ಜಮಖಂಡಿ

ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು: ನ್ಯಾಮಗೌಡ

ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು: ನ್ಯಾಮಗೌಡ

ಜಮಖಂಡಿ 16: ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು, ಜ್ಞಾನದ ಮುಂದೆ ಎಲ್ಲವು ಶೂನ್ಯ, ಜ್ಞಾನಕ್ಕೆ ಮಾತ್ರ ಸಮಾಜ ತಲೆತಗ್ಗಿಸುತ್ತದೆ ಎಂದು ರಾಜ್ಕ ಕೆಪಿಸಿಸಿ ಉಪಾಧ್ಯಕ್ಷ ಆನಂದ ನ್ಯಾಮಗೌಡ ಹೇಳಿದರು. 

ನಗರದ ಬಸವ ಭವನದಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಆಶ್ರಯದಲ್ಲಿ ನಡೆದ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮುಸ್ಲಿಂ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವರೆಗೆ ಉರ್ದು ಮಾಧ್ಯಮದಲ್ಲಿ ಕಲಿತು ಅಲ್ಲಿಗೆ ಶಿಕ್ಷಣವನ್ನು ನಿಲ್ಲಿಸಬಾರದು, ಪಿಯುಸಿಯಲ್ಲಿ ವಿವಿಧ ಕೋರ್ಸಗಳಿದ್ದು ಶಿಕ್ಷಣವನ್ನು  ಮುಂದುವರೆಸಬೇಕು ಎಂದರು.ಆರ್ಥಿಕ ತೊಂದರೆಯಾಗುತ್ತದೆ ಎಂದು ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡಬಾರದು, ಸಾಧನೆಗೆ ಸತತ ಪರಿಶ್ರಮ, ಗುರಿ ಮುಟ್ಟುವ ಛಲ  ಇರಬೇಕು, ಇಸ್ಲಾಂ ಕಮೀಟಿಯವರು ತಮ್ಮ ಸಮಾಜದ ಜೊತೆ ಬೇರೆ ಸಮಾಜದ ವಿದ್ಯಾರ್ಥಿಗಳ ಸನ್ಮಾನ ಮಾಡುತ್ತಿರುವದು ಶ್ಲಾಘನಿಯ ಎಂದರು.ಡಿವೈಎಸ್‌ಪಿ ಶಾಂತವೀರ ಈ ಮಾತನಾಡಿ, ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬಂದಿದೆ ಎಂದು ಕುಗ್ಗಬಾರದು, ಇವತ್ತಿನ ಸೋಲೆ ನಾಳೆ ಗೆಲುವಿನ ಪಾಠ ಆಗಿರುತ್ತದೆ, ನನ್ನಿಂದ ಸಾಧ್ಯ ಆಗುವುದಿಲ್ಲ ಎನ್ನುವ ಮನೋಭಾನೆಯಿಂದ ಹೊರಬರಬೇಕು ನಾನು ಮಾಡುತ್ತೆನೆ ಸಾಧಿಸುತ್ತೆನೆ ಎನ್ನುವ ಮನೊಭಾವ ಬೆಳೆಸಿಕೊಳ್ಳಬೇಕು, ಸಾಧಿಸುವ ಛಲ ಇಟ್ಟುಕೊಳ್ಳಬೇಕು, ಮೊಬೈಲ್ ಬಳಕೆ ಓದಿನ ಸಹಾಯಕ್ಕೆ ಮಾತ್ರ ಬಳಸಬೇಕು ಎಂದರು. ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನ ಪಾರ್ಥನಳ್ಳಿ ಮಾತನಾಡಿ. ಗಂಡು. ಹೆಣ್ಣು ಮಕ್ಕಳಲ್ಲಿ ಯಾರು ತಾರತಮ್ಯ ಮಾಡಬಾರದು, ಇಬ್ಬರಿಗೂ ಉನ್ನತ ಶಿಕ್ಷಣ ನೀಡಬೇಕು,  ಉನ್ನತ ಸ್ಥಾನಕ್ಕೆ ಏರಿದರೆ ಅವರೇ ದೇಶದ ಆಸ್ತಿಯಾಗುತ್ತಾರೆ ಎಂದರು. 

ಇದೇ ಸಂದರ್ಭದಲ್ಲಿ ಅಂಜುಮನ್ ಕಮೀಟಿ ಅಧ್ಯಕ್ಷ ಜಾಕೀರಹುಸೇನ್ ನದಾಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೌಲಾನಾ ಮುಪ್ತಿ ಲುಕ್ಮಾನ ಕಾಸ್ಮಿ ಸಾನ್ನಿಧ್ಯವಹಿಸಿದ್ದರು. ಹಾಜಿ ಇಲಾಹಿ ಕಂಗನೊಳ್ಳಿ, ರಫಿಕ ಬಾರಿಗಡ್ಡಿ, ಕಾಸಿಮ್‌ಸಾಬ ಅವಟಿ, ದಿಲಾವರ ಶಿರೋಳ, ನರಸಿಂಹ ಕಲ್ಲೋಳಿ, ಸಿ.ಜಿ.ಕಡಕೋಳ, ರಮೇಶ ಅವಟಿ, ಯಾಸಿನ ಲೋದಿ, ಖಿಜರ ಪೆಂಡಾರಿ, ಇರಪಾನ ಪಠಾಣ, ಮಹಮ್ಮದಮುಸಾ ಮುಲ್ಲಾ, ನಿಜಾಮುದ್ದಿನ್ ಕುದಾವನ್, ಸಿಕಂದರ ಶೇಖ, ಇಪ್ತಿಯಾರ ಅವಟಿ, ಸಲಿಂ ನದಾಫ್ ಇದ್ದರು. ಎಂ.ಎಂ.ಜಂಗಲಿ ಸ್ವಾಗತಿಸಿದರು, ಡಿ.ವಿ.ಹಿರೇಮಠ, ಉಸ್ಮಾನಸಾಬ ಮಕಾನದಾರ ನಿರೂಪಿಸಿದರು. ಸಾಜೀದ ಇನಾಮದಾರ ವಂದಿಸಿದರು.ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಕೆಪಿಸಿಸಿ ಉಪಾಧ್ಯಕ್ಷ ಆನಂದ ನ್ಯಾಮಗೌಡ ಉದ್ಘಾಟಿಸಿದರು. 


ಸುದ್ದಿ ಓದಿ