ರಾಣೆಬೆನ್ನೂರ

ಚನ್ನಪ್ಪಜ್ಜನವರ ಮಠದಲ್ಲಿ ಅನ್ನ ಸಂತರ್ಪಣೆ

ಚನ್ನಪ್ಪಜ್ಜನವರ ಮಠದಲ್ಲಿ ಅನ್ನ ಸಂತರ್ಪಣೆ

ರಾಣೇಬೆನ್ನೂರು 21:  ಇಲ್ಲಿನ ಸಿದ್ದೇಶ್ವರ ನಗರದ ಇತಿಹಾಸ ಪ್ರಸಿದ್ಧ  ಸದ್ಗುರು ಸಮರ್ಥ ಚನ್ನಪ್ಪಜ್ಜನವರ ಮಠದಲ್ಲಿ ಆಕ್ಷಯ ತದಿಗೆ  ಅಮಾವಾಸ್ಯೆ ನಿಮಿತ್ತ ಗುರುವಾರ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು. ಸೂರ್ಯೋದಯ ಕಾಲ ಗುರುಮೂರ್ತಿಗೆ, ಅಭಿಷೇಕ, ಪಂಚಾಮೃತ ಅಭಿಷೇಕ, ಸೇರಿದಂತೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು. ಪ್ರತಿ  ಅಮಾವಾಸ್ಯೆಯಂತೆ ಮಠದಲ್ಲಿ ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಚನ್ನಪ್ಪಜ್ಜನವರ ಮಠದ ಟ್ರಸ್ಟಿಗಳಾದ ಅಧ್ಯಕ್ಷ ಬಸವರಾಜ ಐರಣಿ, ಉಪಾಧ್ಯಕ್ಷ ಕೃಷ್ಣಪ್ಪ ಇನಾಮತಿ, ಕಾರ್ಯದರ್ಶಿ  ಮಾರುತಿ ಗರಡಿಮನಿ, ಕೋಶ್ಯಾಧ್ಯಕ್ಷ ಮರಿಸ್ವಾಮಿ ಪೂಜಾರಿ ಸದಸ್ಯರಾದ, ನಿಂಗಪ್ಪ ಐರಣಿ, ಕೃಷ್ಣಪ್ಪ ರಾಂಪುರ್, ಮಂಜುನಾಥ ಮಸಲಾಡದ, ಸೇರಿದಂತೆ ಮತ್ತಿತರ ಪದಾಧಿಕಾರಿಗಳು, ಗಣ್ಯರು ಭಕ್ತರು ಪಾಲ್ಗೊಂಡಿದ್ದರು 

ಸುದ್ದಿ ಓದಿ