ಜಮಖಂಡಿ

ಜಾನಪದ ರಸಮಂಜರಿ ಕಾರ್ಯಕ್ರಮ

ಜಾನಪದ ರಸಮಂಜರಿ ಕಾರ್ಯಕ್ರಮ

ಜಮಖಂಡಿ  24: ಧಾರ್ಮಿಕ ಗುಣಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು.ದಾನ, ಧರ್ಮಗಳನ್ನು ಮಾಡುವ ಜೊತೆಗೆ ದೇವರ ನಾಮಸ್ಮರಣೆ ಮಾಡಿದರೆ ಮಾತ್ರ ಜೀವನ ಸಾರ್ಥಕತೆಯಾಗುತ್ತದೆ ಎಂದು ಬಬಲಾದಿ ಮಠದ ಸಿದ್ದರಾಮ ಮುತ್ಯಾ ಹೇಳಿದರು. 

ನಗರದ ರುದ್ರಸ್ವಾಮಿ ಪೇಠದಲ್ಲಿ ಗಜಾನನ ಉತ್ಸವ ಸಮಿತಿ ಸಹಯೋಗದಲ್ಲಿ ನಡೆದ ಐದನೇ ದಿನದ ಜಾನಪದ ರಸಮಂಜರಿ ಕಾರ್ಯಕ್ರಮದಲ್ಲಿ ಗಣೇಶ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ. ಮಾತನಾಡಿದರು. 

 ಗಣೇಶನ ವಿಸರ್ಜನೆ ಸಮಯದಲ್ಲಿ ಹಾಗೂ ಬರ ಮಾಡಿಕೊಳ್ಳುವಾಗ ಯುವಕರು ಡಿಜೆ ಹಾಡುಗಳನ್ನು ಹಾಕಿ. ಪಟ್ಟಾಕಿಗಳನ್ನು ಸಿಡಿಸಿ ಆಚರಣೆ ಮಾಡಿದರೆ ಸಾಲದು. ಗಣೇಶನೊಬ್ಬ ವಿಗ್ರವಿನಾಯಕನು ಇದ್ದು. ಆತನಿಗೆ ಹಣಿ ಹಚ್ಚಿ ನಮಿಸಿ. ಎಲ್ಲರ ಕಷ್ಟಗಳನ್ನು ದೂರ ಮಾಡಿ. ನಾಡಿಗೆ ಒಳಿತನ್ನು ನೀಡು ಎಂದು ಪ್ರಾರ್ಥಿನಿಸಬೇಕು. ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ಧರ್ಮ ನಮ್ಮನ್ನು ಕಾಯುತ್ತದೆ. ಗ್ರಾಮೀಣ ಭಾಗದ ಕ್ರೀಡೆಗಳನ್ನು ಹಾಗೂ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಡಿಜೆ ಹಾಡುಗಳು ಮತ್ತು ಜಾನಪದ ಹಾಡುಗಳ ಕಡೆಗೆ ಹೆಚ್ಚು ಗಮನ ಹರಿಸದೆ. ಗ್ರಾಮೀಣ ಕಲೆಗಳನ್ನು ಉಳಿಸಿ. ಬೆಳಸಬೇಕು ಎಂದರು. 

ಗಣೇಶನ ಮೂರ್ತಿ ವಿಸರ್ಜನೆಗಳಲ್ಲಿ ಡಿಜೆ ಹಾಡುಗಳು, ಪಟ್ಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರೆ ಸಾಲದು. ಮನುಷ್ಯನಲ್ಲಿ ನಗು ಇರಬೇಕು. ಅದಕ್ಕಾಗಿ ರಸಮಂಜರಿ ಕಾರ್ಯಕ್ರಮಗಳು ಇದ್ದರೆ ಮನುಷ್ಯ ನಗು,ನಗುತಾ ಇರುತ್ತಾನೆ. ಜಾನಪದ ಹಾಡುಗಳ ಜೊತೆಗೆ ರಂಗೋಲಿ ಸ್ಪರ್ಧೆ, ಕುರ್ಚಿ ಸ್ಪರ್ಧೆ ಹೀಗೆ ಹಲವಾರು ಸ್ಪರ್ಧೆಗಳನ್ನು ಮಹಿಳೆಯರಿಗೆ ಆಯೋಜಿಸಬೇಕು. ಕೇವಲ ಜಾನಪದ ಡಿಜೆ ಹಾಡುಗಳಿಗೆ ಮಾತ್ರ ಸಿಮೀತವಾಗಬಾರದೆಂದು ಕರೆಯನ್ನು ನೀಡಿದರು.  

ಕುಂಚನೂರ ಮಾದುಲಿಂಗ ಅಜ್ಜನ್ನವರು ಆರ್ಶೀವಚನ ನೀಡಿದರು. ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಸಂತೋಷ ಶೆಟ್ಟಿ, ಕುಶಾಲ ವಾಗಮೋರೆ, ಶಶಿಧರ ಮೀಶಿ, ಶಂಕರ ಕಾಂಬಳೆ, ರವಿ ಬನ್ನೂರ ಸೇರಿದಂತೆ ರುದ್ರಾವಧೂತ ಮಠದ ಪೂಜಾರಿ ಅನೇಕರು ವೇದಿಕೆಯಲ್ಲಿ ಇದ್ದರು. ಉತ್ತರ ಕರ್ನಾಕದಲ್ಲಿ ಜಾನಪದ ಲೋಕದಲ್ಲಿ ಖ್ಯಾತಿಯನ್ನು ಪಡೆದ ಪರಸು ಕೊಲೂರ ಹಾಗೂ ವೀರು ಜಮಖಂಡಿ, ಅಥಣಿ ಪಂಚಾಕ್ಷರಿ, ಲಕ್ಷ್ಮೀ, ಗಣೇಶ ಜಮಖಂಡಿ ಅವರು ಜಾನಪದ ಹಾಡುಗಳನ್ನು ಹಾಡಿ. ಜನರನ್ನು ರಂಜಿಸಿದರು. 


ಸುದ್ದಿ ಓದಿ