ರಾಣೆಬೆನ್ನೂರ

ಕುಪ್ಪೇಲೂರು ಗ್ರಾಮದ ರೈತ ವಿಷ ಸೇವಿಸಿ ಸಾವಿಗೆ ಶರಣು

ಕುಪ್ಪೇಲೂರು  ಗ್ರಾಮದ ರೈತ ವಿಷ ಸೇವಿಸಿ ಸಾವಿಗೆ ಶರಣು

ರಾಣೆಬೆನ್ನೂರು 23:  ತಾಲೂಕಿನ ಕುಪ್ಪೇಲೂರು ಗ್ರಾಮದ ಯುವರೈತ ನೂರ್ವನು, ಸಾಲದ ಬಾಧೆಗೆ ಸಿಲುಕಿ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಮೃತ ಪಟ್ಟ ಯುವ ರೈತನನ್ನು ಗ್ರಾಮದ ಹರೀಶ್ ತಂದೆ ವಾಸಪ್ಪ ನ್ಯಾಮತಿ (30) ಎಂದು ಗುರುತಿಸಲಾಗಿದೆ. ಮೃತಪಟ್ಟ ಯುವಕನ ಶವವನ್ನು ರಾಣೆಬೆನ್ನೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎದುರುಗಡೆ ಇಟ್ಟು, ಕುಟುಂಬಸ್ಥರು ಮತ್ತು ರೈತರು ಪ್ರತಿಭಟಿಸಿದರು.  

ಗಂಭೀರ ಆರೋಪ :- ರೈತ ನಿತ್ಯವೂ ಸಾವಿಗೆ ಶರಣಾಗುತ್ತಿದ್ದಾರೆ ಆದರೆ ಸರಕಾರ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಕ್ರಮಕೈಗೊಂಡು, ಸಾಲದ ಬಾಧೆಯಿಂದ ಖಿನ್ನತೆಗೆ.ಒಳಪಟ್ಟು ಸಾವಿಗೆ ಶರಣಾಗುತ್ತಿರುವುದು ತಪ್ಪಿಸಲು ಮುಂದಾಗಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ತಾಲೂಕ ಜಿಲ್ಲಾಡಳಿತದ ರೈತ ವಿರೋಧಿ ಕ್ರಮವನ್ನು ಖಂಡಿಸಿ ರಸ್ತೆ ತಡೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ರೈತ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ 


ಸುದ್ದಿ ಓದಿ