ಯರಗಟ್ಟಿ

ಲಂಪಿಗ್ರಸ್ತ ಜಾನುವಾರುಗಳಿಗೆ ಸಮರ​‍್ಕ ಓಷಧೋಪಚಾರ ಸಿಗದ್ದಕ್ಕೆ ರೈತರ ಪ್ರತಿಭಟನೆ : ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡ ರೈತರು: ರೈತರೊಂದಿಗೆ ಆಸ್ಪತ್ರೆಯ ಸಿಬ್ಬಂದಿ ಅನುಚಿತ ವರ್ತನೆ ಆರೋಪ

ಲಂಪಿಗ್ರಸ್ತ ಜಾನುವಾರುಗಳಿಗೆ ಸಮರ​‍್ಕ ಓಷಧೋಪಚಾರ ಸಿಗದ್ದಕ್ಕೆ  ರೈತರ ಪ್ರತಿಭಟನೆ : ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡ ರೈತರು: ರೈತರೊಂದಿಗೆ ಆಸ್ಪತ್ರೆಯ ಸಿಬ್ಬಂದಿ ಅನುಚಿತ ವರ್ತನೆ ಆರೋಪ

ಲೋಕದರ್ಶನ ವರದಿ 

ಯರಗಟ್ಟಿ 07: ಚರ್ಮಗಂಟು ರೋಗ ಕುರಿತು ಜಾನುವಾರುಗಳಿಗೆ ಸಮರ​‍್ಕ ಓಷಧೋಪಚಾರ ಸಿಗುತ್ತಿಲ್ಲವೆಂದು ಸಮೀಪದ ತಲ್ಲೂರ ಗ್ರಾಮದಲ್ಲಿ ಶನಿವಾರ ಪಶು ಇಲಾಖೆ ಆವರಣದಲ್ಲಿ ರೈತರು ಪ್ರತಿಭಟನೆಯೊಂದಿಗೆ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು. 

 ರೈತ ಈರ​‍್ಪ ಕಾಶಪ್ಪನವರ ಮಾತನಾಡಿ, ಜಾನುವಾರಗಳಲ್ಲಿ ಚರ್ಮಗಂಟು ಸಾಂಕ್ರಾಮಿಕ ಬಾಧೆ ವೇಗವಾಗಿ ಹರಡುತ್ತಿದೆ. ಅದನ್ನು ನಿಯಂತ್ರಿಸಲು ಪಶು ಆಸ್ಪತ್ರೆಯಲ್ಲಿ ಓಷಧ ಸಿಬ್ಬಂದಿ ಕೊರತೆ ಉಂಟಾಗಿದ್ದರಿಂದ ಪಶುಗಳಿಗೆ ಸಮರ​‍್ಕ ಓಷಧೋಪಚಾರ ಸಿಗದೆ ಸಾವನ್ನೋಪ್ಪುತ್ತಿವೆ. ಸಮಯಕ್ಕೆ ಸರಿಯಾಗಿ ಪಶು ವೈದ್ಯರು ಸಿಗುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿ ರೈತರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. 

ಜಮೀನುಗಳಲ್ಲಿರುವ ರೋಗಸ್ಥ ಜಾನುವಾರಗಳಿಗೆ ಚಿಕಿತ್ಸೆ ಕೊಡಿಸಲು ಕಷ್ಟಕರವಾಗಿದೆ. ತುರ್ತು ಚಿಕಿತ್ಸೆಗಾಗಿ ವೈದ್ಯರನ್ನು ಕರೆದೊಯ್ಯಲು ಬಂದರೆ ಅವರೂ ಕೂಡ ಲಭ್ಯವಿರುವದಿಲ್ಲ. ಸಮರ​‍್ಕ ಓಷಧವನ್ನಾದರೂ ಪಡೆಯಬೇಕೆಂದರೆ ಅದನ್ನೂ ಸರಿಯಾಗಿ ನೀಡುತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು. 

ಆಸ್ಪತ್ರೆಯಲ್ಲಿ ಓಷಧ ಲಭ್ಯವಿಲ್ಲವೆಂದು ಖಾಸಗಿ ಓಷಧಾಲಯಗಳಲ್ಲಿ ತರುವಂತೆ ತಿಳಿಸುತ್ತಾರೆ. ಖಾಸಗಿಯಲ್ಲಿ ಓಷಧ ಕೊಂಡು ಚಿಕಿತ್ಸೆ ನೀಡಬೇಕೆಂದರೆ ಒಂದು ಹಸುವಿಗೆ ಎರಡು ಸಾವಿರ ರೂ. ವೆಚ್ಚ ತಗಲುತ್ತದೆ ಕೆಲ ಕುಟುಂಬಗಳಲ್ಲಿ 10ಕ್ಕೂ ಅಧಿಕ ಜಾನುವಾರಗಳಿವೆ ಹಣ ವ್ಯಯಿಸಿ ಚಿಕಿತ್ಸೆ ಕೊಡಿಸುವದು ಕಷ್ಟಕರವಾಗಿದೆ ಎಂದು ಅಲ್ಲಿ ಸೇರಿದ ರೈತರು ಅಸಮಾಧಾನ ವ್ಯಕ್ತ ಪಡಿಸಿದರು. 

ಡಾ.ವಿದ್ಯಾ ಕಾಂತಿ ಮಾತನಾಡಿ, 7 ಮತ್ತು 8 ರಂದು ಮುಂಜಾನೆ 8 ಘಂಟೆಗೆ ಪಶು ಆಸ್ಪತ್ರೆಯಲ್ಲಿ ಚರ್ಮಗಂಟು ರೋಗ ಪೀಡಿತ ಜಾನುವಾರಗಳಿಗೆ ಲಸಿಕೆ ಹಾಕಲಾಗುವದು. ರೈತರು ಚರ್ಮಗಂಟು ರೋಗ ಲಕ್ಷಣ ಹೊಂದಿದ ಜಾನುವಾರು ಕರೆತಂದು ಲಸಿಕೆ ಹಾಕಿಸಬೇಕು ಎಂದು ರೈತರಿಗೆ ಹೇಳಿದರು.   

ರೈತ ದುಂಡಪ್ಪ ಶಿವಪೂಜಿ, ಬಾಬುಗೌಡ ಅಣ್ಣಿಗೇರಿ, ಕರಬಸಪ್ಪ ಲಕ್ಕನ್ನವರ, ಈರ​‍್ಪ ಬೆನಕಟ್ಟಿ, ಧರ್ಮೇಂದ್ರ ದುಂಡನಕೊಪ್ಪ, ಶಿವಾಜಿ ಇಂಗಳೆ, ಸಾತಿರ ಶೀಲವಂತರ, ಮಡಿವಾಳಪ್ಪ ಬೆನಕಟ್ಟಿ, ಬಸವಂತಪ್ಪ ಸರದಾರ, ಬಸವರಾಜ ಮಡಿವಾಳರ, ಸಹದೇವ ಉಪ್ಪಿನ, ಇಸ್ಮಾಂ ಜಮಾದಾರ, ಕಲಂದರ ಆನಿ, ಯಲ್ಲಪ್ಪ ಸರದಾರ ಇತರರಿದ್ದರು. 


ಸುದ್ದಿ ಓದಿ