯದಿಂದ ಫಲವತ್ತಾಗಿಸಲಾಗುತ್ತದೆ. ತದನಂತರ ಭ್ರೂಣಗಳು ಎಂದು ಕರೆಯಲ್ಪಡುವ ಒಂದು ಅಥವಾ ಹೆಚ್ಚಿನ ಫಲವತ್ತಾದ ಮೊಟ್ಟೆಗಳನ್ನು ಗರ್ಭಾಂಶಯದಲ್ಲಿ ಇರಿಸಲು ಒಂದು ವಿಧಾನವನ್ನು ಅನುಸರಿಸಲಾಗುತ್ತದೆ. ಅಲ್ಲಿ ಆರೋಗ್ಯಕರವಾಗಿ ಶಿಶು ಬೆಳೆಯಲು ಪ್ರಾರಂಭಿಸುತ್ತದೆ.  

ಅಂಡಾಣು ಅಥವಾ ಭ್ರೂಣಗಳು ಮತ್ತು ವೀರ್ಯಾಣುಗಳ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ. ಇದಕ್ಕೆ ಸಹಾಯಕ ಸಂತಾನೋತ್ತತ್ತಿ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರವು ವಿಶ್ವದಲ್ಲಿ ಬಂಜೆತನ ಚಿಕಿತ್ಸೆಗಳಿಗೆ ಪ್ರಸಿದ್ಧಿ ಪಡೆದಿದೆ. ಕೇಂದ್ರವು ಶೇ. 80ರಷ್ಟು ಯಶಸ್ಸು ನೀಡುತ್ತಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಶಿವಯ್ಯ ಮಠಪತಿ, ಸಾವಿತ್ರಿ ಗೊರನಾಳ ಸೇರಿದಂತೆ ನೋವಾ ಐವಿಎಫ್ ಫರ್ಟಿಲಿಟಿ ಕೇಂದ್ರದ ತಂಡದವರು ಇದ್ದರು. 


ಸುದ್ದಿ ಓದಿ