ಪಠ್ಯಕ್ಕಿಂತ ಪ್ರಾಯೋಗಿಕ ಕಲಿಕೆ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಮುಖ್ಯ

ಪಠ್ಯಕ್ಕಿಂತ ಪ್ರಾಯೋಗಿಕ ಕಲಿಕೆ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಮುಖ್ಯ

ಲೋಕದರ್ಶನ ವರದಿ

ಬಳ್ಳಾರಿ : ಪತ್ರಿಕೋದ್ಯಮ ವಿದ್ಯಾಥರ್ಿಗಳಾದವರು ಪಠ್ಯಕ್ರಮದ ಓದುಗಿಂತ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಿ ಎಂದು ಹಿರಿಯ ವಿದ್ಯಾಥರ್ಿ, ಉಪಸಂಪಾದಕ ಕೆ. ವಸಿಗೇರಪ್ಪ ಹೇಳಿದರು. 

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ (ಸ್ವಾಯತ್ತ) ಕಾಲೇಜಿನಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ  ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.  

ಪತ್ರಿಕೋದ್ಯಮ ವಿದ್ಯಾಥರ್ಿಗಳು ಹೆಚ್ಚಾಗಿ ದಿನಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳಿ. ಇದರಿಂದ ಸುದ್ದಿ ಬರವಣಿಗೆ, ಪದಗಳ ಬಳಕೆ, ಯಾವ ಪದ ಹೇಗಿರಬೇಕು. ಯಾವುದು ತಪ್ಪು, ಯಾವುದು ಸರಿ  ಎಂದು ತಿಳಿಯಲು ಸಾಧ್ಯ. ಇನ್ನು ಒಂದು ಪತ್ರಿಕೆ ಮಾತ್ರವಲ್ಲದೆ ಹಲವು ಪತ್ರಿಕೆ ಓದುವುದರಿಂದ ಸುದ್ದಿ ಬರವಣಿಗೆಯ ಶೈಲಿ, ತಲೆ ಬರಹ ಕೊಡುವುದು ಹೇಗೆ, ಪುಟ ವಿನ್ಯಾಸ ಯಾವ ರೀತಿ ಇದೆ ಎಂಬುದನ್ನು ಅವಲೋಕನ ಮಾಡಬಹುದು. ಇದರಿಂದ ಹಲವು ಯೋಚನೆಗಳು ಹುಟ್ಟುತ್ತವೆ. ಆಗ  ಪತ್ರಿಕೋದ್ಯಮ ಕ್ಷೇತ್ರದ ವ್ಯಾಪ್ತಿಯ ಬಗ್ಗೆ ವಿಸ್ತಾರವಾಗಿ ತಿಳಿಯುತ್ತ ಹೋಗುತ್ತದೆ ಎಂದು ತಿಳಿಸಿದರು.  

ವಿದ್ಯಾಥರ್ಿ ದಿಸೆಯಲ್ಲಿಯೇ ವಾಚಕರವಾಣಿಗೆ ಪತ್ರ ಬರೆಯುವುದನ್ನು ಕಲಿತುಕೊಂಡಾಗ ಸುದ್ದಿ, ಲೇಖನ, ವಿಶೇಷ ಅಂಕಣ ಬರೆವಣಿಗೆಗೆ ಸುಲಭ. ಇಲ್ಲವಾದಲ್ಲಿ ಅದನ್ನೆ ಬರೆಯದಿದ್ದಾಗ ಪತ್ರಿಕೋದ್ಯಮದಲ್ಲಿ ಭವಿಷ್ಯ ಕಂಡುಕೊಳ್ಳಲು ಕಷ್ಟಕರವಾಗುತ್ತದೆ. ಆದ್ದರಿಂದ ಇಂದಿನಿಂದಲೇ ವಾಚಕರವಾಣಿಗೆ ಪತ್ರ ಬರೆಯುವುದನ್ನು ಹವ್ಯಾಸ ರೂಢಿಸಿಕೊಳ್ಳಿ. ಇನ್ನು ಮುದ್ರಣ ಮಾಧ್ಯಮ ಮಾತ್ರವಲ್ಲದೆ ಟಿವಿ, ರೇಡಿಯೋ, ಆನ್ ಲೈನ್ ಮಾಧ್ಯಮದ ಬಗ್ಗೆ ಪ್ರಾಥಮಿಕ ಮಾಹಿತಿ ಇರಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಯಾರು ಯಾವ ಕ್ಷೇತ್ರಕ್ಕೆ ಹೋದರು ಅಂದು ಕಾರ್ಯ ನಿರ್ವಹಿಸುವಾಗ ಸುಲಭದ ದಾರಿಯಾಗಲು ಸಾಧ್ಯ ಎಂದರು. 

ಪತ್ರಿಕೋದ್ಯಮ ಉಪನ್ಯಾಸಕ ಸುಂಕಣ್ಣ.ಟಿ ಹಡ್ಲಿಗಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ  ಪ್ರಾಯೋಗಿಕ ಜ್ಞಾನಕ್ಕಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆದ್ದರಿಂದ ಇಂತಹ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಿರಿ ಎಂದು ತಿಳಿಸಿದರು.


ಸುದ್ದಿ ಓದಿ