ಖಾಸಗಿ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ

ಖಾಸಗಿ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ

 ಬಳ್ಳಾರಿ 08: ಜಿಲ್ಲಾ ಕಾಮರ್ಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಗರದ ನಿಮರ್ಿತ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರದಂದು ಅಂಬೇಡ್ಕರ್ ಕಾರ್ಮಿಕರ ಸಹಾಯಹಸ್ತ ಯೋಜನೆ ಅಡಿಯಲ್ಲಿ ಖಾಸಗಿ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಮರ್ಿಕ ನಿರೀಕ್ಷಕ ಎಂ.ರವಿದಾಸ ಮಾತನಾಡಿ, ಈ ಕಾರ್ಯಗಾರದಲ್ಲಿ ಖಾಸಗಿ ವಾಹನ ಚಾಲಕರು ಪ್ರಥಮ ಚಿಕಿತ್ಸೆ ಯಾವ ರೀತಿ ಮಾಡಬೇಕು ಮತ್ತು ತುತರ್ು ಸಂದರ್ಭದಲ್ಲಿ ಚಾಲಕರರು ಯಾವ ರೀತಿ ಸ್ಪಂದಿಸಬೇಕೆಂದು ತಿಳಿಸಿದರು.

     ಖಾಸಗಿ ವಾಹನ ಚಾಲಕರು ಅಪಘಾತ ಜೀವ ರಕ್ಷಕ ತರಬೇತಿಯಿಂದ ತಾವು ಚಲಿಸುವ ವಾಹನವು ಜಾಗೃತಿಯಿಂದ ನಡೆಸಲು ಅನುಕೂಲವಾಗುತ್ತದೆ. ರಸ್ತೆ ನಿಯಮಗಳ ಬಗ್ಗೆ ಖಾಸಗಿ ವಾಹನ ಚಾಲಕರಿಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 100 ಖಾಸಗಿ ವಾಣಿಜ್ಯ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ವಿತರಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಕೀಬ್ ಅವರು ತರಬೇತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ನಿಮರ್ಿತಿ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ಡಿ.ವಿ.ಮಂಜುಳಾ, ಎನ್. ನಾಗರಾಜ್, ರಮೇಶ್ ಸೇರಿದಂತೆ ಅನೇಕರು ಇದ್ದರು. ಕಾಮರ್ಿಕ ಇಲಾಖೆ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ್ ನಿರೂಪಿಸಿ ವಂದಿಸಿದರು.


ಸುದ್ದಿ ಓದಿ