ಜಮಖಂಡಿ

ಪ್ರಜೆಗಳಿಗೆ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸಿ: ಗುಡಗುಂಟಿ

ಪ್ರಜೆಗಳಿಗೆ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸಿ: ಗುಡಗುಂಟಿ

ಜಮಖಂಡಿ 06: ಸಂವಿಧಾನದಲ್ಲಿ ಪ್ರಜೆಗಳಿಗೆ ಹಕ್ಕು ನೀಡಿದ್ದು ಮತದಾನದ ಮೂಲಕ. ಅದಕ್ಕಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು.140 ಕೋಟಿ ಜನ ಹೊಂದಿರುವ ಭವ್ಯ ಭಾರತ ದೇಶದ ಉಜ್ವಲಕ್ಕಾಗಿ ಭಾರತೀಯ ಜನತಾ ಪಾರ್ಟಿ ಆಡಳಿತಕ್ಕೆ ಬರಲೇಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಶಾಸಕರ ನಿವಾಸದ ಸಾಕ್ಷಾತ್ಕಾರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಭವ್ಯ ಭೂಮಿ, ದೈವ ನಾಡು, ಸುಖ,ಶಾಂತಿ, ಯೋಗ ಹಾಗೂ ಶಾರೀರಿಕ , ಮಾನಸಿಕವಾಗಿ ಸದೃಢತೆ ಹೊಂದಿರುವ ರಾಷ್ಟ್ರ.ವಾಗಿದೆ. ವಿಶ್ವಕ್ಕೆ ಮಾದರಿ ದೇಶ ಭಾರತವಾಗಿದೆ.ಮೋದಿ ಸರ್ಕಾರದ 10 ವರ್ಷದಲ್ಲಿ ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ, ಕ್ರೀಡೆಗಳಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೈನಿಕರಿಗೆ ರಕ್ಷಣೆಗಾಗಿ ಜಾಕೆಟ್ ಕೂಡಾ ಇರಲಿಲ್ಲ. ಇವಾಗ ಸೈನಿಕರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರಲ್ಲಿರೋ ಭಯವನ್ನು ಹೋಗಲಾಡಿಸಿದೆ. ಅತೀ ಹೆಚ್ಚು ರಫ್ತು ಮತ್ತು ಆಮದು ಮಾಡಿಕೊಳ್ಳುವುದರ ಮೂಲಕ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರು.  

ದೇಶದಲ್ಲಿ ಪ್ರತಿ ಜಿಲ್ಲೆಗೊಂದು ವಿಮಾನ ನಿಲ್ದಾಣವಾಗುತ್ತಿದೆ. ಮೋದಿ ಅವರ ದೂರ ದೃಷ್ಟಿಯಿಂದ ತ್ವರಿತವಾಗಿ ಎಲ್ಲಾ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಮಾಡುತ್ತಿದ್ದಾರೆ. ಕಚ್ಛಾ ವಸ್ತುಗಳನ್ನು ಹೊರದೇಶಗಳಿಂದ ತರಿಸಿ ಪಕ್ಕಾ ವಸ್ತುಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡಿ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ದೇಶ ಕೇಲವೆ ವರ್ಷಗಳಲ್ಲಿ ಆರ್ಥಿಕವಾಗಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿರಲಿದೆ. ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿ ವಿಶ್ವನಾಥ್ ಕಾರ್ಡರ್ ನಿರ್ಮಾಣ ಮಾಡಿ ಜನರ ಬೇಡಿಕೆಗಳನ್ನು ಈಡೇರಿಸಿ ಜನನಾಯಕರಾಗಿದ್ದಾರೆ.  ಭವಿಷ್ಯತ್ ಯೋಜನೆಗಳಲ್ಲಿ ನದಿ ಜೋಡಣೆ ಕೂಡ ಒಂದಾಗಿದೆ. ಮೋದಿಯವರು ನಿಪುಣ, ಸಮಯಪ್ರಜ್ಞೆ, ದೂರದೃಷ್ಟಿಯುಳ್ಳ ಶ್ರೇಷ್ಠ ನಾಯಕ. ದೇಶ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಿ ಎಂದು ಮನವಿ ಮಾಡಿದರು. 

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಈ ದೇಶ ಉಳಿಯಬೇಕಾದರೆ, ಭಾರತ ವಿಶ್ವದ ಮೊದಲನೇ ಸ್ಥಾನ ಪಡೆದುಕೊಳ್ಳಬೇಕಾದರೆ ನರೇಂದ್ರ ಮೋದಿ ಪ್ರಧಾನಿ ಆಗಲೇಬೇಕು. ಬಿಜೆಪಿ ಅಭ್ಯರ್ಥಿ ಪಿ, ಸಿ ಗದ್ದಿಗೌಡರು ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದರೂ ಪ್ರಚಾರ ಮಾಡಿಲ್ಲ. ಅವರು ​‍್ರಚಾರಿಪ್ರಯರಲ್ಲ. ಬಾಗಲಕೋಟೆ, ಕುಡಚಿ ರೈಲ್ವೆ ಕಾಮಗಾರಿ ಒಂದು ವರ್ಷದಲ್ಲಿ ಮುಕ್ತಾಯವಾಗಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನೀಲ ನಕಾಶೆ ನೀಡದೆ ಕಾಮಗಾರಿ ವಿಳಂಬವಾಗಿದೆ. ರಾಜ್ಯದಲ್ಲಿ ಬಹುಬೇಗ ಕಾಂಗ್ರೆಸ್ ಸರ್ಕಾರ ಕಿತ್ತೋಗಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲಿದೆ. ದೇಶಕ್ಕಾಗಿ ನಾನು ದೇಶಕ್ಕಾಗಿ ನನ್ನ ಮತ ಎಂದು ತಿಳಿದು ಜಾತಿ, ಮತ, ಪಂಥ, ಧರ್ಮದ ಬೇದಭಾವ ಮಾಡದೆ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು. 

ಇದೇ ಸಂದರ್ಭದಲ್ಲಿ ರಾಜಸಭಾ ಸದ್ಯಸ ನಾರಾಯಣಸಾಬ ಭಾಂಡಗೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಿ.ಎಸ್ , ನ್ಯಾಮಗೌಡ, ಡಾ, ಉಮೇಶ ಮಹಾಬಳಶೆಟ್ಟಿ ಮಾತನಾಡಿದರು, ಸಿ.ಟಿ.ಉಪಾಧ್ಯೆ, ಅಜೇಯ ಕಡಪಟ್ಟಿ, ಅರವಿಂದಗೌಡ ಪಾಟೀಲ, ಗಣೇಶ ಶಿರಗನ್ನವರ, ಶ್ರೀಧರ ಕಂಬಿ ಸೇರಿದಂತೆ ಅನೇರು ಇದ್ದರು. 


ಸುದ್ದಿ ಓದಿ