ಜವಳಿ ನೀತಿ ಯೋಜನೆಯಡಿ ಉದ್ಯಮಶೀಲತಾಭಿವೃದ್ಧಿ ತರಬೇತಿ

ಜವಳಿ ನೀತಿ ಯೋಜನೆಯಡಿ ಉದ್ಯಮಶೀಲತಾಭಿವೃದ್ಧಿ ತರಬೇತಿ

ಲೋಕದರ್ಶನ ವರದಿ

ಬಳ್ಳಾರಿ 26: ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿದರ್ೇಶಕರು, ಉತ್ತರ ವಲಯ, ಉಪ ನಿದರ್ೇಶಕರು, ಇವರಿಂದ ನೂತನ ಜವಳಿ ನೀತಿ ಯೋಜನೆಯಡಿ ಜವಳಿ ಉದ್ದಿಮೆಯ ಆಸಕ್ತ ಉದ್ದಿಮೆದಾರರಿಗೆ ಎರಡು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹೋಟೆಲ್ ನಕ್ಷತ್ರ ಸಭಾಂಗಣ ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದು  ದಿ 26 ರಂದು ಉದ್ಗಾಟನೆಯನ್ನು ನೆರವೇರಿಸಲಾಯಿತು. 

ಸದರಿ ಕಾರ್ಯಕ್ರಮವನ್ನು ಶ್ರೀ ವಿ. ಎಸ್ ಉಗ್ರಪ್ಪ ಮಾನ್ಯ ಲೋಕಸಭಾ ಸದಸ್ಯರು ನೆರವೇರಿಸಿದರು ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ಜಿ. ಸೋಮಶೇಖರ್ ರೆಡ್ಡಿ  ಮಾನ್ಯ ಶಾಸಕರು ವಹಿಸಿದ್ದರು. ಪನ್ನಾರಾಜ್ ಚಾಟರ್ೆರ್ಡ ಅಕೌಂಟೆಂಟ್ ಹಾಗೂ ಹೈದ್ರಾಬಾದ್ ಕನರ್ಾಟಕ ಹೋರಾಟ ಸಮಿತಿಯ ಸದಸ್ಯರು, ಡಿ.ಎಲ್. ರಮೇಶ್ ಗೋಪಾಲ್ ಅಧ್ಯಕ್ಷರು, ಶ್ಯಾಮ್ ಸುಂದರ್  ಅಧ್ಯಕ್ಷರು ಭಾಗವಹಿಸಿದ್ದರು. 

ಮಾನ್ಯ ಸಂಸದರು ಮಾತನಾಡಿ ಕನರ್ಾಟಕ ಸಕರ್ಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯಥರ್ಿಗಳಿಗೆ ಜವಳಿ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಕವಾಗಿ ಶೇ. 75 ರಷ್ಟು ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಲಾಭ ಪಡೆದು ಸ್ವಂತ ಉದ್ಯಮಿಗಳಾಗಲು ಕರೆ ನೀಡಿದರು.  ಕಾಂಪೀಟ್ ವಿತ್ ಚೈನಾ ಯೋಜನೆಯಡಿ ಬಳ್ಳಾರಿಯನ್ನು ವಸ್ತ್ರೋದ್ಯಮ ಕ್ಲಸ್ಟರ್ ಆಗಿ ಜಾರಿಗೊಳಿಸುತ್ತಿದ್ದು ಈಗಾಗಲೇ 4 ಪ್ರಖ್ಯಾತ ಗಾಮರ್ೆಂಟ್ಸ ಕಂಪನಿಗಳು ಬಳ್ಳಾರಿಯಲ್ಲಿ ಹೂಡಿಕೆ ಮಾಢಲು ಒಪ್ಪಂದ ಮಾಡಿಕೊಂಡಿರುತ್ತಾರೆ. ಇದರಿಂದಾಗಿ ಸುಮಾರು 1 ಲಕ್ಷ ಉದ್ಯೋಗ ಸ್ರಷ್ಟಿಯಾಗುವ ಗುರಿಯನ್ನು ಹೊಂದಲಾಗಿದೆ. ಉತ್ಕೃಷ್ಟ ಗಾಮರ್ೆಂಟ್ಸ ಗಳನ್ನು ಉತ್ಪಾದಿಸಿ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಉದ್ದಿಮೆದಾರರಿಗೆ ಕರೆ ನೀಡಿದರು.

ಈ ತರಬೇತಿಯಲ್ಲಿ ಜವಳಿ ಇಲಾಖೆಯಿಂದ ದೊರೆಯುವ ಸಹಾಯ ಸೌಲತ್ತುಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನಾ ವರದಿ ತಯಾರಿಸುವ ಕುರಿತು ಶ್ರೀ ಪನ್ನಾರಜ್ ರವರು ಮಾಹಿತಿ ನೀಡಿದರು.  ಉದ್ಯಮ ನಿರ್ವಹಣೆ ಕುರಿತು ಡಿ.ಎಲ್. ರಮೇಶ್ ಗೋಪಾಲ್ ಮಾಹಿತಿ ನೀಡಿದರು.  ಬ್ಯಾಂಕುಗಳಿಂದ ನೀಡಲಾಗುವ ಸೌಲಭ್ಯಗಳ ಕುರಿತು ಶ್ರೀ ಪಿ.ವಿ ರಾವ್ ಎಲ್.ಡಿ.ಎಮ್. ಇವರು ಮಾಹಿತಿ ನೀಡಿದರು ಮತ್ತು ಸ್ವಂತ ಉದ್ದಿಮೆ ಪ್ರಾರಂಭಿಸಲು  ಪ್ರೇರಣೆ ಕುರಿತು   ಸ್ಥಳೀಯ ಸಂಪನ್ಮೂಲಗಳ ಕುರಿತು ನುರಿತವರಿಂದ ಉಪನ್ಯಾಸ ನೀಡಲಾಯಿತು.


ಸುದ್ದಿ ಓದಿ