ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಒತ್ತು ಕೊಡಿ : ಅರ್ಚನಾ
ಗಂಗಾವತಿ 13: ಗಂಗಾವತಿ 29ನೇ ವಾರ್ಡ ಹಿರೇಜಂತಕಲ್ 1.2.3 ಕೇಂದ್ರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಪೋಷಣ್ ಅಭಿಮಾನ ಮತ್ತು ಸಿಮಂತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರೇಜಂತಕಲ್ ಗರ್ಭಿಣಿಯರು ಕಾರ್ಯಕ್ರಮದಲ್ಲಿ ಪಾಲ್ಗೋಡಿದ್ದರು. ವಿವಿಧ ಬಗ್ಗೆ ಸೊಪ್ಪು ತರಕಾರಿ ಮೊಟ್ಟೆ ಹಾಗೂ ಕಾಳು ಜೋಡಿಸಿಟ್ಟು ಯಾವ ಯಾವ ಆಹಾರದಲ್ಲಿ ಪೌಷ್ಟಿಕಾಂಶದ ಪ್ರಮಾಣ ಎಷ್ಟಿರುತ್ತದೆ ಎನ್ನುವ ಕುರಿತು ಮಾಹಿತಿ ಒದಗಿಸಿದರು.
ನಗರಸಭೆ ಸದಸ್ಯೆ ಅರ್ಚನಾ ರಾಘವೇಂದ್ರ ಶೆಟ್ಟಿ ಮಾತನಾಡಿ ಪ್ರತಿಯೊಬ್ಬ ಗರ್ಭಿಣಿ ತಾನು ಪೌಷ್ಟಿಕ ಆಹಾರ ಸೇವನೆ ಮಾಡುವುದರ ಜತೆಗೆ ಮಾನಸಿಕವಾಗಿ ಸದೃಢವಾಗಿದ್ದಾಗ ಜನಿಸುವ ಮಗು ಆರೋಗ್ಯ ಪೂರ್ಣವಾಗಿ ಜನಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿ ಆರೋಗ್ಯವಂತ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗಲಿದೆ. ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಅದಕ್ಕೆ ಅಗತ್ಯ ಪೋಷಕಾಂಶಯುಕ್ತ ಆಹಾರ ಸೆವನೆ ಹಾಗೂ ನಿಯಮಿತವಾಗಿ ವ್ಯಾಯಾಮ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡಾಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯ ವಂತಾಗಿರುತ್ತಾರೆ.ಆರೋಗ್ಯ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದಲೇ ಪೋಷಣಾ ಅಭಿಮಾನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ವಿದ್ಯಾವಂತಿ, ಅಂಗನವಾಡಿ ಶಿಕ್ಷಕಿ ಲಕ್ಮ್ಲೀದೇವಿ, ಶರಣಮ್ಮ, ಸುಶೀಲಾ ಅಂಗನವಾಡಿ ಸಹಾಯಕಿ ಜ್ಯೋತಿ, ಗಂಗಾಮ್ಮ, ಹೆಚ್.ಎಂ.ಇಂದ್ರಾ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.