ರಾಜ್ಯ ರೈತ ಸಂಘಟನೆಯಿಂದ ರೈತರ ಹುತಾತ್ಮ ದಿನ
ಲೋಕದರ್ಶನ ವರದಿ,
ಜಮಖಂಡಿ 22: ನಗರದ ಎಜಿ.ದೇಸಾಯಿ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ರೈತ ಹುತಾತ್ಮ ದಿನ ಆಚರಿಸಿದರು. ರೈತ ನೇತಾರ, ಹುತಾತ್ಮ ದಿ. ರಮೇಶ ಗಡದನ್ನವರ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ, ಹೋರಾಟದಲ್ಲಿ ಹುತಾತ್ಮ ರೈತ ಮುಖಂಡರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು. ಹುತಾತ್ಮಗೊಂಡ ರೈತ ಮುಖಂಡರ ಗುಣದಾನ ಮಾಡಲಾಯಿತು.
ರೈತ ಸಂಘದ ಕಲ್ಲಪ್ಪ ಬಿರಾದಾರ, ಶ್ರೀಶೈಲ್ ಭೂಮಾರ, ರಾಜೂ ಆಲಗೂರ, ಸಿದ್ದಪ್ಪ ಬಣಜಗನೂರ, ಆನಂದ ತಳವಾರ, ಮಲ್ಲಪ್ಪ ಅಡಿಹುಡಿ, ಭೀಮಪ್ಪ ಮದನಮಟ್ಟಿ, ಮಲಕಪ್ಪ ತೆಲಸಂಗ, ಮಲ್ಲಪ್ಪ ತುಬಚಿ, ಮಹಾಂತೇಶ ಕುಲ್ಹಳಿ, ಕುಮಾರ ಜಕ್ಷಣಿ, ಹಣಮಂತ ಮಗದುಮ್ಮ ಸೇರಿದಂತೆ ಅನೇಕರಿದ್ದರು.