ಕೆಲಸಕ್ಕೆ ಚಕರ್ ಹೊಡೆದು ಎಣ್ಣೆ ಪಾರ್ಟಿಯಲ್ಲಿ ಭಾಗಿ: ಐದು ಜನ ಅಧಿಕಾರಿಗಳ ಅಮಾನತು: ಜಿಲ್ಲಾಧಿಕಾರಿ ಜಾನಕಿ ಕೆ,ಎಂ
ಜಮಖಂಡಿ 26: ನಗರದ ಸರಕಾರಿ ರಮಾ ನಿವಾಸ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿ, ಇಂಜಿಯರಗಳು ಮತ್ತು ಲೋಕೊಪಯೋಗಿ ಇಲಾಖೆಯ ಇಂಜಿನಿಯರ ಸೇರಿದಂತೆ ಐದು ಜನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆಂದು ಜಿಲ್ಲಾಧಿಕಾರಿ ಜಾನಕಿ ಕೆ,ಎಂ ಅವರು ಆದೇಶ ಹೊರಡಿಸಿದ್ದಾರೆ.
ನೀತಿ ಸಂಹಿತೆ ಮಧ್ಯೆ ಕಚೇರಿ ಕೆಲಸಕ್ಕೆ ಚಕರ್ ಹೊಡೆದು ಎಣ್ಣೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಜಿಲ್ಲಾ ಪಂಚಾಯತ ಎಇಇ ಎಸ್,ಎಂ,ನಾಯಕ, ಇಂಜಿನಿಯರಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಅವರು ಸೇರಿಕೊಂಡು ಗುತ್ತಿಗೆದಾರೊಂದಿಗೆ ಮಧ್ಯೆ ಸೇವನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿಯ ಮೇಲೆ ನೋಟಿಸ್ ನೀಡಲಾಗಿದ್ದು. ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರು ಐವರು ಸರಕಾರಿ ಪ್ರವಾಸಿ ಮಂದಿರ ಪಡೆದುಕೊಂಡಿದಾರೆಂದು ಸಲಿಸಿದ ವರದಿ ಆಧರಿಸಿ. ಹಾಗೂ ಲೋಕೊಪಯೋಗಿ ಇಲಾಖೆ ಇಂಜಿನಿಯರ ಎಸ್,ಆರ್,ಜಂಬಗಿ ಕೊಠಡಿಯನ್ನು ನೀಡಿದ್ದಾರೆಂದು ಆಧರಿಸಿ ಒಟ್ಟು ಐದು ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆಂದು ಜಿಲ್ಲಾಧಿಕಾರಿ ಜಾನಕಿ ಕೆ,ಎಂ, ಅವರು ಆದೇಶ ಹೊರಡಿಸಿದ್ದಾರೆ.