ರೈತರ ಸಮಸ್ಯೆ ನಿವಾರಣೆಗೆ ಫೆ.13ರಂದು ವಿದಾನಸೌದಕ್ಕೆ ರೈತರಿಂದ ಮುತ್ತಿಗೆ

ರೈತರ ಸಮಸ್ಯೆ ನಿವಾರಣೆಗೆ ಫೆ.13ರಂದು ವಿದಾನಸೌದಕ್ಕೆ ರೈತರಿಂದ ಮುತ್ತಿಗೆ

ಬಳ್ಳಾರಿ 17:ರೈತನಾಯಕ ದಿವಂಗತ ಪ್ರೋ|| ಎಂ.ಡಿ,ನಂಜುಂಡಸ್ವಾಮಿ ಅವರ ಜನ್ಮದಿನವಾದ ಫೆ.13ರಂದು ರೈತರ ಸಮಸ್ಯೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ವಿದಾನಸೌದಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತಸಂಘದ ಅಧ್ಯಕ್ಷ ಜೆ.ಎ.ಲಕ್ಷ್ಮಿ ನಾರಾಯಣಗೌಡ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ರೈತರ ಹೆಸರನ್ನು ಬಳಸಿಕೊಂಡು ಅನೇಕ ಜನಪರ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟದ ನೆಪದ ಮೂಲಕ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ರೈತರ ಸಮಸ್ಯೆಗಳು ಬಗೆ ಹರಿಸುತ್ತಿಲ್ಲ. ರೈತರ ಹೆಸರಿನಲ್ಲಿ ಅನೇಕ ಬಣಗಳಿವೆ. ಆದರೆ ನಮ್ಮದು ನಂಜುಂಡಸ್ವಾಮಿ ಅವರ ಚಿಂತನೆಯಂತೆ ಹೋರಾಟ ಮಾಡುವ ಸಂಘವಾಗಿದ್ದು. ಅವರ ಆಶೆಯದಂತೆ ಅವರ ಜನ್ಮದಿನದಂದು ಈ ಹೋರಾಟ ಹಮ್ಮಿಕೊಂಡಿದೆ. ಇದು ತೋರಿಕೆಯ ಹೋರಾಟವಾಗದೇ ಬೇಡಿಕೆ ಈಡೆರಿಸುವವರೆಗೂ ಅನಿಧರ್ಿಷ್ಟ ಅವದಿ ಹೋರಾಟವಾಗಲಿದೆ ಎಂದರು. ಮಹಾದಾಯಿ, ಕಳಸ ಬಂಡೂರಿ ಅನುಷ್ಟಾನ, ಸಾಲಮನ್ನಾ, ಬರಗಾಲ ಪರಿಹಾರ, ಭೀಮಾ ಯೋಜೆನೆ ಅನುಷ್ಟಾನ, ಯೋಗ್ಯ ಬೆಂಬಲ ಬೆಲೆ ನೀತಿ, ಬೆಳೆಗಳ ಖರೀದಿ ಕೇಂದ್ರಗಳ ಆರಂಭ, ಇನ್ನೂ ಮೊದಲಾದವುಗಳ ಅನುಷ್ಟಾನಕ್ಕೆ ಅಂದು ರಾಜ್ಯ ಸರಕಾರದ ಮೇಲೆ ಒತ್ತಡ ಮಾಡಲಿದ್ದೇವೆ. ರಾಜ್ಯಾಧ್ಯಂತ ನಾವು ಪ್ರಾವಾಸ ಮಾಡುತ್ತಿದ್ದು. ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದ್ದು. ಫೆ.13ರ ನಂತರ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸಂಘಟನೆಯ ಪದಾಧಿಕಾರಿಗಳ ನೇಮಕ ಮಾಡಲಿದ್ದೇವೆ ಎಂದರು. ಈ ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಕಾರ್ಯದಶರ್ಿ ಹೆಚ್.ಎಂ ಮಹೇಶ್ವರಸ್ವಾಮಿ, ಪ್ರಧಾನ ಕಾರ್ಯದಶರ್ಿ ಟಿ.ಪುಟ್ಟಯ್ಯ, ಸಂಘಟನಾ ಕಾರ್ಯದಶರ್ಿ ಸೈಯದ್ ಖದಿರ್, ಉಪಾಧ್ಯಕ್ಷ ಶಂಷಾದ ಬೇಗಂ, ಗಂಗಾ ದಾರವಾಡ್ಕರ್, ಸೇರಿದಂತೆ ಇನ್ನೂ ಹಲವಾರು ರೈತಮುಖಂಡರುಗಳು ಉಪಸ್ಥಿತರಿದ್ದರು.


ಸುದ್ದಿ ಓದಿ