ಜಮಖಂಡಿ

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಜಮಖಂಡಿ 20: ತಾಲೂಕಿನ ಗಾಣಿಗ ಸಮಾಜ ಹಾಗೂ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃಧ್ಧಿ ಸಂಘದ ಸಹಯೋಗದಲ್ಲಿ 2022-23ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಶೇ. 90ಕ್ಕಿಂತ ಹೆಚ್ಚು ಹಾಗೂ ಪಿ.ಯು.ಸಿ ದ್ವಿತೀಯ ವರ್ಷದ ಪರಿಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಗಾಣಿಗ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶ್ರೀ ನಂದಿಕೇಶ್ವರ ಮಂಗಳ ಕಾರ್ಯಾಲಯದಲ್ಲಿ ಜು. 4ರಂದು ಸನ್ಮಾನ ಸಮಾರಂಭ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. 

ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯನ್ನು ದೃಢೀಕರಣ, (ಭಾವಚಿತ್ರ) ಎರಡು ಫೋಟೋ, ಸಾಧಕರು ತಾವು ಮಾಡಿದ ಸಾಧನೆ ಕುರಿತಾದ ಅವಶ್ಯಕ ದಾಖಲೆಗಳನ್ನು ಹಾಗೂ ದೂರವಾಣಿ, ಮೊಬೈಲ್ ಸಂಖ್ಯೆ, ವಿಳಾಸದೊಂದಿಗೆ ಮೇ. 30 ರೊಳಗಾಗಿ ಜ್ಯೋತಿ ಕೋ-ಆಪ್ ಕ್ರೇಡಿಟ್ ಸೊಸಾಯಿಟಿ ನಿಯಮಿತ ಶಾಲಂ ಗೇಟ್ ಮುಧೋಳ ರೋಡ ಇಲ್ಲಿ ಸಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9448229675, 9945780844, 9945106364, 9448759745 ಸಂಪರ್ಕಿಸಬೇಕೆಂದು ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ.ತುಪ್ಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ