ಸಿ.ಎಸ್.ಆರ್ ಅಸೋಸಿಯೇಷನ್ ನಿಂದ 20ನೇ ವಾಡರ್ಿನಲ್ಲಿ ಉಚಿತ ಕ್ಯಾಲೆಂಡರ್ ವಿತರಣೆ

ಸಿ.ಎಸ್.ಆರ್ ಅಸೋಸಿಯೇಷನ್ ನಿಂದ 20ನೇ ವಾಡರ್ಿನಲ್ಲಿ ಉಚಿತ ಕ್ಯಾಲೆಂಡರ್ ವಿತರಣೆ

ಬಳ್ಳಾರಿ 31:ನಗರದ 20ನೇ ವಾರ್ಡ ಪ್ರದೇಶದಲ್ಲಿ ಬರುವ ಬಸವೇಶ್ವರ ನಗರ, ಗಾಂಧಿ ನಗರ, ಅಲ್ಲಂ ಲೆಔಟ, ಟಿ.ಜಿ.ಬಡಾವಣೆ, ರೇಣುಕಾಚಾರ್ಯ ನಗರ, ಸುಸ್ಮಾ ಸ್ವರಾಜ ಬಡಾವಣೆ, ವಾಜಪೇಯಿ ಲೆಔಟ, ನೇಹರು ಕಾಲೋಣಿ, ಜೊತೆಗೆ ಗಾಂಧಿ ನಗರದ ಸ್ಲಂ ಏರಿಯಾಗಳಲ್ಲಿ ಸೋಮುವಾರ ಸಿ.ಎಸ್.ಆರ್ ಅಸೋಸಿಯೆಷೆನ್ನ ಸಂಸ್ಥಾಪಕ ಚಾನಾಳ ಶೇಖರ, ಉಪಾಧ್ಯಕ್ಷೆ ಲತಾ ಶೇಖರ, ಸೇರಿದಂತೆ ಇನ್ನು ಹಲವಾರು ಮುಖಂಡರುಗಳು ಬೆಳಗಿನ ಜಾವ ವಾಡರ್ಿನ ಹಲವಾರು ಬಡಾವಣೆಗಳಿಗೆ ಭೇಟಿ ನೀಡಿ ವಿವಿದ ಸಮೂದಾಯಗಳ ಜನರಿಗೆ ವಿವಿದ ಸಮೂದಾಯದ ಕ್ಯಾಲಂಡರ್ ಗಳನ್ನು ಉಚಿತವಾಗಿ ನೀಡಿದರು. ಈಗಾಗಲೇ ಸಿಎಸ್ಆರ್ ಅಸೋಸಿಯೇಷನ್ನಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಜೊತೆಗೆ ಸಂಗಮೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಷಣೆಯನ್ನು ಸಹ ಕೈಗೊಂಡಿದ್ದು ಇಲ್ಲಿ ಸ್ಮರಿಸಬಹುದು. ಈ ಕ್ಯಾಲಂಡರ್ ವಿತರಣೆಗೆ ಮುನ್ನ ಬಸವ ದಳದ ಸಭಾಂಗಣದಲ್ಲಿ ಹರಗಿನಡೋಣಿ ಅಭಿನವ ಸಿದ್ದಲಿಂಗಸ್ವಾಮಿಜಿಗಳು ಬಿಡುಗಡೆ ಮಾಡಿದರು. ಮುಂಬರುವ ದಿನದಲ್ಲಿ ಮಹಾನಗರ ಪಾಲಿಕೆಗೆ 20ನೇ ವಾಡರ್ಿನಲ್ಲಿ ಈ ಬಾರಿ ಮಿಸಲಾತಿ ಸಾಮಾನ್ಯ ಮಹಿಳೆಗೆ ಬಂದಿದ್ದು. ಲತಾ ಶೇಖರ ಅವರು 20ನೇ ವಾಡರ್ಿನಲ್ಲಿ ಸ್ಪಧರ್ಿಸಲು ಆಕಾಂಕ್ಷಿಯಾಗಿದ್ದು. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಸಹಕಾರದಿಂದ ಇಂತಹ ಜನುಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜೊತೆಗೆ ಒಂದುವೇಳೆ ನಾನು ಆರಿಸಿ ಬಂದಲ್ಲಿ 20ನೇ ವಾರ್ಡ ಅಭಿವೃದ್ದಿಗೆ ಹಗಲಿರುಳು ಶ್ರಮಿಸುವುದಾಗಿ ಆಕಾಂಕ್ಷಿಯಾದ ಲತಾ ಶೇಕರ ಅವರು ತಿಳಿಸಿದರು. ಸುಮಾರು ಬೆಳಿಗ್ಗೆಯಿಂದ 10 ಸಾವಿರ ಕ್ಯಾಲಂಡರ್ಗಳು ಪ್ರತಿ ಮನೆ-ಮನೆಗೆ ತೆರಳಿ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸಿದ್ದಾರ್ಥ ಕಾಲೋನಿಯ ನಿವಾಸಿ ಸುರೇಶ, ರವಿ, ಶೇಖರ, ಸೇರಿದಂತೆ ಹಲವಾರು ಮಹಿಳೆಯರು ಹಂಚಿಕೆ ಮಾಡಿದ್ದು ಕಂಡುಬಂತು.


ಸುದ್ದಿ ಓದಿ