ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಮಾಜಿ ಶಾಸಕ ಆನಂದ ನ್ಯಾಮಗೌಡ ಚಾಲನೆ
ಜಮಖಂಡಿ : 30: ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರಕಾರ ಯಾವುದಾರು ಇದ್ದರೆ. ಅದು ನಮ್ಮ ಕಾಂಗ್ರೆಸ್ ಸರಕಾರ ಮೊದಲವಾಗಿದೆ. ಚುನಾವಣೆ ಪುರ್ವದಲ್ಲಿ ನುಡಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರಕಾರವಾಗಿದೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ತಾಲೂಕ ಆಡಳಿತ, ನಗರಸಭೆ ಕಾರ್ಯಾಲಯ ಸಹಯೋಗದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 20 ಲಕ್ಷ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಾರೆಂದು ಸರಕಾರಕ್ಕೆ ಗಮನಿಸಿತು. ಆದರೆ ಇಂದು ಮಹಿಳೆಯರ ಪ್ರಯಾಣ ಸುಮಾರ 30ರಿಂದ 50 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಸುಮಾರು 2,17 ಲಕ್ಷ ಫಲಾನುಭವಿಗಳು ಅರ್ಜಿಯನ್ನು ಸಲಿಸಿದರು. ಆದರೆ ಇಂದು ಅತೀ ಹೆಚ್ಚು ಮಹಿಳೆಯರು ಗೃಹಲಕ್ಷ್ಮೀ ಲಾಭವನ್ನು ಪಡೆದುಕೊಳ್ಳುವ ಹಾಗೆ ಕಾಂಗ್ರೇಸ್ ಸರಕಾರ ಮಾಡಿದೆ. ರಾಜ್ಯದ ಜನತೆಗೆ 12 ಸಾವಿರ ಕೋಟಿ ಅನುದಾನು ಮೀಸಲು ಇಡಲಾಗಿದೆ. 24 ಸಾವಿರ ಕೋಟಿ ಮಹಿಳೆಯರಿಗೆ ಇದರ ಲಾಭ ಪಡೆದುಕೊಳ್ಳಬೇಕೆಂದು ಉದ್ದೇಶ ಹೊಂದಿದೆ. ಗೃಹಲಕ್ಷ್ಮೀ ಯೋಜನೆಯಿಂದ ಆರ್ಥಿಕವಾಗಿ ಮನೆಯ ಯಜಮಾನಿ ಸಬಲವಾಗಲು 52 ಸಾವಿರ ಕೋಟಿ ಜನತೆಗೆ ಪ್ರತಿವರ್ಷ ಸರಕಾರ ಮೀಸಲು ಇಡುತ್ತಿದೆ. ನಿರುದ್ಯೋಗ ಯುವಕರಿಗೆ ಯುವನಿಧಿ ಯೋಜನೆಯು ಸಹ ಅತೀ ಶೀಘ್ರದಲ್ಲಿ ಜಾರಿಗೆ ತರಲು ಮುಂದಾಗುತ್ತಿದೆ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ 5 ಕೆ.ಜಿ.ಅಕ್ಕಿ ನೀಡಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಅದನ್ನು ತಡೆದಿದೆ. ಆದರೆ ಪ್ರತಿ ತಿಂಗಳು ಅಕ್ಕಿಯ ಜೊತೆಗೆ ಹಣವನ್ನು ನೀಡುತ್ತಿರುವ ನಮ್ಮ ಸರಕಾರವಾಗಿದೆ. ರಾಜ್ಯದಲ್ಲಿ ಅತೀ ಕಡುಬಡತನವನ್ನು ಹೊಂದಿದವರು ಸಹ ಇದರ ಲಾಭವನ್ನು ಪಡೆದುಕೊಂಡು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ರಾಜ್ಯ ಸರಕಾರ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿರುವುದು ಹೆಮ್ಮಯ ಸಂಗತಿಯಾಗಿದೆ. ಇದು ನಿರಂತರವಾಗಿ ಐದು ವರ್ಷ ಕಾಲ ಸರಕಾರ ಪೂರ್ಣವಾಗಿ ಅನುಷ್ಠಾನದಲ್ಲಿ ಜಾರಿಯಲ್ಲಿ ತರಬೇಕು. ರಾಜ್ಯದ ಜನರಿಗೆ ಗೃಹಲಕ್ಷ್ಮೀ ಯೋಜನೆಯು ಅನುಕೂಲ ಮಾಡಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ದಾನೇಶ ಘಾಟಗೆ, ಮಾಜಿ ನಗರಾ್ರಧಿಕಾರ ಯೋಜನೆಯ ಅಧ್ಯಕ್ಷ ಯಮನೂರ ಮೂಲಂಗಿ, ನಗರ ಮಂಡಲ ಅಧ್ಯಕ್ಷ ಅಜೇಯ ಕಡಪಟ್ಟಿ, ಈಶ್ವರ ವಾಳೇನ್ನವರ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮತ್ತು ನೂರಾರು ಮಹಿಳೆಯರು ಇದ್ದರು. ಎನ್.ವಿ.ಅಸ್ಕಿ ನಿರೂಪಿಸಿದರು, ಜಿ,ಜಿ,ಹೈಸ್ಕೂಲ್ನ ವಿದ್ಯಾರ್ಥಿನಿಯರು ಪ್ರಾರ್ಥನಿಸಿದರು, ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿದರು, ತಾಲೂಕಾಡಳಿತ ಅಧಿಕಾರಿ ವಂದಿಸಿದರು. ನಗರದ ರುದ್ರಸ್ವಾಮಿ ಪೇಠ ಗಲ್ಲಿ ಹಾಗೂ ಡಾ,ಬಿ,ಆರ್,ಅಂಬೇಡ್ಕರ ಭವನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆಯನ್ನು ನೀಡಲಾಯಿತು.