ಠಾಣೆಯಲ್ಲಿ ಮಣ್ಣಿನ ಎತ್ತು ತಯಾರಿಸಿ ಗಮನ ಸೆಳೆದ ಮಹಿಳಾ ಕಾನಸ್ಟೇಬಲ್
Female constable draws attention by making clay bull at police station
ಜಮಖಂಡಿ 14 : ಶಹರ ಪೋಲಿಸ್ ಠಾಣೆಯ ಮಹಿಳಾ ಕಾನಸ್ಟೇಬಲ್ ಲಕ್ಷ್ಮೀ ಕುಂಬಾರ ಅವರು ಮಣ್ಣಿನ ಎತ್ತುಗಳನ್ನು ತಯಾರಿಸಿದರು. ಮೂಲತ ಹೊಸೂರ ಗ್ರಾಮದವರು ಕುಲಕಸುಬನ್ನು ಹವ್ಯಾಸವಾಗಿ ಉಳಿಸಿಕೊಂಡು ಬಹನಟ್ಟಿ ನಗರದ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಮಣ್ಣಿನ ಎತ್ತುಗಳುನ್ನು ತಯಾರಿಸುವ ಮೂಲಕ ಜನರ ಗಮನ ಸೆಳೆದರು.
ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನಸ್ಟೇಬಲ್ ಹುದ್ದೆ ಸೇವೆ ಸಲ್ಲಿಸುತಿದ್ದಾರೆ. ತಮ್ಮ ಮನೆತನದ ಮೂಲ ಕಸಬನ್ನು ಮಾತ್ರ ಅವರು ಬಿಟ್ಟಿಲ್ಲ ವೃತ್ತಿಯ ಜೊತೆಗೆ ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳನ್ನು ಹಾಗೂ ಗುಳ್ಳವ್ವನನ್ನು ಮಾಡುವುದು ನಂತರ ಮಣ್ಣಿನ ಒಲೆ ಹಾಗೂ ಗಡಿಗೆ- ಕುಡಿಕೆಗಳನ್ನು ತಯಾರಿಸುವಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ನೆರವಾಗುತ್ತಾರೆ ಎಂದರು.ನಾವು ಮೊದಲು ನಮ್ಮ ಮನೆತನದ ಮೂಲ ಕಸುಬನ್ನು ಮುಂದುವರೆಸಿಕೊಂಡು ಬರಬೇಕು. ನಂತರ ನಮ್ಮ ಮಕ್ಕಳು ಕೂಡಾ ಅದನ್ನು ಮನ್ನಡೆಸುತ್ತಾರೆ. ನಾವು ಯಾವುದೇ ರೀತಿಯ ಸಂಕೋಚ ಪಡಬಾರದು. ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿಕೊಂಡು ಹೋಗುವುದು ಕೂಡಾ ಮುಖ್ಯವಾಗಿದೆ ಎಂದು ಲಕ್ಷ್ಮಿ ಕುಂಬಾರ ಮನದಾಳದ ಮಾತನ್ನು ಹೇಳಿದರು.ಪೋಟೋ: ಜಮಖಂಡಿ ಶಹರ ಪೋಲಿಸ್ ಠಾಣೆಯ ಮಹಿಳಾ ಕಾನಸ್ಟೇಬಲ್ ಲಕ್ಷ್ಮೀ ಕುಂಬಾರ ಮಣ್ಣಿನ ಎತ್ತುಗಳನ್ನು ತಯಾರಿಸುತ್ತಿರುವದು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 