ರೈತರ ನಷ್ಟ ಕಾರಖಾನೆ ಆಸ್ತಿ ಮಾರಾಟ ಮಾಡಿಯಾದರೂ ಭರಿಸ್ತೀವಿ: ಡಿಸಿ ರಾಮ್ಪ್ರಸಾತ್

ರೈತರ ನಷ್ಟ ಕಾರಖಾನೆ ಆಸ್ತಿ ಮಾರಾಟ ಮಾಡಿಯಾದರೂ ಭರಿಸ್ತೀವಿ: ಡಿಸಿ ರಾಮ್ಪ್ರಸಾತ್

ಬಳ್ಳಾರಿ 22: ಈ ಬಾರಿಯ ಕಬ್ಬಿನ ಕಟಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ರೈತರಿಗೆ ಆಗುವ ನಷ್ಟವನ್ನು ಕಬ್ಬನ್ನು ನುರಿಸದ ದೇಶನೂರು ಎನ್ಎಸ್ಎಲ್ ಕಾರಖಾನೆಯ ಆಸ್ತಿಯನ್ನು ಮಾರಾಟ ಮಾಡಿಯಾದರೂ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿರಗುಪ್ಪದ ದೇಶನೂರು ಎನ್ಎಸ್ಎಲ್ ಕಾರಖಾನೆ ನಷ್ಟದ ಕಾರಣ ನೀಡಿ ಮುಚ್ಚಲಾಗಿದೆ. ಮೈಲಾರ,ಯಾದಗಿರಿ,ದಾವಣಗೆರೆ ಮತ್ತು ಮುಂಡರಗಿ ಸಕ್ಕರೆ ಕಾರಖಾನೆಗಳು ಮುಂದೆ ಬಂದಿದ್ದು ಆ ಕಾಖರ್ಾನೆಗಳೊಂದಿಗೆ ಲಿಖಿತವಾಗಿ ರೈತ ಮುಖಂಡರ ಸಮ್ಮುಖದಲ್ಲಿ ಒಪ್ಪಂದಗಳ ಅಫಿಡವಿಟ್ ಮಾಡಿಕೊಂಡು ರೈತರಿಗೆ ಉತ್ತಮವಾಗುವಂತ ದರ ಹಾಗೂ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡಿಕೊಡಲಿದೆ ಎಂದು ಹೇಳಿದರು. 

ಈ ಕಾರಖಾನೆಗಳೊಂದಿಗೆ ದರ, ಇನ್ನೀತರ ವಿಷಯಗಳ ಕುರಿತಂತೆ ಚಚರ್ಿಸಿ ಒಮ್ಮತದ ಮತ್ತು ರೈತರ ಹಿತದೃಷ್ಟಿಯ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.ಸಭೆಗೆ ದೇಶನೂರು ಸಕ್ಕರೆ ಕಾರಖಾನೆ ಮಾಲೀಕರು ಬರದಿದ್ದರೆನಂತೆ ಅವರ ಕಾರಖಾನೆ ಆಸ್ತಿ ಇದ್ದು,ಅದನ್ನು  ಮಾರಾಟ ಮಾಡಿ ತಮ್ಮ ನಷ್ಟ ಭರಿಸಿಕೊಡಲಾಗುವುದು ಎಂದರು.

ಕಬ್ಬು ನುರಿಸುವಿಕೆ,ದರ ನಿಗದಿ, ಟ್ರಾನ್ಸ್ ಪೋಟರ್್ ಸೇರಿದಂತೆ ವಿವಿಧ  ಬೇಡಿಕೆಗಳ ಕುರಿತು ರೈತರು ತಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಕಾರಖಾನೆಗಳ ಮಾಲೀಕರೊಂದಿಗೆ ಚಚರ್ಿಸಿ ಉತ್ತಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಬಳ್ಳಾರಿಗೆ ಆಗಮಿಸಲಿದ್ದು,ಅವರೊಂದಿಗೆ ತಮ್ಮ ಬೇಡಿಕೆಗಳ ಕುರಿತು ಚಚರ್ಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.ಕಬ್ಬಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚಚರ್ಿಸಲಾಯಿತು. 

ರೈತ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಸಭೆಯಲ್ಲಿ ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ, ಎಸ್ಪಿ ಅರುಣ ರಂಗರಾಜನ್ ಸೇರಿದಂತೆ ಅಧಿಕಾರಿಗಳು ಮತ್ತು ಕಬ್ಬು ಬೆಳೆಗಾರರು ಇದ್ದರು.

ಸುದ್ದಿ ಓದಿ